ಸುದ್ದಿಮೂಲ ವಾರ್ತೆ
ಬೆಂಗಳೂರು,ಸೆ.4:ಸಿಲಿಕಾನ್ ನಗರಿ ಬೆಂಗಳೂರಿನಲ್ಲಿ ದಕ್ಷಿಣ ಭಾರತದ ಅತ್ಯಂತ ವರ್ಣ ರಂಜಿತ ‘ಏಷ್ಯಾ ವೆಡ್ಡಿಂಗ್ ಶೋ -2023’ ನಗರದ ನಾಗರಿಕರನ್ನು ಸಮ್ಮೋಹನಗೊಳಿಸಲು ಸಜ್ಜಾಗಿದೆ.
ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಸೆಪ್ಟೆಂಬರ್ 8-9-10 ರ ವರೆಗೆ 3ದಿನಗಳು ಬೃಹತ್ ವೆಡ್ಡಿಂಗ್ ಮೇಳ ಬೆಳಿಗ್ಗೆ 10.30 ರಿಂದ ರಾತ್ರಿ 8 ಗಂಟೆವರೆಗೆ ಪ್ರದರ್ಶನ ನಗರದ ನಾಗರಿಕರನ್ನು ಸೆಳೆಯಲಿದೆ.
ಮದುವೆ ಹಂಗಾಮ ಆರಂಭವಾಗಿರುವ ಸಂದರ್ಭದಲ್ಲೇ ವಧುವಿನ ಆಭರಣ, ಉಡುಪು, ಮದುವೆಗೆ ಅಗತ್ಯವಾಗಿರುವ ಎಲ್ಲವವನ್ನೂ ಒಂದೇ ವೇದಿಕೆಗೆ ತರಲಾಗುತ್ತಿದೆ. ಇದು ಅತ್ಯಂತ ವಿಶೇಷವಾದ ಮೇಳವಾಗಿದ್ದು, ಈ ವಿಶೇಷ ಮತ್ತು ವಿನೂತನ ಮೇಳವನ್ನು ಮಹಿಳಾ ಸಿಬ್ಬಂದಿ ಉದ್ಘಾಟಿಸಲಿದ್ದಾರೆ.
ಸಾಂಪ್ರದಾಯಿಕ ವಸ್ತ್ರಾಭರಣಗಳು, ವಧುವಿಗೆ ಬೇಕಾಗಿರುವ ಕಾಂಚಿಪುರಂ, ಬನಾರಸ್ ಮತ್ತಿತರ ರೇಷ್ಮೇ ಸೀರೆಗಳು, ಅಮೂಲ್ಯ ಕಲ್ಲುಗಳು ಮತ್ತು ಹರಳುಗಳು, ಮದುವೆ ಆಯೋಜಕರ ನೆರವು, ಮದುವೆ ಉಡುಗೊರೆಗಳು ಹೀಗೆ ನಾನಾ ರೀತಿಯ ಸೇವೆ ಮತ್ತು ಸೌಕರ್ಯಗಳು ದೊರೆಯಲಿವೆ.
ಎಲ್ಲಾ ಆಯಾಮಗಳಲ್ಲೂ ಮದುವೆಗೆ ಬೇಕಾಗಿರುವ, ಮದುವೆಯನ್ನು ಅತ್ಯಂತ ಸುಗಮ ಮತ್ತು ಸುಲಲಿತಗೊಳಿಸುವ ವಿಶಿಷ್ಟವಾದ ಮೇಳ ಇದಾಗಿದೆ. ದೇಶದ ಪ್ರಮುಖ ಆಭರಣ ಮಾರಾಟಗಾರರಿಗೂ ಇದು ವೇದಿಕೆಯಾಗಿದ್ದು, ಮದುವೆಗೆ ಅಗತ್ಯವಾಗಿರುವ ಬ್ರ್ಯಾಂಡ್ ಗಳನ್ನು ಮೇಳದ ಮೆರಗು ಹೆಚ್ಚಿಸಲಿದೆ.
ಜೊತೆಗೆ ಐಶಾರಾಮಿ ಬ್ರ್ಯಾಂಡ್ ಗಳು ಸಹ ಇರಲಿದೆ. ರಾಜಾಜಿನಗರದ ಶ್ರೀ ಗಣೇಶ್ ಡೈಮಂಡ್ ಅಂಡ್ ಜುವೆಲ್ಲರಿ, ಸಮ್ಯಕ್, ಪೋಥಿಸ್, ಕೀರ್ತಿಲಾಲ್, ಪಿಎಂಜೆ ಜುವೆಲ್ಲರ್ಸ್, ನವರತನ್ ಜುವೆಲ್ಲರ್ಸ್, ನಿಖಾಹಾರ್ ಜುವೆಲ್ಸ್, ಎಂ.ಪಿ. ಜುವೆಲ್ಲರ್ಸ್, ನಿರ್ಮಲ್ ಜುವೆಲ್ಲರ್ಸ್, ರಾಯಲ್ ಆರ್ಕಿಡ್ಸ್, ಲೌಕ್ಯಾ, ಬೆಂಗಳೂರಿನ ಗಿರಿರಾಜ್, ಸಿಂಹ ಜುವೆಲ್ಲರ್ಸ್, ಬೇಗಮ್ಸ್ ಬೈ ರಷ್ಮಿ, ಪನ್ನಾ ಜುವೆಲ್ಲರ್ಸ್, ಆಕಾರ್ ಕ್ರಿಯೇಷನ್ಸ್, ವಂಡರ್ ಡೈಮಂಡ್ಸ್, ಶೈನಿ ಜುವೆಲ್, ಸಪ್ತೋಶಿ ಜುವೆಲ್ಸ್, ರಾಜಾ ಟೈಮ್ಲೆಸ್ ಮತ್ತಿತರೆ ಆಭರಣ ಮಾರಾಟಗಾರರು ಮೇಳದಲ್ಲಿ ಭಾಗವಹಿಸಲಿದ್ದಾರೆ.
ಹೆಚ್ಚಿನ ಮಾಹಿತಿಗೆ 9620461919 ಅಥವಾ ಇ ಮೇಲ್ ವಿಳಾಸ [email protected] ಇಲ್ಲವೆ ಇಲ್ಲಿಗೆ ಭೇಟಿ ಕೊಡಿ https://hrsmedia.ಇಂ