ಸುದ್ದಿಮೂಲ ವಾರ್ತೆ
ಚಿಕ್ಕಬಳ್ಳಾಪುರ,ಸೆ.25:ಶಿಡ್ಲಘಟ್ಟ ತಾಲೂಕಿನಲ್ಲಿ ಹೈಟೆಕ್ ಬಸ್ ತಂಗುದಾಣಗಳು ಮತ್ತು ಹೈಮಾಸ್ ದೀಪಗಳು ತಲೆ ಎತ್ತಲು ವೇದಿಕೆ ಸಜ್ಜಾಗುತ್ತಿದೆ.
ಸಂಸದ ಎಸ್.ಮುನಿಸ್ವಾಮಿ ಅವರು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧಡೆ 20 ಹೈಟೆಕ್ ಬಸ್ ತಂಗುದಾಣಗಳು ಮತ್ತು 20 ಹೈಮಾಸ್ ವಿದ್ಯುತ್ ದೀಪಗಳನ್ನು ಅಳವಡಿಸಲು ತಮ್ಮ ಕ್ಷೇತ್ರಾಭಿವೃಧ್ಧಿ ನಿಧಿಯಿಂದ ನೆರವು ನೀಡಲು ಒಪ್ಪಿಗೆ ಸೂಚಿಸಿದ್ದಾರೆ.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರವನ್ನು ಇಡೀ ರಾಜ್ಯದಲ್ಲಿ ಮಾದರಿ ಮಾಡಲು ಭಾಜಪ ಮುಖಂಡ ಸೀಕಲ್ ರಾಮಚಂದ್ರಗೌಡ ಅವರು ಸಂಕಲ್ಪ ಮಾಡಿ ಈಗಾಗಲೇ ಕಾರ್ಯಪ್ರವೃತರಾಗಿದ್ದಾರೆ ಹಾಗೆಯೇ ಅವರ ಕಿರಿಯ ಸಹೋದರ ಸೀಕಲ್ ಆನಂದ್ಗೌಡ ಅವರು ಸಹ ಕ್ಷೇತ್ರವನ್ನು ಶೈಕ್ಷಣಿಕ, ಆರೋಗ್ಯ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ರೂಪಿಸಿ ಅನುಷ್ಠಾನಗೊಳಿಸಲು ಮುಂದಾಗಿದ್ದಾರೆ.
ಈಗಾಗಲೇ ಕ್ಷೇತ್ರಾದ್ಯಂತ ಇರುವ ಯುವಕರಿಗೆ ರಾಜ್ಯದ ವಿವಿಧ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಕಲ್ಪಿಸುವ ಮೂಲಕ ನಿರುದ್ಯೋಗ ಸಮಸ್ಯೆ ನಿವಾರಣೆಯ ಜೊತೆಗೆ ಬಡವರಿಗೆ ಉತ್ತಮ ಆರೋಗ್ಯ ಸೇವೆ ನೀಡಲು ವಿಶೇಷ ಕಾಳಜಿವಹಿಸಿ ಕ್ಷೇತ್ರದ ಮಕ್ಕಳು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ನುರಿತ ಶಿಕ್ಷಣ ತಜ್ಞರಿಂದ ಮಾರ್ಗದರ್ಶನ ನೀಡಲು ಮತ್ತು ನೆರವು ನೀಡುವ ಕಾರ್ಯವನ್ನು ಯಾವುದೇ ರೀತಿಯ ಪ್ರಚಾರ ಮತ್ತು ಸದ್ದುಇಲ್ಲದೇ ಮಾಡುತ್ತಿದ್ದಾರೆ.
ಕೋಲಾರ ಲೋಕಸಭಾ ಕ್ಷೇತ್ರದ ಹಲವಡೆ ಸಂಸದರ ಕ್ಷೇತ್ರಾಭಿವೃಧ್ಧಿ ನಿಧಿಯಿಂದ ಸಮುದಾಯ ಭವನ ಮತ್ತು ಶಾಲೆಗಳ ಅಭಿವೃಧ್ಧಿಗೆ ನೆರವು ಕಲ್ಪಿಸಲು ಆದ್ಯತೆ ನೀಡಿದ್ದೇನೆ ಎಂದಿರುವ ಸಂಸದ ಎಸ್.ಮುನಿಸ್ವಾಮಿ ಅವರು ಇತ್ತೀಚಿಗೆ ರೇಷ್ಮೆ ನಗರಕ್ಕೆ ಭೇಟಿ ನೀಡಿ ಶಿಥಿಲ ವ್ಯವಸ್ಥೆಯಲ್ಲಿರುವ ಸಾರ್ವಜನಿಕ ಗ್ರಂಥಾಲಯಕ್ಕೆ ಭೇಟಿ ನೀಡಿ ಅದನ್ನು ದುರಸ್ಥಿಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು ಒಟ್ಟಾರೆ ಶಿಡ್ಲಘಟ್ಟ ಕ್ಷೇತ್ರದಲ್ಲಿ ಸಂಸದರ ನಿಧಿಯಿಂದ ಬಸ್ ತಂಗುದಾಣಗಳ ನಿರ್ಮಾಣ ಮತ್ತು ಹೈಮಾಸ್ ದೀಪಗಳನ್ನು ಅಳವಡಿಸಲು ಕಾಲ ಕೂಡಿಬರುತ್ತಿದೆ.
ಕೋಲಾರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶಾಲಾಭಿವೃಧ್ಧಿ, ಸಮುದಾಯದ ಭವನಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ 05-10 ಹಳ್ಳಿಗೆ ಸಂಪರ್ಕ ಕಲ್ಪಿಸುವ ಸ್ಥಳದಲ್ಲಿ ಒಂದೇ ಮಾದರಿಯ 100 ಬಸ್ ತಂಗುದಾಣಗಳು ಮತ್ತು ಹೈಮಾಸ್ ದೀಪಗಳನ್ನು ಅಳವಡಿಸಲು ಗ್ರಾಮಗಳನ್ನು ಆಯ್ಕೆ ಮಾಡಲು ಮುಖಂಡರಿಗೆ ಮಾಹಿತಿ ನೀಡಲಾಗಿದೆ ಜೊತೆಗೆ ಕೇಂದ್ರ ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದೇ ನನ್ನ ಮುಖ್ಯ ಗುರಿ.
ಎಸ್.ಮುನಿಸ್ವಾಮಿ ಸಂಸದ
ಕ್ಷೇತ್ರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ಸೇವಾ ಸೌಧ ಕಚೇರಿಯ ಮೂಲಕ ಮಾಡುತ್ತಿದ್ದೇವೆ ಕ್ಷೇತ್ರದ ಸಂಸದ ಎಸ್. ಮುನಿಸ್ವಾಮಿ ಅವರ ಸಹಕಾರದಿಂದ ಜನರ ಅನುಕೂಲಕ್ಕಾಗಿ ಮಾದರಿ ಬಸ್ ತಂಗುದಾಣಗಳು ಮತ್ತು ವಿದ್ಯುತ್ ಹೈಮಾಸ್ ದೀಪಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ ಶಿಕ್ಷಣ-ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ತರುವ ಜೊತೆಗೆ ಕ್ಷೇತ್ರವನ್ನು ಮಾದರಿ ಮಾಡುವುದು ನನ್ನ ಮುಖ್ಯ ಗುರಿ.
ಸೀಕಲ್ ರಾಮಚಂದ್ರಗೌಡ ಬಿಜೆಪಿ ಮುಖಂಡ
ರಾಜ್ಯದಲ್ಲಿ ಮಾದರಿ ಕ್ಷೇತ್ರವನ್ನಾಗಿ ಮಾಡುವ ಸಂಕಲ್ಪದೊಂದಿಗೆ ಹಿರಿಯ ಅಣ್ಣನವರು ಕಾರ್ಯಪ್ರವೃತ್ತರಾಗಿದ್ದಾರೆ ಕ್ಷೇತ್ರದಲ್ಲಿ ಪ್ರಯಾಣಿಕರಿಗೆ ಮತ್ತು ಜನರಿಗೆ ಅನುಕೂಲ ಕಲ್ಪಿಸಲು ಪ್ರಮುಖ ಕೇಂದ್ರಗಳಲ್ಲಿ ಬಸ್ ತಂಗುದಾಣ ಮತ್ತು ವಿದ್ಯುತ್ ಹೈಮಾಸ್ ದೀಪಗಳನ್ನು ಅಳವಡಿಸಲು ನಾವು ಮಾಡಿದ ಮನವಿಯನ್ನು ಸ್ಪಂದಿಸಿ ಸಂಸದ ಎಸ್.ಮುನಿಸ್ವಾಮಿ ಅವರು ತಮ್ಮ ಸಂಸದರ ಕ್ಷೇತ್ರಾಭಿವೃಧ್ಧಿ ನಿಧಿಯಿಂದ ನೆರವು ನೀಡಲು ಒಪ್ಪಿಗೆ ಸೂಚಿಸಿದ್ದಾರೆ ಕ್ಷೇತ್ರಾದ್ಯಂತ ಬಸ್ ತಂಗುದಾಣ ಮತ್ತು ಹೈಮಾಸ್ ದೀಪಗಳನ್ನು ಅಳವಡಿಸಲು ಕಾರ್ಯಕರ್ತರು ಮತ್ತು ಮುಖಂಡರ ಸಲಹೆ ಪಡೆದುಕೊಳ್ಳುತ್ತಿದ್ದೇವೆ ಅತಿ ಶೀಘ್ರದಲ್ಲಿ ಬಸ್ ತಂಗುದಾಣಗಳನ್ನು ನಿರ್ಮಿಸುತ್ತೇವೆ.
ಸೀಕಲ್ ಆನಂದ್ಗೌಡ, ಬಿಜೆಪಿ ಯುವ ಮುಖಂಡ