ಸುದ್ದಿಮೂಲವಾರ್ತೆ
ಕೊಪ್ಪಳ,ಸೆ.25: ಸೆ 27 ರಂದು ಕೊಪ್ಪಳದಲ್ಲಿ ವಿಭಾಗ ಮಟ್ಟದ ಕೋರ್ ಕಮಿಟಿ ಸಭೆಯು ಮಾಜಿ ಸಚಿವ ಜಿ ಟಿ ದೇವೇಗೌಡರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ ಹೇಳಿದರು.
ಅವರು ಇಂದು ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಮಾತನಾಡಿ ನಾವು ಯಾವುದೇ ಕಾರಣಕ್ಕೆ ಸೋಲು ಬಾರದು ಆದರೆ ನಮ್ಮ ಯೋಜನೆಗಳನ್ನು ಈಗಿನ ಸರಕಾರಗಳು ಹೇಳಿಕೊಳ್ಳುತ್ತವೆ. ರಾಜ್ಯದಲ್ಲಿ ನ್ಯಾಯಬೆಲೆ ಅಂಗಡಿ, ನೀರಾವರಿ ಯೋಜನೆಗಳು ಆರಂಭಿಸಿದ್ದು ದೇವೇಗೌಡರು ಹಾಗು ಕುಮಾರಸ್ವಾಮಿ ಕಾರಣ ಎಂದರು.
ಹೊಂದಾಣಿಕೆಯ ವಿಷಯದಲ್ಲಿ ಸಭೆ ಮಾಡಿ ನಿರ್ಧರಿಸಿದ್ದೇವೆ. ದೇವದುರ್ಗಾ ಶಾಸಕಿ ಕರಿಯಮ್ಮ ಹೇಳಿಲ್ಲ. ಶರಣಗೌಡ ಹೇಳಿರುವುದು ವಯಕ್ತಿಕ ಹೇಳಿಕೆಯಾಗಿದೆ. ಇಬ್ಬರನ್ನು ಕರೆದು ಮಾತನಾಡಲಾಗುವುದು ಎಂದು ವೆಂಕಟರಾವ್ ನಾಡಗೌಡ ಹೇಳಿದರು.
ಉತ್ತರ ಕರ್ನಾಟಕ ಹಾಗು ಕಲ್ಯಾಣ ಕರ್ನಾಟಕ ಭಾಗದಲ್ಲಿ ಲೋಕಸಭೆ ಟಿಕೆಟ್ ನೀಡಬೇಕೆಂದು ಕೇಳಿದ್ದೇವೆ ಎಂದು ಸಿ ವಿ ಚಂದ್ರ ಶೇಖರ ಹೇಳಿದರು.
ನಿತೀಶ ಕುಮಾರ ಎನ್ ಡಿಎ ಹೋದಾಗ ಕೋಮುವಾದವಾಗುವುದಿಲ್ಲ. ರಾಜ್ಯ ಕಟ್ಟಕಡೆ ರೈತನ ಹಿತಕ್ಕಾಗಿ ಹೊಂದಾಣಿಕೆ ಮಾಡಬೇಕಾಗಿದೆ. ಕಾವೇರಿ ವಿಷಯದಲ್ಲಿ ರಾಜ್ಯದ ಜನತೆಗೆ ಕುಡಿವ ನೀರಿಲ್ಲ ಎಂದರೂ ನೀರು ಬಿಟ್ಟಿದ್ದಾರೆ ಇದೇ ಕಾರಣಕ್ಕೆ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. ನಮ್ಮ ವಿಭಾಗದಿಂದ ಎಲ್ಲರೂ ಒಪ್ಪಿಕೊಂಡಿದ್ದಾರೆ ಎಂದು ಶಾಸಕ ನೇಮಿರಾಜ್ ನಾಯಕ ಹೇಳಿದರು.
ಗ್ಯಾರಂಟಿ ಯೋಜನೆಗಳಿಂದ ದಿಕ್ಕು ತಪ್ಪಿಸಿ ಅಧಿಕಾರ ತೆಗೆದುಕೊಂಡಿದ್ದಾರೆ. ಅನ್ಯ ಮಾರ್ಗದಿಂದ ಅಧಿಕಾರ ತೆಗೆದುಕೊಂಡರು ಎಂದು ಆರೋಪಿಸಿದರು.
ಸಿದ್ದರಾಮಯ್ಯನವರಿಗೆ ಕಾಳಜಿ ಇದ್ದರೆ ನೀರಾವರಿಗೆ 5 ಸಾವಿರ ಕೋಟಿ ನೀಡಿದ್ದಾರೆ. ರಸ್ತೆಗಳು ಹಾಳಾಗಿವೆ ದುರಸ್ತಿ ಮಾಡಲಾಗಿಲ್ಲ ಎಂದರು.
ಕುಮಾರಸ್ವಾಮಿ ಅಂತ ನಾಯಕರಿದ್ದಾರೆ. ನಾನು ಸಿವಿಸಿ ಬಿಜೆಪಿಯಲ್ಲಿದ್ದೇವೆ. ಕಾರ್ಯಕರ್ತರ ಸಹ ದೇವೇಗೌಡರು ಹಾಗು ಕುಮಾರಣ್ಣ ನಿರ್ಧಾರಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ವೀರೇಶ ಮಹತಯ್ಯನಮಠ ಇದ್ದರು.