ಸುದ್ದಿಮೂಲ ವಾರ್ತೆ
ಹೊಸಕೋಟೆ, ಸೆ. 6 :ತಾಲೂಕಿನ ನಂದಗುಡಿ ಹೋಬಳಿಯ ತಾವರೆಕೆರೆ ಗ್ರಾಮ ಪಂಚಾಯಿತಿಯ ಗಂಗಾಪುರ ಗ್ರಾಮದಲ್ಲಿ ನಡೆದ ಸಪಲಾಂಭ ದೇವಿ ದೇವಾಲಯ ಜೀಣೋದ್ಧಾರ ಮತ್ತು ವಿಮಾನ ಗೋಪುರ ಕಳಶ ಪ್ರತಿಷ್ಠಪನಾ ಮಹೋತ್ಸವವನ್ನು ಶಾಸಕ ಶರತ್ ಬಚ್ಚೇಗೌಡ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಪ್ರತಿಯೊಬ್ಬರು ನ್ಯಾಯ, ನೀತಿ, ಧರ್ಮದ ಹಾದಿಯಲ್ಲಿ ನಡೆದು ಜೀವನ ಸಾಗಿಸುವಂತಾಗಬೇಕು. ಆಧುನಿಕತೆ ಬೆಳೆದಂತೆ ಮೌಢ್ಯ ಇಂದಿನ ಯುವ ಸಮುದಾಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ದೇವರ ಮೇಲಿನ ನಂಬಿಕೆ ಕಳೆದುಕೊಂಡಿದ್ದಾರೆ ಎಂದರು.
ದೇವಾಲಯಗಳಲ್ಲಿ ಆಡಂಬರಬೇಕಿಲ್ಲ. ಮನುಷ್ಯನಲ್ಲಿ ಮಾನವೀಯ ಸದ್ಗುಣಗಳನ್ನು ಬೆಳೆಸುವ ಪುಣ್ಯ ಕ್ಷೇತ್ರಗಳು ದೇವಾಲಯ ಆಗಿರುವುದರಿಂದ, ಮನುಷ್ಯನಿಗೆ ಸಮಸ್ಯೆಯಾದರೆ ನೆಮ್ಮದಿ ಸುಖ ಶಾಂತಿ ಪಡೆಯಲು ಎಲ್ಲರೂ ದೇವರ ಮೊರೆ ಹೋಗಬೇಕಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಬಿವಿ.ರಾಜಶೇಖರಗೌಡ, ಎಸ್ಫ್ಸಿಎಸ್ ಅಧ್ಯಕ್ಷ
ಬಿವಿ.ಸತೀಶ್ಗೌಡ, ತಾಪಂ ಮಾಜಿ ಅಧ್ಯಕ್ಷ ಟಿಎಸ್.ರಾಜಶೇಖರ್, ಉದ್ಯಮಿ ಹೆಚ್ಎಂ.ಸುಬ್ಬರಾಜು, ಗ್ರಾ.ಪಂ ಅಧ್ಯಕ್ಷ ಎನ್.ರಮೇಶ್, ಉಪಾಧ್ಯಕ್ಷೆ ಅಸ್ಮತಾಜ್ ಜಿಯಾಉಲ್ಲಾ, ಮಾಜಿ ಅಧ್ಯಕ್ಷರುಗಳಾದ ಎಸ್ಎಚ್ಟಿ.ಮಂಜುನಾಥ್, ಆರ್.ರವಿಕುಮಾರ್, ಬಸವಪ್ರಕಾಶ್,ಗ್ರಾಪಂ ಸದಸ್ಯ ಜಗದೀಶ್, ಪ್ರಿಯಾಂಕ ಡಿ.ರಮೇಶ್, ಮಾಜಿ ಉಪಾಧ್ಯಕ್ಷ ಎಸ್.ಸುಧಾಕರ್ ಮುಖಂಡರಾದ ಗುರುಬಸಪ್ಪ, ಎಂ.ದೇವರಾಜ್, ಹಾಗೂ ಗಂಗಾಪುರದ ಸುತ್ತಮುತ್ತಲಿ ಗ್ರಾಮಗಳ ಭಕ್ತಾದಿಗಳು ಭಾಗವಹಿಸಿದ್ದರು.