ಸುದ್ದಿಮೂಲ ವಾರ್ತೆ
ಶಿಡ್ಲಘಟ್ಟ, ಸೆ 11: ತಾಲೂಕಿನ ಆನೂರು ಹಾಗೂ ಮಳ್ಳೂರು ಗ್ರಾ.ಪಂ ವ್ಯಾಪ್ತಿಯ ಕಾಮಗಾರಿ ಸ್ಥಳಕ್ಕೆ ಪಂಚಾಯತ್ ರಾಜ್ ಇಲಾಖೆಯ ಆಯುಕ್ತೆ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಭೇಟಿ ನೀಡಿ ಪರಿಶೀಲಿಸಿದರು.
ಸಂವಾದದಲ್ಲಿ ತಾಂತ್ರಿಕವಾಗಿ ಬಳಸುವ ಕ್ಲ್ಯಾಟ್ ಆಪ್ ಬಳಕೆಯ ವಿಧಾನದ ಬಗ್ಗೆ ಸೇರಿದಂತೆ ಇತರ ಉಪಯೋಗಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಅದೇ ರೀತಿಯಾಗಿ ನೈಸರ್ಗಿಕವಾಗಿ ಹಾಗೂ ಪ್ರಾಯೋಜಿಕವಾಗಿ ಯಾವ ರೀತಿ ಪಂಚಾಯಿತಿ ಅಭಿವೃದ್ಧಿಗೆ ವಹಿಸಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದರು.
ನಂತರ ಆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಗಿಡನಾಟಿ ಮಾಡಿರುವ ಸ್ಧಳ ವೀಕ್ಷಿಸಿದರು. ಹಿತ್ತಲಹಳ್ಳಿ ಹಾಗೂ ಬೆಳ್ಳೂಟಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಾಲಾಭಿವೃದ್ಧಿ, ಶುದ್ಧ ಕುಡಿಯುವ ನೀರಿನ ಘಟಕವನ್ನು ವೀಕ್ಷಿಸಿದರು.
ಪರಿಸರ ಗ್ರಾಮಾಭಿವೃದ್ಧಿ ಸಮಿತಿಯವರು ಹಾಗೂ ಎಫ್.ಇ.ಎಸ್ ಸಂಸ್ಥೆಯವರ ಹೊಂದಾಣಿಕೆಯಿಂದ ಗ್ರಾಮಗಳ ಅಭಿವೃದ್ಧಿಯ ವಿಧಾನಗಳ ಬಗ್ಗೆ ಜೊತೆ ಚರ್ಚಿಸಲಾಯಿತು, ನಂತರ ಮಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುತ್ತೂರು ಗ್ರಾಮದ ಬಳಿ ಇರುವ ಬೂದು ನೀರು ನಿರ್ವಹಣೆ ಕಾಮಗಾರಿಯನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ತಾಪಂ ಇಓ ಜಿ.ಮುನಿರಾಜ, ಆನೂರು ಪಂಚಾಯಿತಿ ಅಧ್ಯಕ್ಷ ಹಿತ್ತಲಹಳ್ಳಿ ವೆಂಕಟೇಶ್, ಉಪಾಧ್ಯಕ್ಷೆ ನೇತ್ರಾವತಿ, ಸದಸ್ಯರಾದ ಬೋದಗೂರು ವಿಶ್ವಾಸ್, ಆನೂರು ವಿಜೇಯೇಂದ್ರ, ಸಂತೋಷ ಬೆಳ್ಳೂಟಿ, ಜಪ್ತಿಹೊಸಹಳ್ಳಿ ಪ್ರಕಾಶ್, ಪಿಡಿಓ ಕಾತ್ಯಾಯಿನಿ, ಎಫ್.ಇ.ಎಸ್ ಸಂಸ್ಥೆಯ ರಮೇಶ್, ಮಳ್ಳೂರು ಪಂಚಾಯಿತಿ ಪಿಡಿಓ ಕೃಷ್ಣಪ್ಪ, ತಾಂತ್ರಿಕ ಸಿಬ್ಬಂದಿ ವರ್ಗದವರು, ನರೇಗಾ ಸಿಬ್ಬಂದಿ ವರ್ಗದವರು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.