ಸುದ್ದಿಮೂಲ ವಾರ್ತೆ
ಹೊಸಕೋಟೆ,ಸೆ.22:ವಳಗೆರೆಪುರ ಹಾಲು ಉತ್ಪಾದಕರ ಸಹಕಾರ ಸಂಘ ಐದು ಲಕ್ಷ ಲಾಭ ಪಡೆದಿದೆ ಎಂದು ವಳಗೆರೆಪುರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರಾಜಣ್ಣ ತಿಳಿಸಿದರು.
ಹೊಸಕೋಟೆ ತಾಲೂಕಿನ ವಳಗೆರೆಪುರ ಹಾಲು ಉತ್ಪಾದಕರ ಸಹಕಾರ ಸಂಘದ 2022-23 ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು. ನಮ್ಮ ಸಂಘವು ಪ್ರಾರಂಭಗೊಂಡು 30 ವರ್ಷಗಳಾಗಿದ್ದು, ಪ್ರತಿನಿತ್ಯ 300 ಲೀಟರ್ ಹಾಲು ಸಂಗ್ರಹಣೆಯಾಗುತ್ತಿದ್ದು ಐದು ಲಕ್ಷ ಲಾಭ ಗಳಿಸಲು ನಿರ್ದೇಶಕರು ಷೇರುದಾರರ ಪಾತ್ರವಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಲಾಭಗಳಿಸಲು ಶ್ರಮಿಸುತ್ತೇವೆ ಎಂದರು.
ಪಶುವೈದ್ಯರಾದ ಡಾ ಪ್ರವೀಣ್ ಇಂಗಳಗಿ ಮಾತನಾಡಿ, ಸಂಘಗಳು ಲಾಭಗಳಿಸಬೇಕಾದರೆ ಹಾಲು ಉತ್ಪಾದಕರು ಸ್ವಚ್ಚತೆಗೆ ಆದ್ಯತೆ ನೀಡಿ ಗುಣಮಟ್ಟದ ಹಾಲುಪೂರೈಸಬೇಕು. ರಾಸುಗಳಿಗೆ ಸಮಯಕ್ಕೆ ಸರಿಯಾಗಿ ನೀಡಬೇಕು ಲಸಿಕೆಗಳನ್ನು ಹಾಕಿಸಿ ಪಶು ಆಹಾರ ಹಸಿರು ಮೇವು ನೀಡಿ ಆಗಾಗ್ಗೆ ವೈದ್ಯರ ಸಂಪರ್ಕಮಾಡಿ ಮಾಹಿತಿ ಪಡೆಯಬೇಕು ಎಂದರು.
ಈ ಸಂಧರ್ಭದಲ್ಲಿ ವಿಸ್ತರಣಾಧಿಕಾರಿ ವಿನಯ್ ಕುಮಾರ್, ಉಪಾಧ್ಯಕ್ಷರಾದ ಚಿಕ್ಕಪ್ಪಯ್ಯಣ್ಣ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾರ್ತಿಕ್, ಮಾಜಿ ಅಧ್ಯಕ್ಷರಾದ ವಿ ರಾಜಣ್ಣ, ಕನಕರಾಜ್ ನಿರ್ದೇಶಕರಾದ ಮುನಿನಾರಾಯಣಪ್ಪ, ವೀರಣ್ಣ ಗೌಡ ಪುಷ್ಪ, ಮುಖಂಡರಾದ ರಘುಕುಮಾರ್ ವೆಂಕಟಸ್ವಾಮಪ್ಪ,ರಾಮಾಂಜಿನಪ್ಪ, ನಾರಾಯಣಗೌಡ ರಾಮಾಂಜಿನಪ್ಪ ಬೇಟೆಗೌಡ ಸೇರಿದಂತೆ ಇತರರು ಇದ್ದರು.