ಸುದ್ದಿಮೂಲ ವಾರ್ತೆ
ಬೆಂಗಳೂರು, ಸೆ.30: ಇದು ನಿಮ್ಮ ವಾಹಿನಿ ಕಲಾ ವೇದಿಕೆ ಅಧ್ಯಕ್ಷರಾಗಿ ಡಾ. ಮಹೇಂದ್ರ ನಾಥ್ ಶರ್ಮಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಶನಿವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಡಾ. ಮಹೇಂದ್ರನಾಥ್ ಶರ್ಮಾ ಅವರು ಆಯ್ಕೆಯಾಗಿದ್ದು, ಅವರ ಅಧಿಕಾರಾವಧಿ ಮುಂದಿನ ಮೂರು ವರ್ಷಗಳ ವರೆಗೆ ಇರಲಿದೆ.
ಚುನಾವಣಾ ಪ್ರಕ್ರಿಯೆ ಬಳಿಕ ಇದು ನಿಮ್ಮ ವಾಹಿನಿ ಕಲಾ ವೇದಿಕೆ ಅಧ್ಯಕ್ಷರಾದ ಕಿಶೋರ್ ಕುಮಾರ್ರವರು ಡಾ ಮಹೇಂದ್ರ ನಾಥ್ ಶರ್ಮರವರಿಗೆ ಅಧ್ಯಕ್ಷತೆಯ ಪ್ರಮಾಣ ಪತ್ರವನ್ನು ಹಸ್ತಾಂತರ ಮಾಡಿದರು.
ಬಳಿಕ ಮಾತನಾಡಿದ ಡಾ. ಮಹೇಂದ್ರನಾಥ್ ಶರ್ಮಾ ಆವರು, ಕಲಾ ವೇದಿಕೆ ನಾಡಿನ ಉದ್ದಗಲಕ್ಕೂ ಇರುವ ಸಾಧಕರನ್ನು ಗುರುತಿಸಿ ಸನ್ಮಾನ ಮಾಡುವ ಸಾಂಸ್ಕೃತಿಕ ವೇದಿಕೆಯಾಗಿದೆ. ತಮ್ಮ ಮುಂದಿನ ಮೂರು ವರ್ಷಗಳ ಅಧಿಕಾರಾವಧಿಯಲ್ಲಿ ನಾಡು, ನುಡಿಗಾಗಿ ಶ್ರಮಿಸಿದಂತಹ ಸಾಧಕರನ್ನು ಗುರುತಿಸುವ ಮತ್ತು ಸತ್ಕರಿಸುವ ಕೆಲಸವನ್ನು ಸತತಾವಾಗಿ ಮುಂದುವರಿಸಲಾಗುವುದು ಎಂದು ಅವರು ಈ ವೇಳೆ ಮಾಧ್ಯಮಗಳಿಗೆ ತಿಳಿಸಿದರು.