ಸುದ್ದಿಮೂಲ ವಾರ್ತೆ
ಬೆಂಗಳೂರು, ಸೆ, 12; ಸಾಕು ಪ್ರಾಣಿ ಪ್ರಿಯರಿಂದ ಸಾಕು ಪ್ರಾಣಿಗಳ ಸಮ್ಮಿಲದ ಅನನ್ಯ ಕಾರ್ಯಕ್ರಮ “ಪೆಟ್ ಗಲಾ” ಪ್ರದರ್ಶನ ಜಯಮಹಲ್ ಅರಮನೆಯಲ್ಲಿ ಇದೇ 17 ರಂದು ಅಯೋಜಿಸಲಾಗಿದೆ.
“ಅಂತರರಾಷ್ಟ್ರೀಯ ಯುಟಿಲಿಟಿ ಡಾಗ್ ಸ್ಪೋರ್ಟ್ಸ್ ಪ್ರದರ್ಶನದಲ್ಲಿ ಆಸ್ಟ್ರೇಲಿಯಾದ ಅಪರೂಪದ ಇಗುವಾಗ, ವಿವಿಧ ನಾಯಿಗಳು, ಗಿಳಿ, 200 ಕ್ಕೂ ಹೆಚ್ಚು ಬೆಕ್ಕುಗಳು ಅದರಲ್ಲಿ ವಿಶೇವಾಗಿ ಪರ್ಷಿಯನ್, ಮೈನೆ ಕೂನ್, ಬೆಂಗಾಲ್ ಮತ್ತು ಭಾರತೀಯ ತಳಿ ಇಂಡಿಮೌ ಮತ್ತಿತರೆ ತಳಿಗಳ ಬೆಕ್ಕುಗಳು ಭಾಗವಹಿಸಲಿವೆ.
ಬೆಳಿಗ್ಗೆ 11 ರಿಂದ ಸಂಜೆ 7 ಗಂಟೆವರೆಗೆ ಇಬ್ಬರು ಅಂತರರಾಷ್ಟ್ರೀಯ ತೀರ್ಪುಗಾರರ ಸಮ್ಮುಖದಲ್ಲಿ ಅರಮನೆ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಾಣಿ ಪ್ರಿಯರನ್ನು ಈ ಸ್ಪರ್ಧೆ ಆಕರ್ಷಿಸಲಿದೆ ಎಂದು ಸಂಘಟಕ ಡಾ. ಪವನ್ ಕುಮಾರ್ ಮಾಹಿತಿ ನೀಡಿದರು.
ಸಾಕು ನಾಯಿಗಳ ಚುರುಕುತನ ವಲಯ, ಪೂಲ್ ಪಾರ್ಟಿ, ಪೆಟ್ ಮತ್ತು ಪ್ಯಾಷನ್ ಶೋ, ಸಂವಾದಾತ್ಮಕ ಆಟಗಳು, ಲೈವ್ ಸಂಗೀತ ಹೀಗೆ ಅನೇಕ ಆಸಕ್ತಿಕರ ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ ಪ್ರಾಣಿಗಳನ್ನು ದತ್ತು ಸ್ವೀಕರಿಸುವ ಅಭಿಯಾನವನ್ನು ಸಹ ಏರ್ಪಡಿಸಲಾಗಿದೆ. ಸಾಕು ಪ್ರಾಣಿಗಳ ಬಗ್ಗೆ ಅರಿವು ಮೂಡಿಸುವ, ದತ್ತು ತೆಗೆದುಕೊಂಡು ಸಾಕುವ, ಆರೈಕೆ ಮಾಡುವ ಕುರಿತಂತೆಯೂ ಅರಿವು ಮೂಡಿಸಲಾಗುತ್ತಿದೆ ಎಂದರು.