ತಿಪಟೂರು,ಸೆ.5: ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ 136ನೇ ಜನ್ಮ ಜಯಂತಿ ಮತ್ತು ಶಿಕ್ಷಕರ ದಿನಾಚರಣೆಯನ್ನು ತಿಪಟೂರಿನಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು
ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಿಂದ ನೂರಾರು ಮಕ್ಕಳು ಕುಂಭ ಮೇಳದ ಮುಖಾಂತರ ಶಾಸಕರ ಅಧ್ಯಕ್ಷತೆಯಲ್ಲಿ ಒಕ್ಕಲಿಗರ ಸಮುದಾಯ ಭವನ ವರೆಗೂ ಜಾಥಾ ನಡೆಸಿ ಒಕ್ಕಲಿಗರ ಸಮುದಾಯ ಭವನದಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಿದರು
ಶಾಸಕ ಷಡಕ್ಷರಿ ಮಾತನಾಡಿ, ಸಮಾಜ ಬದಲಾವಣೆಯಾಗಲು ಉತ್ತಮ ಮಾರ್ಗದರ್ಶಕರಾಗಲು ಶಿಕ್ಷಕರ ಪಾತ್ರ ಬಹುಮುಖ್ಯ ವಾಗಿದೆ. ಶಿಕ್ಷಕ ವೃತ್ತಿ ದೇವರು ಕೊಟ್ಟ ವರ. ಚಿಕ್ಕ ವಯಸ್ಸಿನಿಂದ ಅವನು ಬೆಳೆದು ದೊಡ್ಡ ಅಧಿಕಾರಿಯಾಗಲಿ, ಸಮಾಜ ಸುಧಾರಕನಾಗಲಿ, ರಾಜಕೀಯ ವ್ಯಕ್ತಿಯಾಗಲಿ ಏನೇ ಯಾವುದೇ ರೀತಿ ಸ್ಥಾನಮಾನ ಮತ್ತು ಅವರ ಏಳಿಗೆ ಮಾಡುವಲ್ಲಿ ಶಿಕ್ಷಕನ ಪಾತ್ರ ಅತಿ ಮುಖ್ಯವಾಗಿದೆ. ಶಿಕ್ಷಕರ ದಿನಾಚರಣೆಯಂದು ಶಿಕ್ಷಕರು ಅತಿ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು
ಚಟ್ನಳ್ಳಿ ಮಹೇಶ್ ಮಾತನಾಡಿ, ಶಿಕ್ಷಕರು ಹುಟ್ಟಿದ್ದಾಗಿನಿಂದ ಸಾಯುವವರೆಗೂ ಉತ್ತಮ ಸೇವೆ ಸಲ್ಲಿಸಿ ನಮ್ಮ ಮಾಷ್ಟ್ರು ನಮ್ಮ ಮಾಷ್ಟ್ರು ಎಂದು ಅಡ್ಡ ಹೆಸರು ಗಳಿಸಿಕೊಂಡು ಉತ್ತಮ ಸಾಧನೆ ಮಾಡುವಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸಿರುತ್ತಾರೆ ಎಂದು ಅಭಿಪ್ರಾಯಪಟ್ಟರು.