ಸುದ್ದಿಮೂಲ ವಾರ್ತೆ
ತಿಪಟೂರು,ಸೆ.26: ಪ್ರಾಥಮಿಕ ಸಹಕಾರಿಯು ಸಣ್ಣ ಹಿಡುವಳಿದಾರ ಸದಸ್ಯರ ಹಿತವನ್ನು ಕಾಪಾಡುವುದೇ ಸಹಕಾರಿಯ ಉದ್ದೇಶ ಎಂದು ಹಾಲ್ಕುರಿಕೆ ಪ್ರಾಥಮಿಕ ಕೃಷಿ ಸಹಕಾರ ಸಂಘದ ಅಧ್ಯಕ್ಷ ಹೆಚ್.ಎನ್.ಬಸವರಾಜು ತಿಳಿಸಿದರು.
ತಾಲ್ಲೂಕಿನ ಹೊನ್ನವಳ್ಳಿ ಹೋಬಳಿಯ ಹಾಲ್ಕುರಿಕೆ ಪ್ರಾಥಮಿಕ ಕೃಷಿ ಸಹಕಾರ ಸಂಘದ ಆವರಣದಲ್ಲಿ 2022-23ನೇ ಸಾಲಿನ ಸರ್ವ ಸದಸ್ಯರ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸಹಕಾರಿಯು ಸಂಕಷ್ಠದ ಸಮಯದಲ್ಲಿಯೂ ಉತ್ತಮ ಕಾರ್ಯನಿರ್ವಹಣೆಯೊಂದಿಗೆ ಸುಮಾರು 8.81 ಲಕ್ಷ ರೂ.ಗಳ ಲಾಭಾಂಶವನ್ನು ವಿವಿಧ ಕೆಲಸಗಳಿಗೆ ಹಂಚಿಕೆ ಮಾಡಿದ್ದು, ರೈತರೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ ಎಂದರು.
ಮುಖ್ಯಕಾರ್ಯನಿರ್ವಹಣಾಧಿಕಾರಿ ಹೆಚ್.ಪಿ.ನಾಗರಾಜ್ ಮಾತನಾಡಿ, ಸಹಕಾರಿಯು ರೈತ ಚಟುವಟಿಕೆಗಳಿಗೆ ಮಾತ್ರವೇ ಸೀಮಿತವಾಗಿರದೆ ಅನೇಕ ಸರ್ವಾಜನಿಕ ಉಪಯೋಗವಾಗುವಂತಹ ಕೆಲಸಗಳನ್ನೂ ನಿರ್ವಹಿಸಿಕೊಂಡು ಬರುತ್ತಿದೆ. ಮುಂದಿನ ದಿನಗಳಲ್ಲಿ ನಮ್ಮ ಸಹಕಾರಿ ಸದಸ್ಯರೂ ಹೆಚ್ಚಾಗುವುದರ ಜೊತೆಗೆ ಉತ್ತಮ ಲಾಭಾಂಶವನ್ನು ಹೊಂದುವ ನಿಶ್ಚಿತಗುರಿಯನ್ನು ಹೊಂದಿದ್ದೇವೆ ಎಂದರು.
ಉಪಾಧ್ಯಕ್ಷ ಮೋಹನ್ ನಾಯ್ಕ, ನಿರ್ದೇಶಕರಾದ ಉಮಾ ಮಹೇಶ್, ಸೋಮಶೇಖರ್, ನಾಗರಾಜ್, ರೇವಣಪ್ಪ, ಜಯಂತಿಕುಮಾರ್, ಚಂದ್ರಶೇಖರ್, ಮಾಳಪ್ಪ, ಸಿಬ್ಬಂದಿಗಳಾದ ಸುರೇಶ್, ಸಿದ್ದಪ್ಪ, ಲಲಿತಮ್ಮ, ಸಾವಿತ್ರಮ್ಮ, ಶೃತಿ, ಶರಣ್ ಮತ್ತು ಶಂಕರಪ್ಪ ಸೇರಿದಂತೆ, ನಿರ್ದೇಶಕರು, ಸದಸ್ಯರು, ಪಿಗ್ಮಿ ಏಜಂಟರುಗಳು ಸಿಬ್ಬಂಧಿವರ್ಗ ಉಪಸ್ಥಿತರಿದ್ದರು.