ಸುದ್ದಿಮೂರ್ತಿ
ಬೆಂಗಳೂರು,ಸೆ.04: ಗಣಪತಿ ಮೂರ್ತಿಗಳ ಮಾರಾಟದ ವ್ಯಾಪಾರ ತಗ್ಗಿದ ಪರಿಣಾಮ ಬಾಡಿಗೆ ಗಣಪತಿಗಳ ವ್ಯಾಪಾರ ಸ್ವಲ್ಪ ಜಾಸ್ತಿಯಾಗಿದೆ ಎಂದು ಗಣಪತಿ ಮೂರ್ತಿಗಳ ತಯಾರಕರು ತಿಳಿಸಿದರು.
ಗಣಪತಿ ಹಬ್ಬದ ಸಂದರ್ಭದಲ್ಲಿ ವ್ಯಾಪಾರವಾಗುತ್ತಿದ್ದ ವ್ಯವಹಾರವು ಕೊರೋನ ಸಂಕಷ್ಟದ ನಂತರದ ವರ್ಷಗಳಲ್ಲಿ ಗಣನೀಯ 20 ರಿಂದ 30ರಷ್ಟು ಇಳಿಕೆ ಕಂಡಿತ್ತು. ಇದಕ್ಕೆ ಹಲವಾರು ಕಾರಣಗಳೂ ಇದೆ ಎನ್ನುತ್ತಾರೆ ಗಣಪತಿ ತಯಾರಕರು.
ಸುಮಾರು ಪಿ ಓ ಪಿ ನಿರ್ಮಿತ 3 ರಿಂದ 8 ಅಡಿ ಗಣಪತಿ ಮೂರ್ತಿಗಳನ್ನು ಬಾಡಿಗೆಗೆ ಕೊಡಲಾಗುವುದು ಇದರಲ್ಲಿ 8 ಅಡಿ ಗಣಪತಿ ಮೂರ್ತಿಗೆ 80000 ಮುಂಗಡ ಹಣ ಮತ್ತು ಪ್ರತಿ ದಿನಕ್ಕೆ 20000 ಸಾವಿರ ಬಾಡಿಗೆಯಂತೆ ಕನಿಷ್ಠ 3 ದಿನಗಳವರೆಗೆ ಅನ್ವಯವಾಗುವಂತೆ ಬಾಡಿಗೆಗೆ ಕೊಡುತ್ತಾರೆ . ಇದರ ಜೊತೆ ಮಣ್ಣಿನಿಂದ ತಯಾರಿಸಿದ ಚಿಕ್ಕ ಗೌರಿ ಗಣೇಶ ಮೂರ್ತಿಗಳನ್ನು ಉಚಿತವಾಗೇ ಕೊಡಲಾಗುತ್ತದೆ ಎಂದು ತಿಳಿಸಿದರು.
ಪಿ ಓ ಪಿ ನಿರ್ಮಿತ ಗಣೇಶ ಮೂರ್ತಿ ತಯಾರಿಸಲು ಸರ್ಕಾರ ಅವಕಾಶ ನಿರಾಕರಿಸಿದ್ದು ಬಹು ದೊಡ್ಡ ಹೊಡೆತ ಎನ್ನುವ ತಯಾರಕರು, ನಗರದ ಬಹುತೇಕ ಬಾಗಗಳಲ್ಲಿ ದೊಡ್ಡ ಗಣಪತಿಗಳಿಗೇ ಬೇಡಿಕೆ ಇರುವುದು ಸಹಜ. ಆದರೂ ಅದು ಜೇಡಿ ಮಣ್ಣಿಂದ ದೊಡ್ಡ ಗಣಪತಿ ತಯಾರಿಕೆ ಮಾಡಲು ಸಾಧ್ಯವಿಲ್ಲ. ಜೊತೆಗೆ ಅಷ್ಟು ಭಾರವಾದ ಮೂರ್ತಿಯನ್ನು ಸಾಗಿಸುವುದೂ ಸವಾಲಿನ ಕೆಲಸ ಇದೂ ಅಲ್ಲದೆ ನಗರ ಪೊಲೀಸ್ ಕಚೇರಿ ಕೂಡ ಮೊದಲಿನ ರೀತಿ ನಗರದಲ್ಲಿ ಎಲ್ಲೆಂದರಲ್ಲಿ ಗಣೇಶ ಮೂರ್ತಿ ಕೂರಿಸಲು ಅನುಮತಿ ನಿರಾಕರಿಸಿರುವುದು ಗಣೇಶ ಮೂರ್ತಿ ಕೊಂಡು ಕೊಳ್ಳುವವರ ಸಂಖ್ಯೆಯೂ ಕಡಿಮೆಯಾಗಿದ್ದೊಂದು ದೊಡ್ಡ ಹೊಡೆತ ಎನ್ನುತ್ತಾರೆ.
ಹೀಗಾಗಿ, ಈ ರೀತಿ ಬಾಡಿಗೆ ಕೊಡುವುದು ಹಿಂದಿನಿಂದ ನಡೆದುಕೊಂಡು ಬಂದದ್ದಾದರೂ ಈಗ ಇದರ ಬೇಡಿಕೆ ಸ್ವಲ್ಪ ಹೆಚ್ಚಾಗಿದೆ ಎಂದು ಹೇಳಿದರು.