ಸುದ್ದಿಮೂಲ ವಾರ್ತೆ
ಆನೇಕಲ್,ಸೆ.7: ಸನಾತನ ಧರ್ಮದ ಕುರಿತು ಹೇಳಿಕೆ ವಿಚಾರವಾಗಿ ಸ್ಟಾಲಿನ್ ತಲೆ ತಂದುಕೊಟ್ಟವರಿಗೆ 10 ಕೋಟಿ ಬಹುಮಾನ ಮತ್ತು ಕರ್ನಾಟಕ ಸಚಿವ ಪ್ರಿಯಾಂಕ ಖರ್ಗೆ ಗುಂಡಿಕ್ಕಿ ಕೊಳ್ಳಲು ಕರೆ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಅಯೋಧ್ಯ ಪೀಠಾಧಿಪತಿ ತಪಸ್ವಿ ಚಾವಣಿ ಅರ್ಚಕ ಪರಮಹಂಸ ವಿರುದ್ಧ ಇಂದು ಆನೇಕಲ್ ಪ್ರಗತಿಪರ ಸಂಘಟನೆ ಒಕ್ಕೂಟ ವತಿಯಿಂದ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಅಲ್ಲದೆ ಸಚಿವ ಪ್ರಿಯಾಂಕ ಖರ್ಗೆ ಅವರನ್ನು 20 ರಿಂದ 40 ಬಾರಿ ಗುಂಡಿಕ್ಕಿ ಕೊಲ್ಲಿ ಎಂದು ಪ್ರಚೋದನೆಕಾರಿ ಹೇಳಿಕೆಯನ್ನು ನೀಡಿರುವ ಅರ್ಚಕ ಪರಮಹಂಸ ವಿರುದ್ಧ ಅ ದೂರುನಲ್ಲಿ ಉಲ್ಲೇಖ ಮಾಡಲಾಗಿದೆ. ಧರ್ಮದ ಹೆಸರಲ್ಲಿ ಪೀಠಾಧ್ಯಕ್ಷ ಸ್ಥಾನದಲ್ಲಿರುವ ತಪಸ್ವಿ ಚಾವಣಿ ಸಾಮಾನ್ಯ ಜನರಿಗೆ ಕೊಲೆ ಪ್ರಚೋದನೆಯನ್ನ ಮಾಡುತ್ತಿರುವುದು ಕಾನೂನು ವಿರುದ್ಧವಾಗಿದೆ.
ಹಾಗಾಗಿ ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಪ್ರಗತಿಪರ ಒಕ್ಕೂಟದ ದೂರನ್ನು ನೀಡಿದೆ. ಈ ಸ್ವಾಮೀಜಿ ಈ ಹಿಂದೆಯೂ ಕೂಡ ವಿವಾದಿತ ಹೇಳಿಕೆ ನೀಡಿದ್ದರು. ಪಠಾನ್ ಚಿತ್ರಕ್ಕೆ ಸಂಬಂಧಿಸಿದಂತೆ ನಟ ಶಾರುಕ್ ಖಾನ್ ಅವರನ್ನು ಜೀವಂತ ಸುಡುತ್ತೇನೆ ಎಂದು ಹೇಳಿದ್ದರು.