ಸುದ್ದಿಮೂಲವಾರ್ತೆ
ಕೊಪ್ಪಳ,ಸೆ.17: ಸ್ವತಂತ್ರ್ಯ ಬಂದ ನಂತರವೂ ಕಲ್ಯಾಣ ಕರ್ನಾಟಕ ಭಾಗವು ಭಾರತದಲ್ಲಿ ಸೇರಿರಲಿಲ್ಲ. ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಯ ಹೋರಾಟ ಅವಿಸ್ಮರಣೀಯ ವಾಗಿತ್ತು ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.
ಅವರು ಕೊಪ್ಪಳ ಜಿಲ್ಲಾಡಳಿತದಿಂದ ಆಯೋಜಿಸಿದ್ದ 76 ನೆಯ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯಲ್ಲಿ ರಾಷ್ಟ್ರ ಧ್ವಜ ನಂತರ ಮಾತನಾಡಿದರು.
ಹೈದ್ರಾಬಾದ್ ನಿಜಾಂ ಭಾರತದ ಒಕ್ಕೂಟದಲ್ಲಿ ಸೇರಲು ನಿರಾಕರಿಸಿ ಸ್ವತಂತ್ರ್ಯ ರಾಜ್ಯ ಮಾಡಲು ರಜಾಕರರ ಅರೇ ಸೇನಾ ಪಡೆ ಸ್ಥಾಪಿಸಿದ್ದ. ಈ ಸಂದರ್ಭದಲ್ಲಿ ಈ ಭಾಗದಲ್ಲಿ ಹೋರಾಟ ನಡೆಯಿತು. ಈ ಹೋರಾಟದಲ್ಲಿ ಕೊಪ್ಪಳ ಜಿಲ್ಲೆಯು ಮುಂಚೂಣಿಯಲ್ಲಿತ್ತು ಎಂದರು.
ದಿನಾಚರಣೆ ಯ ಹಿನ್ನೆಲೆಯಲ್ಲಿ ಆಕರ್ಷಕ ಪಥ ಸಂಚಲನ ಮಾಡಿದರು. ಹಿರಿಯ ಸ್ವತಂತ್ರ್ಯ ಹೋರಾಟಗಾರರಿಗೆ ಸನ್ಮಾನಿಸಿದರು.
ಕಲ್ಯಾಣ ಕರ್ನಾಟಕ ಉತ್ಸವಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗುತ್ತಿರುವ ಕಾರ್ಯಕ್ರಮ. ಬೆರಳೆಣಿಕೆಯಷ್ಟು ಜನರು ಮಾತ್ರ ಉತ್ಸವದಲ್ಲಿ ಭಾಗಿಯಾಗಿದ್ದರು. ಜಿಲ್ಲಾ ಕ್ರೀಡಾಂಗಣ ಜನರು ಇಲ್ಲದೆ ಖಾಲಿ…ಖಾಲಿಯಾಗಿತ್ತು. ಸಭಿಕರಿಲ್ಲದೆ ಕ್ರೀಡಾಂಗಣ ಬಿಕೋ ಎನ್ನುತ್ತಿತ್ತು.
ಅಧ್ಯಕ್ಷತೆಯನ್ನು ಶಾಸಕ ಕೆ ರಾಘವೇಂದ್ರ ಹಿಟ್ನಾಳ ವಹಿಸಿದ್ದರು. ವಿಧಾನಪರಿಷತ್ ಸದಸ್ಯೆ ಶ್ರೀಮತಿ ಹೇಮಲತಾ ನಾಯಕ, ಸಂಸದ ಸಂಗಣ್ಣ ಕರಡಿ, ನಗರಸಭೆ ಅಧ್ಯಕ್ಷೆ ಶ್ರೀಮತಿ ಶಿವಗಂಗಾ ಭೂಮಕ್ಕನವರ್, ಜಿಲ್ಲಾಧಿಕಾರಿ ನಳಿನ ಅತುಲ್, ಜಿಪಂ ಸಿಇಪ ರಾಹುಲ್ ರತ್ನಂ ಪಾಂಡೆಯಾ, ಎಸ್ಪಿ ಯಶೋದಾ ವಂಟಿಗೋಡಿ, ಎಡಿಸಿ ಸಾವಿತ್ರಿ ಕಡಿ. ಉಪವಿಭಾಗಾಧಿಕಾರಿ ಮಹೇಶ ಮಾಲಗಿತ್ತಿ ಸೇರಿ ಹಲವರು ಇದ್ದರು.