ಬೆಂಗಳೂರು, ಅ, ೪; ಪಂಚವರ್ಣ ಯುವಕ ಮಂಡಲ ಕೋಟ ಹಾಗೂ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ನವೆಂಬರ್ ತಿಂಗಳಲ್ಲಿ ಸದ್ಭಾವನಾ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಈ ಬಾರಿ ನವೆಂಬರ್ 10 ರಂದು ದಕ್ಷಿಣ ಕನ್ನಡದ ಕೋಟದ ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿದೆ.
ಪಂಚವರ್ಣ ಯುವಕ ಮಂಡಲ ಅಧ್ಯಕ್ಷ ಅಧ್ಯಕ್ಷ ಅಜಿತ್ ಆಚಾರ್ ಈ ವಿಷಯ ತಿಳಿಸಿದದು, ಪ್ರತಿವರ್ಷ ರಾಜ್ಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಸಾಧಕರಿಗೆ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡುತ್ತಾ ಬಂದಿದ್ದು ಈ ಬಾರಿ ಕನ್ನಡ ಚಿತ್ರರಂಗದ ಶ್ರೇಷ್ಠ ನಟ ದೊಡ್ಡಣ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಪ್ರಶಸ್ತಿ 15ಸಾವಿರ ಮೌಲ್ಯದ ಬೆಳ್ಳಿ ಸ್ಮರಣಿ, ನಗದು ಒಳಗೊಂಡಿದೆ.
ಇದೇ ವೇಳೆ ವಿಶೇಷ ಅಭಿನಂದನೆಯನ್ನು ಅಮ್ಮಚ್ಚಿ ಎಂಬ ನೆನಪು ಚಿತ್ರದ ನಾಯಕ ರಂಗನಟ ಡಾ.ರಾಧಕೃಷ್ಣ ಉರಾಳ ಇವರಿಗೆ ನೀಡಲಿದ್ದು, ವಿಶೇಷ ಪುರಸ್ಕಾರವನ್ನು ಪರಿಸರಸ್ನೇಹಿ ಸಂಘಟನೆ ಕ್ಲಿನ್ ತ್ರಾಸಿ ತಂಡಕ್ಕೆ ನೀಡಿ ಗೌರವಿಸಲಾಗುತ್ತಿದೆ.
ಪ್ರತಿಭಾ ಪುರಸ್ಕಾರ, ಅಶಕ್ತರಿಗೆ, ಅನಾರೋಗ್ಯ ಪೀಡಿತರಿಗೆ ನೆರವು, ಸ್ಥಳೀಯ ಅಂಗನವಾಡಿಗೆ ಸಮವಸ್ತ್ರ, ಕನ್ನಡ ಮಾಧ್ಯಮ ಸರಕಾರಿ ಶಾಲೆಗಳಿಗೆ ದತ್ತಿನಿಧಿ ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಈ ವೇದಿಕೆಯಲ್ಲಿ ನೀಡಲಾಗುತ್ತಿದೆ. ಮಂಗಳೂರು ಪ್ರಸಿದ್ಧ ನಾಟಕ ತಂಡ ದೇವದಾಸ್ ಕಾಪಿಕಾಡ್ ನಿರ್ದೇಶನದ ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಹೇಳಿದ್ದಾರೆ.