ಸುದ್ದಿಮೂಲ ವಾರ್ತೆ
ಮೈಸೂರು, ಸೆ.15: ಸಾಂಸ್ಕೃತಿಕ ನಗರಿ ಮೈಸೂರು ದಸರಾ ಹಬ್ಬಕ್ಕೆ ಸಜ್ಜಾಗುತ್ತಿದ್ದು, ಶುಕ್ರವಾರ ನವರಾತ್ರಿ ಆಚರಣೆಯ ವೇಳಾಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿದೆ. ಆ ಪ್ರಕಾರ, ಮುಂದಿನ ಅಕ್ಟೋಬರ್ 15 ರಂದು ( ಭಾನುವಾರ) ಶರನ್ನವರಾತ್ರಿ ಪ್ರಾರಂಭವಾಗಲಿದ್ದು, ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ಪೂಜೆ ಬೆಳಿಗ್ಗೆ 10.15 ರಿಂದ 10.36 ಶುಭ ವೃಶ್ಚಿಕ ಲಗ್ನದಲ್ಲಿ ಪೂಜೆ ಮಾಡುವವ ಮೂಲಕಮೈಸೂರು ದಸರಾಗೆ ಚಾಲನೆ ಸಿಗಲಿದೆ.
ನಂತರ ಒಂಬತ್ತು ದಿನಗಳ ಕಾಲ ಅರಮನೆಯಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿದೆ. ಅಕ್ಟೋಬರ್ 23 ರಂದು ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ನಡೆಯಲಿದೆ. ಅ. 25 ವಿಜಯದಶಮಿಯಂದು ಮಧ್ಯಾಹ್ನ 1.46 ರಿಂದ 2:08 ಮಕರ ಲಗ್ನದಲ್ಲಿ ಮುಖ್ಯಮಂತ್ರಿಯವರು ನಂದೀ ಧ್ವಜ ಪೂಜೆ ನೆರವೇರಿಸಲಿದ್ದಾರೆ. ಬಳಿಕ ಮಧ್ಯಾಹ್ನ 4.40 ರಿಂದ 5.00ರ ಶುಭ ಮೀನ ಲಗ್ನದಲ್ಲಿ ಮುಖ್ಯಮಂತ್ರಿಗಳು ಮತ್ತು ಗಣ್ಯಾತಿಗಣ್ಯರಿಂದ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆಗೆ ಚಾಲನೆ ನೀಡುವರು.
ಮೈಸೂರು ದಸರಾ-2023ರ ವೇಳಾಪಟ್ಟಿ ವಿವರ: .
* ಅ. 15 –ಭಾನುವಾರ ಶರನ್ನವರಾತ್ರಿ ಪ್ರಾರಂಭ.,ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ಪೂಜೆ, ಅರಮನೆ ಪೂಜೆಗಳು: ಸಾಯಂಕಾಲ 6.30 ರಿಂದ 7.15ಶುಭಮೇಷ ಲಗ್ನದಲ್ಲಿ ಆರಂಭ.
* ಅ.20- ಶುಕ್ರವಾರ: ಕಾತ್ಯಾಯಿನೀ – ಸರಸ್ವತಿ ಪೂಜೆ (ಮೂಲ ನಕ್ಷತ್ರದಲ್ಲಿ ಸರಸ್ವತಿ ಪೂಜೆ ಪ್ರಾರಂಭ ಮಾಡಿ ಶ್ರವಣ ನಕ್ಷತ್ರದ ದಿನ ಅಂದರೆ 24-10-2023 ರ ಮಂಗಳವಾರ ವಿಸರ್ಜನೆ)
* ಅ.21 ಶನಿವಾರ : ಕಾಳರಾತ್ರಿ, ಮಹಿಷಾಸುರ ಸಂಹಾರ.
* ಅ.23 ಸೋಮವಾರ : ಆಯುಧ ಪೂಜೆ.
* ಅ. 25. ಮಂಗಳವಾರ : ವಿಜಯದಶಮಿ,ಮಧ್ಯಾಹ್ನ 1.46 ರಿಂದ 2:08 ಮಕರ ಲಗ್ನದಲ್ಲಿ ಮುಖ್ಯಮಂತ್ರಿಯವರಿಂದ ನಂದೀ ಧ್ವಜ ಪೂಜೆ, ಮಧ್ಯಾಹ್ನ 4.40 ರಿಂದ 5.00ರ ಶುಭ ಮೀನ ಲಗ್ನದಲ್ಲಿ ಮಾನ್ಯ ಮುಖ್ಯಮಂತ್ರಿಯವರಿಂದ ಮತ್ತು ಗಣ್ಯಾತಿಗಣ್ಯರಿಂದ ಪುಷ್ಪಾರ್ಚನೆ. ನಂತರ ಜಂಬೂ ಸವಾರಿ” ಪ್ರಾರಂಭ..
* ಅ.26. ಭಾನುವಾರ : ಚಾಮುಂಡಿ ಬೆಟ್ಟದಲ್ಲಿ ಶ್ರೀಚಾಮುಂಡೇಶ್ವರಿ ರಥೋತ್ಸವ.