ಸುದ್ದಿಮೂಲ ವಾರ್ತೆ
ಹೊಸಕೋಟೆ,ಸೆ.26: ಸಂಘದ ಶ್ರೇಯೋಭಿವೃದ್ದಿಗೆ ಸರ್ವ ಸದಸ್ಯರು ಸಹಕಾರ ನೀಡಬೇಕು ಎಂದು ಮುತ್ಕೂರು ವ್ಯವಸಾಯೋತ್ಪನ್ನ ಸೇವಾ ಸಹಕಾರ ಸಂಘದ ಅಧ್ಯಕ್ಷ ಡಿ.ಕೆ.ಮಂಜುನಾಥ್ ಹೇಳಿದರು.
ಹೊಸಕೋಟೆ ತಾಲ್ಲೂಕಿನ ಮುತ್ಕೂರು ಸಂಘದ ಆವರಣದಲ್ಲಿ ಹಮ್ಮಿಕೊಂಡಿದ್ದ 2022- 23ನೇಸಾಲಿನ ಸರ್ವ ಸದಸ್ಯರ ಮಹಾಸಭೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಘವು 2439 ಸದಸ್ಯರಿಂದ 37.26 ಲಕ್ಷ ರೂ.ಗಳ ಷೇರು ಬಂಡವಾಳ ಹೊಂದಿದ್ದು ಪ್ರಸಕ್ತ ಸಾಲಿನಲ್ಲಿ ಸಂಘವು 46.08 ಲಕ್ಷ ಲಾಭಗಳಿಸಿದೆ ಎಂದು ಹೇಳಿದರು.
ನಿಯಂತ್ರಿತ ಆಹಾರಧಾನ್ಯ ಮಾರಾಟದಿಂದ 12.98 ಲಕ್ಷ ರೂ. ವ್ಯಾಪಾರ ಲಾಭಗಳಿಸಿದೆ. ಸಂಘದ ಸದಸ್ಯರಿಗೆ ಶೇ 20 ರಷ್ಟು ಲಾಭಾಂಶ ನೀಡಲು ತಿರ್ಮಾನಿಸಲಾಗಿದೆ. ಸರಕಾರದ ಆದೇಶದಂತೆ ಶೂನ್ಯ ಬಡ್ಡಿ ದರದಲ್ಲಿ 2 ಲಕ್ಷ ರೂ.ಗಳವರೆಗೆ ಕೆಸಿಸಿ ಸಾಲವಾಗಿ 128.28 ಲಕ್ಷ ರೂ.ಗಳನ್ನು ನೀಡಿದೆ ಎಂದು ತಿಳಿಸಿದರು.
ಸಂಘದ ಉಪಾಧ್ಯಕ್ಷ ಎ.ಚಂದ್ರಪ್ಪ, ನಿರ್ದೇಶಕರಾದ ಎಂ.ವೆಂಕಟರಾಜು, ಎಂ.ಎಸ್.ಮಂಜುನಾಥ್, ಡಿ.ಎಸ್.ಮಂಜುನಾಥ್, ರಾಜೇಂದ್ರ, ವೈ.ಕೆ.ಮುನಿರಾಜು, ರಾಜಕುಮಾರ್, ಎ.ಎನ್.ಗಜೇಂದ್ರ, ಯಶೋಧಮ್ಮ ಇತರರು ಉಪಸ್ಥಿತರಿದ್ದರು.