ಸುದ್ದಿಮೂಲವಾರ್ತೆ
ಕೊಪ್ಪಳ, ಸೆ.29: ವಿಶ್ವಹಿಂದು ಪರಿಷತ್ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ಸೆ 30 ರಂದು ಅಂಜನಾದ್ರಿಯ ಮೂಲಕ ಹಿಂದು ಶೌರ್ಯ ಜಾಗರಣಾ ಯಾತ್ರೆಯು ಆಗಮಿಸಿ ಕೊಪ್ಪಳ ಜಿಲ್ಲೆಗೆ ಆಗಮಿಸಲಿದೆ ಎಂದು ವಿಶ್ವ ಹಿಂದು ಪರಿಷತ್ ಜಾಗರಣಾ ವೇದಿಕೆ ವಿನಯ ಪಾಟೀಲ ಹೇಳಿದ್ದಾರೆ.
ಅವರು ಕೊಪ್ಪಳದ ಮೀಡಿಯಾ ಕ್ಲಬ್ ಮಾಹಿತಿ ಜಾಗರಣಾ ಯಾತ್ರೆಯ ನೀಡಿ ಬಳ್ಳಾರಿ, ಕೊಪ್ಪಳ, ವಿಜಯನಗರ ಹಾಗು ರಾಯಚೂರು ಜಿಲ್ಲೆಯಲ್ಲಿ ನಡೆಯಲಿದೆ ಎಂದರು.
ಯಾತ್ರೆಯು ಕೊಪ್ಪಳ ಜಿಲ್ಲೆಯಲ್ಲಿ ನಾಲ್ಕು ದಿನಗಳ ಕಾಲ ನಡೆಯಲಿದೆ. ಅ 3 ರಂದು ಭಾಗ್ಯನಗರದಲ್ಲಿ ಬಹಿರಂಗ ಸಭೆ ನಡೆಯಲಿದೆ. ಇಲ್ಲಿಂದ ಯಾತ್ರೆಯು ವಿಜಯನಗರ ಜಿಲ್ಲೆಗೆ ಪ್ರವೇಶ ಮಾಡಲಿದೆ. ವಿಭಾಗದ ಯಾತ್ರೆಯು ಮಾನವಿಯಲ್ಲಿ ಮುಕ್ತಾಯಗೊಳ್ಳಲಿದೆ ಎಂದರು.
ಈ ಸಂದರ್ಭದಲ್ಲಿ ರಾಮಾಂಜನೇಯ, ಕೆ ದೊಡ್ಡಬಸವಯ್ಯ, ಉಮೇಶ ಕುರ್ಡೇಕರ, ಅನಿಲ ಕುಂಕಮದಾರ ಇದ್ದರು.