ಸುದ್ದಿಮೂಲ ವಾರ್ತೆ
ಹೊಸಕೋಟೆ, ಸೆ. 14 : ಆಯುರ್ವೇದ ಚಿಕಿತ್ಸಯು ಕೇವಲ ಚಿಕಿತ್ಸೆಯಲ್ಲಅದು ಜೀವನ ಪದ್ಧತಿಯೆಂದು ಯುವ ಬ್ರಿಗೇಡ್ ನ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಂಚಾಲಕ ಆನಂದ್ ಮರಿಗೌಡ ತಿಳಿಸಿದರು.
ಹೊಸಕೋಟೆ ತಾಲೂಕಿನ ಕೆಂಬಳಿಗಾನಹಳ್ಳಿ ಯುವ ಬ್ರಿಗೇಡ್ ಸೋದರಿ ನಿವೇದಿತಾ ಪ್ರತಿಷ್ಟಾನ ಮತ್ತುಆಯುರ್ವೇದ ಪ್ರತಿಷ್ಠಾನ ಆಸ್ಪತ್ರೆಯ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಆಯುರ್ವೇದ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಆಯುರ್ವೇದ ಚಿಕಿತ್ಸೆಎಂಬುದು ನಮ್ಮ ಸನಾತನ ಕಾಲದಿಂದಲು ಬಳಕೆಯಲ್ಲಿದ್ದು ವಿಶ್ವದ ಪ್ರಪ್ರಥಮ ಆರೋಗ್ಯ ಚಿಕಿತ್ಸೆಯಾಗಿದ್ದು ಇದರಿಂದ ಅಡ್ಡಪರಿಣಾಮಗಳು ಇಲ್ಲದೆ ಇರುವ ಕಾರಣ ಮನೆಯ ಸುತ್ತಮುತ್ತಲಿನ ಹಾಗೂ ಅರಣ್ಯಗಳಲ್ಲಿ ದೊರೆಯುವ ಗಿಡಮೂಲಿಕೆಗಳಿಂದ ತಯಾರಿಸಿದ ಔಷಧಿಯನ್ನು ಅನುಸರಿಸಬೇಕು ಎಂದು ಸಲಹೆ ನೀಡಿದರು.
ಆಯುರ್ವೇದ ಪ್ರತಿಷ್ಠಾನದ ಮುಖ್ಯ ವೈದ್ಯೆ ಭಾರತಿ ಎಸ್. ಮಳಿಗೆ ಮಾತನಾಡಿ, ಆಯುರ್ವೇದ ಚಿಕಿತ್ಸೆಎಂಬುದು ಜೀವನ ಪದ್ದತಿ ಹಾಗೂ ಆಹಾರದಲ್ಲೆಔಷಧಿ ಮತ್ತು ರೋಗದ ಮೂಲವನ್ನರಿತು ಮನಸ್ಸಿಗೂ ಮತ್ತು ದೇಹಕ್ಕೂ ನೀಡುವ ಚಿಕಿತ್ಸಾ ಪದ್ಧತಿ ಎಂದರು.
ಈ ಸಂಧರ್ಭದಲ್ಲಿಗ್ರಾಪಂ ಸದಸ್ಯರಾದ ಭಾಗ್ಯಮ್ಮ ,ಬೂಸ ನಾಗರಾಜ್, ಮುಖಂಡರಾದ ಅಂಬುಕುಮಾರ್, ಸೋದರಿ ನಿವೇದಿತಾ, ಪ್ರತಿಷ್ಠಾನದ ನಾಗಲಕ್ಷ್ಮಿ ಸೇರಿದಂತೆ ಇತರರು ಇದ್ದರು.