ಸುದ್ದಿಮೂಲ ವಾರ್ತೆ
ಮೈಸೂರು,ಅ.5:ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಶಿವಕುಮಾರ್ ಆರಾಧ್ಯ ಎಂಬುವರು ಮಂಡ್ಯ ತಾಲೂಕಿನ ಉಪ್ಪಾರಕನಹಳ್ಳಿ ಗ್ರಾಮದಲ್ಲಿ ಸ್ವತಃ ಭೂಮಿಯೊಳಗೆ ಸಮಾಧಿಯಾಗಿ ವಿನೂತನ ಪ್ರತಿಭಟನೆ ನಡೆಸಿದ್ದಾರೆ.
ಕಾಂಗ್ರೆಸ್ ಸರ್ಕಾರ ತಮಿಳುನಾಡಿಗೆ ನೀರು ಹರಿಸುವ ಮೂಲಕ ರೈತರನ್ನು ಜೀವಂತ ಸಮಾಧಿ ಮಾಡುತ್ತಿದೆ. ಇಷ್ಟು ದಿನ ವಿರೋಧಿ ಘೋಷಣೆ ಕೂಗಿದ್ವಿ. ಇನ್ನು ಅವರ ಪರವಾಗಿ ಘೋಷಣೆ ಕೂಗುತ್ತೇವೆ. ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸುವುದನ್ನ ನಿಲ್ಲಿಸುವುದಿಲ್ಲ. ವರುಣನ ಕೃಪೆಯಿಂದ ಜಲಾಶಯ ತುಂಬುತ್ತಿದೆ. ರೈತರನ್ನು ಸಮಾಧಿ ಮಾಡುವುದನ್ನು ಬಿಟ್ಟು ಇನ್ನಾದ್ರು ನೀರು ಹರಿಸುವುದನ್ನು ನಿಲ್ಲಿಸಲಿ ಎಂದು ಆಗ್ರಹಿಸಿದ್ದಾರೆ.