ಸುದ್ದಿಮೂಲ ವಾರ್ತೆ
ಕೊಪ್ಪಳ ಸೆ 17: ಬಿಜೆಪಿಯೊಳಗೆ ಸಿಎಂ ಸೇರಿ ಎಲ್ಲಾ ಸ್ಥಾನಗಳು ಸೇಲ್ ಆಗಿವೆ. ಇದೇ ವೇಳೆವಿರೋಧ ಪಕ್ಷಕ್ಕೆ ಇನ್ನೂ ಟೆಂಡರ್ ಆಗಿಲ್ಲ ಈಗ ಟೆಂಡರ್ ಕರೆದಿದ್ದಾರೆ ಟೆಂಡರ್ ಜೆಡಿಎಸ್ ನವರು ಬಂದು ಕೂಗಬಹುದು ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.
ಅವರು ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.ಬಿಜೆಪಿಯಲ್ಲಿ ಎಲ್ಲಾ ಸೀಟುಗಳು ಮಾರಾಟವಾಗಿವೆ.ಕನಕಗಿರಿಯಲ್ಲಿಯೂ ಹಣ ನೀಡುದ್ದರೆ ಸಿಸಿಬಿ ಪೊಲೀಸರು ತನಿಖೆಯಾಗಲಿ. ಬಿಜೆಪಿಯಲ್ಲಿ ಎಂ ಪಿ ಟಿಕೆಟ್ ಇದೇ ರೀತಿ ಸೇಲ್ ಆಗಬಹುದು.5 ಕೋಟಿ ಎಂಎಲ್ ಎ, 10 ಕೋಟಿ ಲೋಕಸಭಾ ಕ್ಷೇತಕ್ಕೆ
80 ಕೋಟಿ ಸಚಿವರಿಗೆ. 2500 ಕೋಟಿ ಮುಖ್ಯಮಂತ್ರಿ ಸೇಲ್ ಆಗಬಹುದು ಎಂದರು.
ಚೈತ್ರಾ ಕುಂದಾಪುರ ಹಾಗು ಚಕ್ರವರ್ತಿ ಸೂಲಿಬೇಲಿ ಅಣ್ಣ ತಂಗಿ ಎಂದು ಟೀಕಿಸಿದರು.
ಡಿಸಿಎಂ ಹುದ್ದೆಯ ಬಗ್ಗೆ ಕೆ ಎನ್ ರಾಜಣ್ಣ ಹೇಳಿದ್ದರ ಬಗ್ಗೆ ನೋ ಕಾಮೆಂಟ್ ಎಂದರು.ರಾಜಣ್ಣ ಹೇಳಿದ್ದಾರೆ
ಅದಕ್ಕೆ ಹೈ ಕಮಾಂಡ ನಿರ್ಧರಿಸುತ್ತಾರೆ ಎಂದರು.
ಜೆಡಿಎಸ್ ನೊಂದಿಗೆ ಬಿಜೆಪಿ ಹೊಂದಾಣಿಕೆಯಿಂದ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ಸಿಗೆ ಲಾಭವಾಗುತ್ತದೆ.ಜೆಡಿಎಸ್ ಹಾಗು ಬಿಜೆಪಿ ಹೊಂದಾಣಿಕೆಯಿಂದ ನಮಗೆ ಲಾಭವಿಲ್ಲ. ನಷ್ಟವಿಲ್ಲ ಎಂದರು.
ಡಿಸೆಂಬರ್ ಯೊಳಗೆ ಮಳೆಯಾಗಯವ ನಿರೀಕ್ಷೆ ಇದೆ
ಡಿಸೆಂಬರ ನಂತರ ಹಂಪಿ ಉತ್ಸವ ನಡೆಸಲು ತೀರ್ಮಾನಿಸಲಾಗುವುದು.ರಾಜ್ಯದಲ್ಲಿ 162 ಬರ ಎಂದು ಘೋಷಿಸಿದೆ.ಬರ ನಿರ್ವಹಣೆ ಅಗತ್ಯ ಕ್ರಮ ಕುರಿತು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಬರದ ನಿಯಮಾವಳಿ ಸಡಿಲೀಕರಣಕ್ಕೆ ಸಿಎಂ ಪತ್ರ ಬರೆದಿದ್ದಾರೆ ಬರದ ವಿಷಯದಲ್ಲಿ ರಾಜಕೀಯ ಮಾಡುತ್ತಿದೆ. ರಾಜ್ಯದಿಂದ 25 ಜನ ಸಂಸದರು ಕಣ್ಣು ತೆಗೆದುಕೊಳ್ಳಲಿ. 25 ಜನ ಸಂಸದರು ಕೇಂದ್ರಕ್ಕೆ ಒತ್ತಾಯಿಸಲಾಗುವುದು
ಎನ್ ಡಿಆರ್ ಎಫ್ ನಿಯಮ ಬದಲಾಯಿಸಬೇಕು. ಅಲ್ಲಿ
ಆರು ವಾರದವರೆಗೂ ಮಳೆಯಾಗದೆ ಇದ್ದರೆ ಬರ ಎಂದು ಘೋಷಿಸುತ್ತಿದ್ದಾರೆ.
ರಾಜ್ಯದಲ್ಲಿ ಬರ ಕುರಿತು ವಿಶೇಷ ಅನುದಾನ ಪ್ಯಾಕೇಜ್ ಸಿಎಂ ತೀರ್ಮಾನಿಸಲಿದ್ದಾರೆ ಎಂದು
ಶಿವರಾಜ ತಂಗಡಗಿ ಹೇಳಿದರು.