ಸುದ್ದಿಮೂಲ ವಾರ್ತೆ
ಹೊಸಕೋಟೆ,ಸೆ.11: ವಿದ್ಯಾರ್ಥಿ ದಿಸೆಯಲ್ಲಿ ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ಹೊಂದುವ ಮೂಲಕ ನಮ್ಮ ಸುತ್ತಮುತ್ತಲಿನ ಪರಿಸರದ ಸಂರಕ್ಷಣೆ ಮಾಡುವ ಕೆಲಸವಾಗಬೇಕು ಎಂದು ನಿವೃತ್ತ ಐಎಎಸ್ ಅಧಿಕಾರಿ ಕೇದಾರ್ ಹೇಳಿದರು.
ಹೊಸಕೋಟೆ ತಾಲೂಕು ಸೂಲಿಬೆಲೆ ಹೊರವಲಯದ ಮೊರಾರ್ಜಿದೇಸಾಯಿ ವಸತಿ ಶಾಲೆಯಲ್ಲಿ ಡೈಮಲರ್ ಟ್ರಕ್ ಕಂಪನಿ ಹಾಗೂ ಸ್ಪೇರುಲಿನಾ ಪೌಂಡೇಷನ್ ವತಿಯಿಂದ ಹಮ್ಮಿಕೊಂಡಿದ್ದ ಗಿಡ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಂಪನಿ ಮತ್ತು ಸಂಸ್ಥೆಯ ಸಹಯೋಗದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸುಮಾರು 12 ಎಕರೆ ಕಾಯ್ದಿರಿಸಲಾದ ಜಾಗದಲ್ಲಿ ಸುಮಾರು 1500 ಗಿಡಗಳನ್ನು ನಾಟಿ ಮಾಡುವ ಕೆಲಸವಾಗಿದ್ದು ಇದನ್ನು ಸುಮಾರು ವರ್ಷಗಳ ಕಾಲ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆ ಎಂದು ಹೇಳಿದರು.
ವಸತಿ ಶಾಲೆಯ ಪ್ರಾಂಶುಪಾಲ ಬಸವರಾಜ್ ಮಾತನಾಡಿ, ಸಂಸ್ಥೆಯ ಪರಿಸರ ಕಾಳಜಿ ಮೂಲಕ ಭವಿಷ್ಯದ ದೃಷ್ಟಿಕೋನದ ಹಿನ್ನಲೆಯಲ್ಲಿ ಪರಿಸರ ಸಂರಕ್ಷಣೆ ಇಚ್ಚಾಶಕ್ತಿ ಹೊಂದಿರುವುದು ಶ್ಲಾಘನೀಯ ವಿಚಾರ ಇಂತಹ ಸಂಸ್ಥೆಗಳಿಗೆ ಸಾರ್ವಜನಿಕರು ಮತ್ತು ಸ್ಥಳೀಯ ಸಂಸ್ಥೆಗಳು ಪ್ರೋತ್ಸಾಹಿಸಬೇಕು ಎಂದರು.