ಸುದ್ದಿಮೂಲವಾರ್ತೆ
ಕೊಪ್ಪಳ,ಅ.1:ಹಿರಿಯ ನಾಗರಿಕ ದಿನಾಚರಣೆ ಹಿನ್ನಲೆಯಲ್ಲಿ ಕೊಪ್ಪಳ ತಾಲೂಕಿನ ಹೊಸಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿನ ಶತಾಯುಷಿ ಮತದಾರರಿಂದ ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಿದರು.
ದೀರ್ಘಾಯುಷ್ಯ ದೊರೆಯುವದು ಅವರ ಸೌಭಾಗ್ಯವೆಂದು ಕೊಪ್ಪಳ ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ ಹೇಳಿದರು.
ಆಧುನಿಕ ಜೀವನ ಬಹಳಷ್ಟು ಒತ್ತಡದಿಂದ ಕೂಡಿದ್ದು ಎಲ್ಲರೂ ಸಮಾಧಾನ, ತಾಳ್ಮೆ ತೆಗೆದುಕೊಂಡು ಕಾರ್ಯನಿರ್ವಹಿಸುವದು ಅವಶ್ಯವಾಗಿದೆ. ಹಾಲಿ ಇರುವ ಶತಾಯುಷಿ ಮತದಾರರಿಗೆ ದೀರ್ಘಾಯುಷ್ಯ ಕಲ್ಪಿಸಿರುವದು ದೇವರು ಅವರಿಗೆ ನೀಡಿದ ಕಾಣಿಕೆಯಾಗಿದೆ. ಆರೋಗ್ಯ ಇದ್ದಲ್ಲಿ ಮಾತ್ರ ನಾವು ದೀರ್ಘಾಯುಷಿಗಳಾಗುವದರಲ್ಲಿ ಸಂದೇಹವಿಲ್ಲವೆಂದರು. ತಹಶೀಲ್ದಾರರಾದ ವಿಠ್ಠಲ್ ಚೌಗಲಾ ಶತಾಯುಷಿ ಮತದಾರರ ಜೊತೆಗೆ ಚರ್ಚಿಸಿದರು.
ಹೊಸಲಿಂಗಾಪುರ ಗ್ರಾಮದ ಶತಾಯುಷಿ ಮತದಾರ ಹನಮಮ್ಮ ಕೊಂ.ಹನಮಂತಗೌಡ ಹೊಟ್ಟಿ (103) ಹಾಗು ಹೊಸಳ್ಳಿ ಗ್ರಾಮದ ಶತಾಯುಷಿ ಮತದಾರ ಶಾರದಮ್ಮ ಗುರುಸೋಮಪ್ಪ ಈಳಿಗೇರ (100) ಇವರ ವಾಸದ ಗೃಹಕ್ಕೆ ತಹಶೀಲ್ದಾರರು ಹಾಗು ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮ ಪಂಚಾಯತಿಯ ಆಡಳಿತ ಮಂಡಳಿಯ ತಂಡವು ಆಗಮಿಸಿ ಕೇಕ್ ಕತ್ತರಿಸುವ ಮೂಲಕ ಸಂಭ್ರಮಿಸಿ ಶಾಲು ಹೋದಿಸಿ ಹಣ್ಣು ತಟ್ಟೆ, ಪ್ರಶಸ್ತಿ ವಿತರಿಸಿ ಗೌರವಿಸಿತು.
ಕಾರ್ಯಕ್ರಮದಲ್ಲಿ ಹೊಸಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷ ಮಾರುತಿ ಬಗನಾಳ, ಗ್ರಾಮ ಪಂಚಾಯತಿ ಸದಸ್ಯರಾದ ನಿಂಗನಗೌಡ ಬೇವೂರು, ಖಾಜಾವಲಿ ಕಿನ್ನಾಳ, ಶರೀಫಸಾಬ ದೊಡ್ಡಮನಿ, ಉಪತಹಶೀಲ್ದಾರ ರೇಖಾ ದೀಕ್ಷಿತ್, ತಾಲೂಕ ಪಂಚಾಯತಿಯ ಬಸವರಾಜ ಬಳಿಗಾರ, ಐಇಸಿ ಸಂಯೋಜಕ ದೇವರಾಜ ಪತ್ತಾರ, ದ್ವೀತಿಯ ದರ್ಜೆ ಲೆಕ್ಕ ಸಹಾಯಕ ಅಲ್ಲಾಭಕ್ಷಿ, ಗ್ರಾಮ ಪಂಚಾಯತಿಯ ಎಲ್ಲಾ ಸಿಬ್ಬಂದಿಗಳು ಹಾಜರಿದ್ದರು.