ಸುದ್ದಿಮೂಲ ವಾರ್ತೆ
ಬೆಂಗಳೂರು, ಅ.3 : ರೀ ರೈಲನ್ನು ಕೊನೆಗೂ ಮೇಲೆತ್ತಲಾಗಿದ್ದು, ಕೆಲವೇ ಗಂಟೆಗಳಲ್ಲಿ ಹಸಿರು ಮಾರ್ಗದ ಮೆಟ್ರೋ ಸೇವೆ ಲಭ್ಯವಾಗಲಿದೆ. ಸತತ 12 ಗಂಟೆಗಳ ಕಾರ್ಯಾಚರಣೆ ಫಲ ನೀಡದೆ, ಕ್ರೇನ್ ಮೂಲಕ ನಿರ್ವಹಣಾ ವಾಹನವನ್ನು ಮೇಲಕ್ಕೆ ಎತ್ತಲಾಗಿದೆ.
ರಾಜಾಜಿನಗರದ ಮೆಟ್ರೋ ಟ್ರ್ಯಾಕ್ ಮೇಲೆ 17 ಟನ್ ಇರುವ ಮೆಂಟೈನ್ಸ್ ವಾಹನ ಹಳಿತಪ್ಪಿ ನಿಂತಿತ್ತು. ಈ ರೀ ರೈಲಿನ ಚಕ್ರಗಳು ಜಾಮ್ ಆದ ಕಾರಣ ವಾಪಸ್ ಹಳಿ ಮೇಲೆ ಕೂರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ, 200 ಟನ್ ಅನ್ನು ಮೇಲೆತ್ತೆವು ಕ್ರೇನ್ ಬಳಸಿ ಟ್ರ್ಯಾಕ್ ನಿಂದ ಹೊರ ತರಲಾಯಿತು.
ರಿ ರೈಲನ್ನು ನಾಲ್ಕು ಕಡೆಗೂ ಬೆಲ್ಟ್ ಹಾಕಿ ಕ್ರೇನ್ ಮೂಲಕ ನಿಧಾನವಾಗಿ ಮೇಲೆತ್ತಿ ನಂತರ ಕೆಳಗೆ ಇಳಿಸಲಾಯಿತು ಎಂದು ಆಪರೇಷನ್ ಆ್ಯಂಡ್ ಮೆಂಟೇನೆನ್ಸ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶಂಕರ್ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ್ ಚವ್ಹಾಣ್, ನಮ್ಮ ಮೆಟ್ರೋ ನೆಟ್ ವರ್ಕ್ ವಿಸ್ತರಣೆ ಆಗುತ್ತಿದೆ. ಪ್ರತಿ ಡಿಪೋದಲ್ಲಿ ರೋಡ್ ಕಂ ರೈಲ್ವೆ ವೆಹಿಕಲ್ ಇರುತ್ತದೆ. ಮೆಟ್ರೋ ರೈಲು ಕೆಟ್ಟು ನಿಂತರೆ ಅದನ್ನು ಈ ರೈಲ್ವೆ ವೆಹಿಕಲ್ ಹಳಿಯಲ್ಲಿ ಹೋಗಿ ಸರಿ ಪಡಿಸುತ್ತದೆ. ಈ ರೋಡ್ ಕಂ ರೈಲಿನಲ್ಲಿ ಮೆಟ್ರೋ ಸರಿಪಡಿಸುವ ಗ್ಯಾಜೇಟ್ಸ್ ಗಳಿರುತ್ತದೆ. ಸೋಮವಾರ ರಾತ್ರಿ ಈ ವೆಹಿಕಲ್ ಕಾರ್ಯಾಚರಣೆಗೆ ಹೋದಾಗ ಕೆಟ್ಟು ಹೋಗಿದ್ಯಾ ಅಥವಾ ಹಳಿ ತಪ್ಪಿದ್ಯಾ ಎಂಬ ಮಾಹಿತಿ ಇಲ್ಲ ಎಂದರು.
ಏನಾಗಿತ್ತು?
ರಾಜಾಜಿನಗರ ಮೆಟ್ರೊ ನಿಲ್ದಾಣದ ತಿರುವಿನಲ್ಲೇ ನಿರ್ವಹಣೆಗಾಗಿ ಹೋಗಿದ್ದ ರೀ ರೈಲ್ ವಾಹನ ಹಳಿಯಲ್ಲೇ ಸಿಲುಕಿತ್ತು. ಪರಿಣಾಮ ಹಸಿರು ಮಾರ್ಗದಲ್ಲಿ ಮೆಟ್ರೋ ಓಡಾಟದಲ್ಲಿ ಮಂಗಳವಾರ ವ್ಯತ್ಯಯ ಉಂಟಾಗಿತ್ತು. ಮೆಂಟೈನ್ಸ್ ವೆಹಿಕಲ್ ಆಯತಪ್ಪಿ ಟ್ರ್ಯಾಕ್ನಿಂದ ವಾಲಿದ ಪರಿಣಾಮ ಹೀಗಾಗಿದೆ ಎನ್ನಲಾಗಿತ್ತು.
ತೊಂದರೆಗೆ ಸಿಲುಕಿದ ಪ್ರಯಾಣಿಕರು : ಸಾಲು ಸಾಲು ರಜೆಯನ್ನು ಮುಗಿಸಿ ವಾಪಸ್ ತಮ್ಮ ಕೆಲಸ- ಕಾರ್ಯಗಳತ್ತ ಮುಖ ಮಾಡಿದ್ದ ಜನರಿಗೆ ಇದು ಅನಾನುಕೂಲ ಉಂಟು ಮಾಡಿತ್ತು. ಪೀಕ್ ಅವರ್ನಲ್ಲೇ ರೈಲು ಓಡಾಟವು ಸ್ಥಗಿತವಾಗಿದ್ದರಿಂದ ಪ್ರಯಾಣಿಕರು ಪರದಾಡುವಂತಾಗಿತ್ತು. ಶಾಲಾ-ಕಾಲೇಜು ಮಕ್ಕಳಿಂದ ಹಿಡಿದು ಉದ್ಯೋಗಿಗಳಿಗೆ ಸಮಸ್ಯೆ ಆಗಿತ್ತು. ಮೆಟ್ರೋ ಅರ್ಧಕ್ಕೆ ಕೈಕೊಟ್ಟ ಪರಿಣಾಮ ಬಹುತೇಕರು ಬಿಎಂಟಿಸಿ ಬಸ್ನತ್ತ ಹೆಜ್ಜೆ ಹಾಕಿದ್ದರು. ಇತ್ತ ಒಂದು ಟ್ರ್ಯಾಕ್ ಬಳಕೆಗೆ ಬರದ ಕಾರಣಕ್ಕೆ ಏಕಮುಖವಾಗಿ ಮಾತ್ರ ರೈಲುಗಳು ಸಂಚರಿಸುತ್ತಿದ್ದವು.
5 ನಿಮಿಷಕ್ಕೊಂದು ಓಡಾಡುತ್ತಿದ್ದ ರೈಲು ಈಗ ಅರ್ಧ ಗಂಟೆಗೊಮ್ಮೆ ರೈಲು ಓಡಾಡುತ್ತಿದ್ದವು. ಯಶವಂತಪುರ ಮೆಟ್ರೋ ನಿಲ್ದಾಣವು ಪ್ರಯಾಣಿಕರಿಂದ ತುಂಬಿ ಹೋಗಿತ್ತು. ಫ್ಲಾಟ್ ಫಾರಂನಲ್ಲಿ ಜನರು ನಿಲ್ಲಲು ಆಗದಷ್ಟು ಕಿಕ್ಕಿರಿದು ತುಂಬಿದ್ದರು. ಕೆಲವರು ಮೆಟ್ರೋ ಪ್ರವೇಶ ದ್ವಾರದ ಗ್ಲಾಸ್ಅನ್ನು ಕಾಲಿನಲ್ಲಿ ಒದ್ದು ದಾಟಿ ಹೋಗಿದ್ದಾರೆ. ಯಶವಂತಪುರ ಮೆಟ್ರೋ ನಿಲ್ದಾಣದ ಪ್ರವೇಶ ದ್ವಾರಗಳನ್ನು ಮೆಟ್ರೋ ಸಿಬ್ಬಂದಿ ಬಂದ್ ಮಾಡಿದ್ದರು.