ಸುದ್ದಿಮೂಲ ವಾರ್ತೆ
ಕೆ.ಆರ್.ಪುರ, ಸೆ.28: ಬೆಂಗಳೂರು ಪೂರ್ವ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ ‘ಬಿ’ ತರಗತಿ ಕೃಷ್ಣರಾಜಪುರ ಹೋಬಳಿ ಸಾಮಾನ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 101 ಮತ ಪಡೆಯುವ ಮೂಲಕ ಅಭ್ಯರ್ಥಿ ವೆಂಕಟರಾಮಯ್ಯ ಜಯಶೀಲರಾದರು ಎಂದು ಚುನಾವಣಾಧಿಕಾರಿ ಎಚ್.ಆರ್.ಗೋಪಾಲಕೃಷ್ಣ ತಿಳಿಸಿದ್ದಾರೆ.
ಬೆಂಗಳೂರು ಪೂರ್ವ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ.ನಿ ಯಲ್ಲಿ ಒಟ್ಟು 14 ಸ್ಥಾನಗಳು ಇದ್ದು ಇದರಲ್ಲಿ 13 ನಿರ್ದೇಶಕ ಸ್ಥಾನಗಳಲ್ಲಿ ಎ ತರಗತಿಯಲ್ಲಿ ಶಂಕರ್, ದೇವರಾಜು, ಈ.ರಾಜಪ್ಪ, ಪಿ.ಎಂ.ನಾಗರಾಜು, ಮೋಹನ್, ಆಂಜನೇಯ ರೆಡ್ಡಿ, ಹಾಗೂ ಬಿ ತರಗತಿಯಲ್ಲಿ ಮಂಜುನಾಥ್, ಅಮರಾವತಿ, ಎನ್.ವೆಂಕಟೇಶ್, ಶ್ರೀನಿವಾಸ್ ರೆಡ್ಡಿ, ಜಗದೀಶ್, ಸುಜಾತ, ಕಮಲಮ್ಮ ಇವರು ಅವಿರೋಧವಾಗಿ ಆಯ್ಕೆಯಾಗಿದ್ದರು.
ಗುರುವಾರ ಬಿ.ತರಗತಿಯ ಉಳಿದ ಒಂದು ಸಾಮಾನ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಭ್ಯರ್ಥಿ ವೆಂಕಟರಾಮಯ್ಯ 101 ಮತ ಪಡೆದ ವಿಜೇತರಾದರು. ಪ್ರತಿಸ್ಪರ್ಧಿ ಪರಾಜಿತ ಅಭ್ಯರ್ಥಿ ಶಿವನಗೌಡ 57 ಮತ ಹಾಗೂ ಮಂಜುರಾಜು 38 ಮತಗಳು ಪಡೆದರು.
ಚುನಾವಣೆಯಲ್ಲಿ ಒಟ್ಟು 198 ಮತ ಚಲಾವಣೆಯಾಗಿದ್ದು ಎರಡು ಮತಗಳು ತಿರಸ್ಕೃತವಾಗಿದೆ ಎಂದು ಚುನಾವಣಾಧಿಕಾರಿ ಎಚ್.ಆರ್.ಗೋಪಾಲಕೃಷ್ಣ ತಿಳಿಸಿದರು.