ಸುದ್ದಿಮೂಲ ವಾರ್ತೆ
ಹೊಸಕೋಟೆ,ಸೆ.27: ಹೊಸಕೋಟೆ ದಿ ಟೌನ್ ಕೋ-ಆಪರೇಟಿವ್ ಬ್ಯಾಂಕ್ ವಾರ್ಷಿಕ ಮಹಾ ಸಭೆಯು ನಗರದ ಸೂಲಿಬೆಲೆ ರಸ್ತೆಯಲ್ಲಿ ಇರುವಂತಹ ಹೆಚ್.ಜೆ.ಎಸ್.ಎಸ್ ಕನ್ವೆನ್ಷನ್ ಹಾಲ್ನಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಅಧ್ಯಕ್ಷರಾದ ಎ.ಅಪ್ಸರ್ರರು ನೇರವೇರಿಸಿದರು. ಬಳಿಕ ಮಾತನಾಡಿದ ಅವರು, ನಮ್ಮ ಬ್ಯಾಂಕ್ ಸ್ಥಾಪನೆಯಾಗಿ 110 ವರ್ಷಗಳನ್ನು ಕಳೆದಿದ್ದು, ಬ್ಯಾಂಕಿನಲ್ಲಿ ಷೇರುದಾರರಿಗೆ ಸಮಾಜ ಮುಖಿಯಾದ ಕೆಲಸ ಕಾರ್ಯಗಳನ್ನು ಮತ್ತು ಷೇರುದಾರರ ಶೈಕ್ಷಣಿಕ ಸೌಲಭ್ಯಗಳನ್ನು ನೀಡುತ್ತಿದೆ. ಪ್ರಸ್ತುತ ಸುಮಾರು 4.5 ಕೋಟಿ ಲಾಭದಲ್ಲಿ ನಮ್ಮ ಬ್ಯಾಂಕು ಅಭಿವೃದ್ಧಿಯ ಪಥದಲ್ಲಿ ನಡೆಯುತ್ತಿದೆ. ಇದರಿಂದ ಷೇರುದಾರರಿಗೆ ಈ ಬಾರಿ ಡಿವಿಡೆಂಟ್ ಸಹ ನೀಡುತ್ತೇವೆ ಎಂದರು.
ಕಳದೆರಡು ವರ್ಷ ಕೊರೊನಾ ಸೋಂಕಿನಿಂದ ಬ್ಯಾಂಕು ನೀಡಿದ್ದ ಸಾಲದಲ್ಲಿ ಎನ್.ಪಿ.ಎ ಆಗಿದ್ದರಿಂದ ಆರ್.ಬಿ.ಐ ಕಡೆಯಿಂದ ಷೇರುದಾರರಿಗೆ ಡಿವಿಡೆಂಟ್ ನೀಡಬಾರದೆಂದು ಸೂಚನೆ ನೀಡಿದ್ದರು. ಅದರಿಂದ ಡಿವಿಡೆಂಟ್ ನೀಡಲು ಸಾಧ್ಯವಾಗಿರಲಿಲ್ಲ.
ನಮ್ಮ ಬ್ಯಾಂಕಿನ ಎಲ್ಲಾ ಸಿಬ್ಬಂದಿಯವರ ಶ್ರಮದಿಂದ ಉತ್ತಮ ಸಾಲ ಮರು ಪಾವತಿ ಆಗಿರುವ ಕಾರಣ ಉತ್ತಮ ಲಾಭಾಂಶವು ಬಂದಿದೆ. ಇದೇ ತಿಂಗಳ ಅಂತ್ಯದ ಒಳಗೆ ಎಲ್ಲಾ ಷೇರುದಾರರ ಖಾತೆಗಳಿಗೆ ಡಿವಿಡೆಂಟ್ ಹಣವನ್ನು ಷೇರುದಾರರ ಖಾತೆಗಳಿಗೆ ಜಮಾ ಮಾಡುತ್ತೇವೆ ಮತ್ತು ಷೇರುದಾರರ ವಾರ್ಷಿಕ ಮಹಾಸಭೆಯಲ್ಲಿ ಆಡಳಿತ ಮಂಡಳಿತ ಅನೇಕ ಉತ್ತಮ ಸಲಹೆಗಳನ್ನು ನೀಡಿದ್ದಾರೆ. ಉತ್ತಮ ಸಲಹೆಗಳನ್ನು ಆಡಳಿತ ಮಂಡಳಿಯು ಸ್ವೀಕಾರ ಮಾಡುತ್ತದೆ ಎಂದರು.
ನಾವು ಈ ಹಿಂದೆ ನಮ್ಮ ಬ್ಯಾಂಕಿನಲ್ಲಿಯೇ ವಾರ್ಷಿಕ ಮಹಾಸಭೆಯನ್ನು ಮಾಡುತ್ತಿದ್ದೆವು. ಆಗ ಪಾರ್ಕಿಂಗ್ ಮತ್ತು ಊಟದ ವ್ಯವಸ್ಥೆಗೆ ಜಾಗದ ಕೊರತೆಯಿಂದಾಗಿ ಅವ್ಯವಸ್ಥೆಯಾಗುತ್ತಿತ್ತು. ಅದುದ್ದರಿಂದ ಈ ಬಾರಿ ನಮ್ಮ ಎಲ್ಲಾ ಆಡಳಿತ ಮಂಡಳಿಯ ನಿರ್ಧಾರದೊಂದಿಗೆ ಹೆಚ್.ಜೆ.ಎಸ್.ಎಸ್ ಹಾಲ್ನಲ್ಲಿ ಕಾರ್ಯಕ್ರಮ ಆಯೋಜಿಸಿದ್ದರಿಂದ ಕಾರ್ಯಕ್ರಮವು ಬಹಳ ಅಚ್ಚುಕಟ್ಟಾಗಿ ನಡೆದಿದೆ ಎಂದರು.
ಸಭೆಯಲ್ಲಿ ಷೇರುದಾರರು ಆಡಳಿತ ಮಂಡಳಿಗೆ ಹಣಕಾಸಿನ ವ್ಯವಹಾರದಲ್ಲಿ ಅನೇಕ ಪ್ರಶ್ನೆಗಳನ್ನು ಕೇಳಿದರು. ವ್ಯವಸ್ಥಾಪಕರಾದ ಎಂ. ಆಂಜಿನಪ್ಪನವರು ಷೇರುದಾರರ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಬಿ.ನಾಗರಾಜ್, ಮಾಜಿ ಅಧ್ಯಕ್ಷರಾದ ಬಾಲಚಂದ್ರನ್, ಪಿ.ಕೃಷ್ಣಪ್ಪ, ಸಿ.ನವೀನ್, ಜೀನತ್ಉಲ್ಲಾ, ಹಾಗೂ ನಿರ್ದೇಶಕರಾದ ವೆಂಕಟಲಕ್ಷ್ಮೀ, ಕಿರಣ್ಕುಮಾರ್, ರಾಜಶೇಖರ್, ಜಿ.ಟಿ.ಮೋಹನ್, ಎಚ್.ಬಿ. ನಾಗರಾಜ್, ಎಂ.ಅಂಬರೀಶ್, ಎಂ.ಚಂದ್ರಶೇಖರ್, ವ್ಯವಸ್ಥಾಪಕರಾದ ಆಂಜಿನಪ್ಪ, ಹಾಗೂ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.