ಸುದ್ದಿ ಮೂಲವಾರ್ತೆ
ಕೊಪ್ಪಳ,ಸೆ.22:ಕುಕನೂರು ತಾಲೂಕಾಡಳಿತ ಕಚೇರಿಗಾಗಿ ಗುದ್ನೇಶ್ವರ ಮಠದ ಸೇವಾ ಕಾರ್ಯಕರ್ತರ ಭೂಮಿ ಸ್ವಾದೀನ ಪಡಿಸಿದಕೊಳ್ಳಲು ಮುಂದಾಗಿದ್ದ ಜಿಲ್ಲಾಡಳಿತ. ಇದಕ್ಕೆ ಶಾಸಕ ಬಸವರಾಜ ರಾಯರಡ್ಡಿ ಸೂಚನೆ ಇತ್ತು ಎನ್ನಲಾಗಿದೆ. ಆದರೆ ಜನರ ತೀವ್ರ ವಿರೋಧ ಹಾಕಿಕೊಳ್ಳಲು ಹಿಂಜರಿದು ಕೊನೆಗೂ ಈ ಭೂಮಿ ಸ್ವಾದೀನ ಪಡಿಸಿಕೊಳ್ಳುವದರಿಂದ ಶಾಸಕ ಬಸವರಾಜ ರಾಯರಡ್ಡಿ ಹಿಂದೆ ಸರಿದಿದ್ದಾರೆ.
ಕುಕನೂರಿನ ಗುದ್ನೇಶ್ವರ ಮಠದ ಆಸ್ತಿಯನ್ನು ಸೇವಾ ಕಾರ್ಯಕರ್ತರಿಗೆ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಕುಕನೂರು ತಾಲೂಕಾಡಳಿತ ಭವನಕ್ಕಾಗಿ ಸರ್ವೆ 78 ರಲ್ಲಿಯ ಮಠದ ಆಸ್ತಿಯನ್ನು ಸ್ವಾದೀನ ಮುಂದಾಗಿದ್ದ ಜಿಲ್ಲಾಡಳಿತ ಸಮಿಕ್ಷೆ ನಡೆಸಿತ್ತು. ಸರ್ವೆ ನಂಬರ್ 78 ರಲ್ಲಿಯ ಆಸ್ತಿ ಒಟ್ಟು 30 ಎಕರೆ ಭೂಮಿ ಸ್ವಾದೀನ ಪಡಿಸಲು ಮುಂದಾಗಿದ್ದರು. ಅಲ್ಲದೆ ಇದೇ ಸ್ಥಳಕ್ಕೆ ಶಾಸಕ ರಾಯರಡ್ಡಿ ಹಾಗು ಜಿಲ್ಲಾಧಿಕಾರಿಗಳು ಭೇಟಿ ನೀಡಿದ್ದರು. ಇದಕ್ಕೆ ಮಠದ 18 ಜನ ಸೇವಾಕಾರ್ಯಕರ್ತರು, ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರು.
ನಮ್ಮ ಭೂಮಿಯನ್ನು ಸ್ವಾದೀನ ಪಡಿಸಿಕೊಳ್ಳಬಾರದು ಎಂದು ಮಂಗಳವಾರ ಜಿಲ್ಲಾಡಳಿತ ಭವನದ ಮುಂದೆ ಬೃಹತ್ ಪ್ರತಿಭಟನೆ ಮಾಡಿದ್ದರು.ಜನರ ಪ್ರತಿರೋಧದ ಹಿನ್ನೆಲೆ
ಈ ಭೂಮಿ ಸ್ವಾದೀನದಿಂದ ಶಾಸಕ ಹಿಂದೆ ಸರಿದ್ದಾರೆ.ಇದೇ ಭೂಮಿ ಸೇವಾಕಾರ್ಯಕರ್ತರಿಗೆ ಪಟ್ಟಾ ನೀಡಲು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.