ಸುದ್ದಿಮೂಲವಾರ್ತೆ
ಕೊಪ್ಪಳ ಸೆ 07: ಕಳೆದ ಒಂದು ವರ್ಷದ ಹಿಂದೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಭಾರತ ಜೋಡೊ ಯಾತ್ರೆ ಮಾಡಿದ ರಾಹುಲ್ ಗಾಂಧಿಯವರಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್ ಆಧಿಕಾರಕ್ಕೆ ಬರಲು ಕಾರಣವಾಗಿದೆ ಎಂದು ಕೊಪ್ಪಳ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ರಾಜಶೇಖರ ಹಿಟ್ನಾಳ ಹೇಳಿದರು.
ಭಾರತ ಜೋಡೊ ಯಾತ್ರೆಯ ವರ್ಷಾಚರಣೆಯ ಹಿನ್ನೆಲೆಯಲ್ಲಿ ಕೊಪ್ಪಳದಲ್ಲಿ ಜಿಲ್ಲಾ ಕಾಂಗೈನಿಂದ ಪಾದಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದರು. ದೇಶದ ಇತಿಹಾಸದಲ್ಲಿ 3700 ಕಿಮೀ ದೂರ ಪಾದಯಾತ್ರೆ ಮಾಡಿದ್ದು. ಈಗ ದೇಶದಲ್ಲಿ ಇಂಡಿಯಾ ಹೆಸರಿನಲ್ಲಿ ಸಂಘಟನೆಯಲ್ಲಿ ಪಕ್ಷಗಳು ಒಗ್ಗೂಡುತ್ತಿವೆ. ದೇಶವನ್ನು ಭಾಷೆ, ಜಾತಿ ಕೋಮು ಭಾವನೆಯಿಂದ ಜನರ ಮನಸ್ಸನ್ನು ಹಾಳು ಮಾಡುತ್ತಿರುವ ಮಧ್ಯೆ ರಾಹುಲ್ ಗಾಂಧಿ ದೇಶವನ್ನು ಒಗ್ಗೂಡುವ ಕೆಲಸ ಮಾಡಿದ್ದಾರೆ ಎಂದರು.
ಗಡಿಯಾರ ಕಂಬದಿಂದ ಅಶೋಕ ವೃತ್ತದವರೆಗೂ ಮೆರವಣಿಗೆ ನಡೆಸಿ ರಾಹುಲ್ ಗಾಂಧಿ ಪರ ಘೋಷಣೆ ಹಾಕಿದರು.
ಈ ಸಂದರ್ಭದಲ್ಲಿ ಗೂಳಪ್ಪ ಹಲಗೇರಿ, ಶಾಂತಣ್ಣ ಮುದಗಲ್, ನಿಂಗರಾಜ ಕಾಳೆ, ಮಲ್ಲು ಪೂಜಾರ, ಗಂಗಮ್ಮ, ಮಂಜುಳಾ, ಶ್ರೀನಿವಾಸ ಪಂಡಿತ್, ಮೈನುದ್ದಿನ್ ಮುಲ್ಲಾ, ಅಜೀಮ್ ಅತ್ತಾರ್, ರೇಶ್ಮಾ ಖಾಜಾವಲಿ, ಸವಿತಾ ಗೋರಂಟ್ಲಿ, ಅಂಬಿಕಾ ನಾಗರಾಳ, ರಿಯಾಜ್ ಮಂಗಳಾಪೂರ, ಅಶೋಕ ಗೋರಂಟ್ಲಿ, ಶಿಲ್ಪಾ ಭಾಗ್ಯನಗರ, ವಿರುಪಾಕ್ಷಪ್ಪ ಮೋರನಾಳ ಇತರರು.
ಗೈರು ಆದ ನಾಯಕರು: ಭಾರತ ಜೊಡೊ ಯಾತ್ರೆ ವರ್ಷಾಚರಣೆಯ ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲೆಯ ಜನಪ್ರತಿನಿಧಿಗಳು ಗೈರು ಆಗಿದ್ದರು. ಸಚಿವ ಶಿವರಾಜ ತಂಗಡಗಿ, ಶಾಸಕರಾದ ರಾಘವೇಂದ್ರ ಹಿಟ್ನಾಳ, ಬಸವರಾಜ ರಾಯರಡ್ಡಿ, ಮಾಜಿ ಶಾಸಕರು ಗೈರು ಆಗಿದ್ದರು. ಕಾಟಾಚಾರಕ್ಕೆ ಕಾರ್ಯಕ್ರಮ ಆಯೋಜಿಸಿದಂತೆ ಇತ್ತು.