ಸುದ್ದಿಮೂಲವಾರ್ತೆ
ಕೊಪ್ಪಳ ಸೆ 17:ಚೈತ್ರಾ ಕುಂದಾಪುರ ವಂಚನೆ ಪ್ರಕರಣಗಳು ಎಲ್ಲಾ ರಾಜಕೀಯ ಪಕ್ಷಗಳಲ್ಲಿಯೂ ಈ ರೀತಿ ವಂಚನೆ ನಡೆಯುತ್ತಿದೆ ಎಂದು ಶಾಸಕ ಗಾಲಿ ಜನಾರ್ಧನರಡ್ಡಿ ಹೇಳಿದರು.
ಅವರು ಇಂದು ಕೊಪ್ಪಳದಲ್ಲಿ ಮಾಧ್ಯಮಪ್ರತಿನಿಧಿಗಳೊಂದಿಗೆ ಮಾತನಾಡಿ ಪಕ್ಷಗಳಲ್ಲಿ ವಂಚನೆ ಇದೇನು ಹೊಸದಲ್ಲ. ಆದರೆ ಬಿಜೆಪಿಯಲ್ಲಿ ನಾನು ಕಂಡಿರುವ ಹಾಗೆ ಹಣ ಪಡೆದು ಟಿಕೆಟ್ ನೀಡುವ ಸಂಸ್ಕೃತಿ ಇಲ್ಲ.ಇದೇ ಮೊದಲು ಬಾರಿ ಬಿಜೆಪಿಯಲ್ಲಿ ಈ ರೀತಿ ಮಾತುಗಳನ್ನು ಕೇಳುತ್ತಿದ್ದೇನೆ.ಯಾರೆ ತಪ್ಪು ಮಾಡಿದರೂ ಶಿಕ್ಷೆ ಅನುಭವಿಸುತ್ತಾರೆ.ಚೈತ್ರಾ ಕುಂದಾಪುರ ಪ್ರಕರಣದ ಸಂಪೂರ್ಣ ಮಾಹಿತಿ ನನಗಿಲ್ಲ ಎಂದರು.
ಕೆಆರ್ ಪಿಪಿ ಯಿಂದ ಲೋಕಸಭೆಗೆ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸಿಡಿಸೆಂಬರ್, ಜನವರಿಯಲ್ಲಿ ನಿರ್ಧರಿಸಲಾಗುವುದು. ಈಗಾಗಲೇ ಅಭಿಪ್ರಾಯ ಸಂಗ್ರಹಣೆ ಮಾಡುತ್ತಿದ್ದೇನೆ ಎಂದರು.
ಗಂಗಾವತಿಯು ಕಿಷ್ಕಿಂದಾ ಜಿಲ್ಲೆಯಾಗಬೇಕೆಂಬ ಹೋರಾಟ ನಡೆದಿದೆ. ನಾನು ಜಿಲ್ಲೆಯ ಜನರ ಅಭಿಪ್ರಾಯದಂತೆ ಇರುತ್ತೇನೆ ಎಂದರು.
ಅಂಜನಾದ್ರಿ ಅಭಿವೃದ್ಧಿ ಗೆ ಹಿಂದಿನ ಸರಕಾರ ಅನುದಾನ ಘೋಷಿಸಿತ್ತು.ನಾನು ವಿಧಾನಸಭೆಯಲ್ಲಿ ಚರ್ಚೆಯ ನಂತರ ಈಗ ಅಭಿವೃದ್ದಿ ಕಾರ್ಯಗಳು ನಡೆದಿವೆ.
ಹಿಟ್ನಾಳದಿಂದ ಮರಳಿಯವರೆಗೂ ಚತುಷ್ಪಥ ರಸ್ತೆ ಕೇಂದ್ರ ಸರಕಾರದಿಂದ 1800 ಕೋಟಿ ರೂಪಾಯಿಯ ಯೋಜನೆಗೆ ಟೆಂಡರ್ ಕರೆಯಲಾಗುತ್ತಿದೆ. ಇದೇ ವೇಳೆ
ಕೆಕೆಆರ್ ಡಿಬಿಯಿಂದ ಆನೇಗೊಂದಿ ಭಾಗದ ಅಭಿವೃದ್ದಿಗೆ 40 ಕೋಟಿ ರೂಪಾಯಿ ನೀಡಲಾಗಿದೆ ಎಂದರು.
ಆನೇಗೊಂದಿ ಭಾಗದಲ್ಲಿ ರೇಸಾರ್ಟ್ ಗಳ ತೆರವು ಪ್ರಕರಣದ ನಂತರ
ಈಗಾಗಲೇ ರಾಜ್ಯದ ಇಲಾಖೆಯ ಕಾರ್ಯದರ್ಶಿಯವರ ಬಳಿ ಚರ್ಚೆ ಮಾಡಿದ್ದೇವೆ.ಎರಡು ತಿಂಗಳಲ್ಲಿ ಈ ಭಾಗದ ಪ್ರವಾಸೋದ್ಯಮಕ್ಕೆ ಅನುಕೂಲವಾಗುವಂಥ ಕ್ರಮ ಕೈಗೊಳ್ಳಲಾಗುವುದು.ಈಗ ಸಧ್ಯ ಹವಾಮಾ ವ್ಯಾಪ್ತಿಯ ಹೊರಗಡೆ ಪ್ರವಾಸಿಗರಿಗೆ ರೇಸಾರ್ಟ್ ಸೇರಿ ಮೂಲಭೂತ ಸೌಲಭ್ಯ ನೀಡಲಾಗುತ್ತಿದೆ ಎಂದು ಶಾಸಕ ಗಾಲಿ ಜನಾರ್ಧನರಡ್ಡಿ ಹೇಳಿದರು.