ಸುದ್ದಿಮೂಲ ವಾರ್ತೆ
ದೇವನಹಳ್ಳಿ,ಸೆ.19: ಸರ್ಕಾರ ಹಾಗೂ ಸಂಘದಿಂದ ದೊರೆಯುವ ಸವಲತ್ತುಗಳನ್ನು ಷೇರುದಾರ ಸದಸ್ಯರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕೆಪಿಸಿಸಿ ಸದಸ್ಯ ವಿ.ಶಾಂತಕುಮಾರ್ ತಿಳಿಸಿದರು.
ಪಟ್ಟಣದ ನಗರೇಶ್ವರಸ್ವಾಮಿ ಕಲ್ಯಾಣ ಮಂಟಪದಲ್ಲಿ ದೇವನಹಳ್ಳಿ ತಾಲೂಕು ಗ್ರಾಮೋದ್ಯೋಗ ಕಸುಬುದಾರ ಕೈಗಾರಿಕೆ ವಿವಿಧೋದ್ದೇಶ ಸಹಕಾರ ಸಂಘದ 2022-23 ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಂಘದ ನೂತನ ಕಟ್ಟಡ ನಿರ್ಮಿಸಿ ಸಂಘದ ಲಾಭಾಂಶ ಬರುವ ಕೆಲಸ ಮಾಡಿದ್ದಾರೆ. ಇದರ ಜೊತೆಗೆ ಸ್ತ್ರೀ ಶಕ್ತಿ ಸಂಘಗಳಿಗೆ ಸರಕಾರದಿಂದ ದೊರೆಯುವ ಸವಲತ್ತುಗಳನ್ನು ಕೊಡುವ ಮೂಲಕ ಉತ್ತೇಜನ ನೀಡುವ ಕೆಲಸ ಮಾಡುತ್ತಿದ್ದು, ಸದಸ್ಯರು ಸಂಘದಿಂದ ದೊರೆಯುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಮುಂದೆ ಬರಬೇಕು ಕಸುಬುದಾರರ ಸಂಘದ ಬೆಳವಣಿಗೆಗೂ ಸಹಕರಿಸಬೇಕೆಂದರು.
ಕೈಗಾರಿಕಾ ವಿಸ್ತಾರಣಾಧಿಕಾರು ನಾರಾಯಣಪ್ಪ ತಮ್ಮ ಇಲಾಖೆಯಿಂದ ಸಿಗುವ ತರಬೇತಿ ಸಾಲಸೌಲಭ್ಯ ಸವಲತ್ತುಗಳ ಬಗ್ಗೆ ತಿಳಿಸಿಕೊಟ್ಟರು.
ಮುಖ್ಯಕಾರ್ಯನಿರ್ವಹಣಾಧಿಕಾರಿ ಎಚ್.ಎನ್.ಶ್ರೀನಿವಾಸಮೂರ್ತಿ ವಾಷೀಕ ವರದಿ ಮಂಡಿಸಿ ಹಿಂದಿನ ಸಾಲಿನ ಖರ್ಚು ಕಳೆದ ಪ್ರಸ್ತುತ ಸಂಘ 10 ಲಕ್ಷ ಲಾಭದಲ್ಲಿದೆ ಎಂದು ಹೇಳಿ 2023-24 ನೇ ಸಾಲಿಗೆ 445000 ಸಾವಿರ ಅಂದಾಜು ವೆಚ್ಚದ ಬಜೆಟ್ ಮಂಡಿಸಿದರು.
ಸಂಘದ ಅಧ್ಯಕ್ಷ ಡಿ.ಮುನಿರಾಜು ಮಾತನಾಡಿ, ಕಳೆದ ಸಾಲಿನ ವರೆವಿಗೂ ಸಂಘ ನಷ್ಟದಲ್ಲಿ ನಡೆಯುತ್ತಿತ್ತು ಪ್ರಸ್ತಕ ಸಾಲಿನಲ್ಲಿ 10 ಲಕ್ಷ ಲಾಭ ಬಂದಿದೆ ಸಂಘದ ವಾಣಿಜ್ಯ ಮಳಿಗೆಗಳ ಬಾಡಿಯಿಂದ ನಮಗೆ ಅನುಕೂಳವಾಗುತ್ತಿದೆ ಇದರ ಜೊತೆಗೆ ಜಿಲ್ಲಾ ಸಹಕಾರ ಯೂನಿಯನ್ ನಮಗೆ ಸಹಕಾರ ನೀಡಿದರೆ ನಮ್ಮ ಸಂಘದಿಂದಲೂ ಕಸುಬುದಾರರಿಗೆ ಸಾಲ ನೀಡಿ ಸಂಘದ ಅಭಿವೃದ್ದಿಗೆ ಶ್ರಮಿಸಬಹುದು ಸಂಘಕ್ಕೆ ಮೂಲ ಬಂಡವಾಲ ಮತ್ತು ಸರ್ಕಾರದ ಅನುದಾನದ ಕೊರತೆ ಇದೆ ಸರ್ಕಾರ ಹಿಂದೆ ನೀಡುತ್ತಿದ್ದಂತೆ ಕಸುಬುದಾರರ ಸಂಘದ ಅಭಿವೃದ್ದಿಗೆ ಉತ್ತೇಜನ ನೀಡುತ್ತಿಲ್ಲ ಎಂದರು.
ಈ ವೇಳೆ ಮಾಜಿ ಪುರಸಭಾ ಅಧ್ಯಕ್ಷರುಗಳದ ಸಿ.ಜಗನ್ನಾಥ್, ಎಂ.ನಾರಾಯಣಸ್ವಾಮಿ, ಕೆಪಿಸಿಸಿ ಸದಸ್ಯ ಶಾಂತಕುಮಾರ್ ವಿ, , ಗ್ರಾಮೋದ್ಯೋಗ ಕಸುಬುದಾರರ ಸಂಘದ ಉಪಾಧ್ಯಕ್ಷೆ ನಾಗಮಣಿ ಬೈರೇಗೌಡ, ಸೇರಿದಂತೆ ಹಲವರು ಉಪಸ್ಥಿತರಿದ್ದರು.