ಸುದ್ದಿಮೂಲ ವಾರ್ತೆ
ಅ.1:ಭಾರತದ ಹಸಿರು ಕ್ರಾಂತಿಯ ಪಿತಾಮಹ ಎಂಎಸ್ ಸ್ವಾಮಿನಾಥನ್ ರವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ತಿಪಟೂರಿನ ರೈತ ಭವನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಕರ್ನಾಟಕ ಪ್ರಾಂತ ರೈತ ಸಂಘ ಸೌಹಾರ್ದ ತಿಪಟೂರು ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ರೈತ ಮುಖಂಡ ಮನೋಹರ್ ಪಟೇಲ್ ಮಾತನಾಡಿ ನೆಹರುರವರು ಸ್ಥಾಪಿಸಿದ ಕೇಂದ್ರದಲ್ಲಿ ವೈಜ್ಞಾನಿಕ ತಳಿ ಸಂಶೋಧನೆಗಳನ್ನು ಆರಂಭಿಸಿದ ಎಂ ಎಸ್ ಸ್ವಾಮಿನಾಥನ್ ರವರು ಭಾರತದ ಆಹಾರ ಕ್ರಾಂತಿಯಲ್ಲಿ ಭಾರಿ ಪ್ರಮುಖ ಪಾತ್ರವಹಿಸಿದರು. ಭತ್ತ ಮತ್ತು ಗೋಧಿಯ ಅಧಿಕ ಇಳುವರಿಯ ತಳಿಯನ್ನು ಅಭಿವೃದ್ಧಿಪಡಿಸಿ ಆಹಾರದ ಅಭಾವವನ್ನು ನೀಗಿಸುವಲ್ಲಿ ಅಂದಿನ ಕಾಲಘಟ್ಟಕ್ಕೆ ಯಶಸ್ವಿಯಾಗಿದ್ದರು.
ಡಾಕ್ಟರ್ ಎಂ ಎಸ್ ಸ್ವಾಮಿನಾಥನ್ ರವರ ಕಾರ್ಯಗಳಿಗೆ ಮೆಚ್ಚಿ ಹಲವಾರು ಪ್ರಶಸ್ತಿಗಳು ಅಮೆರಿಕ ಕೂಡ ಅವರಿಗೆ ಗೌರವಿಸಿತ್ತು. ರೈತರು ಬೆಳೆವ ಬೆಲೆಯ ಖರ್ಚಿನ ಒಂದುವರೆ ಪಟ್ಟು ಲಾಭ ಅವರ ಇಳುವರಿಗೆ ಬರಬೇಕು ಎಂಬ ವರದಿಯನ್ನು ಕೊಟ್ಟಿದ್ದ ಅವರು ಅದರಿಂದ ರೈತರು ಇಂದು ಎಂ ಎಸ್ ಪಿ ಕೇಳಲು ಸಾಧ್ಯವಾಯಿತು ಎಂದರು. ಶ್ರದ್ಧಾಂಜಲಿ ಸಭೆಯಲ್ಲಿ ಸೌಹಾರ್ದ ಸಂಘಟನೆ ಎಲ್ಲಾ ಅವಕಾಶ ಮಾತನಾಡಿ ಕ್ರಾಂತಿಯ ಹರಿಕಾರ ಎಂದು ಸ್ವಾಮಿನಾಥನ್ ರೈತರ ಉತ್ಪಾದನೆಯ ಮೇಲೆ ಬೆಲೆ ನಿಗದಿಯಾಗಬೇಕೆಂಬ ಅವರ ವರದಿಯನ್ನು ಆಧರಿಸಿ ಮುಂದಿನ ದಿನಗಳಲ್ಲಿ ಹೆಚ್ಚು ಹೋರಾಟ ಮಾಡುವುದು ಅವರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ ಎಂದರು, ಈ ಸಭೆಯಲ್ಲಿ ಹಸಿರು ಸೇನೆಯ ದೇವರಾಜ್ ತಿಮ್ಲಾಪುರ ಕರ್ನಾಟಕ ರಾಜ್ಯ ರೈತ ಸಂಘದ ಜಯಚಂದ್ರ ಶರ್ಮ ಕಾರ್ಯದರ್ಶಿ ಹರೀಶ್ ಪ್ರಾಂತ ರೈತ ಸಂಘದ ಚನ್ನಬಸವಣ್ಣ ರಾಜಮ್ಮ ಚಂದನ್ ಆರ್ ವೈ ಟಿ ಯ ತಾಸೀನಗ ಶರೀಪ್ ಉಪಸ್ಥಿತರಿದ್ದರು.