ಸುದ್ದಿಮೂಲ ವಾರ್ತೆ
ಹೊಸಕೋಟೆ, ಅ.5 : ಬುದ್ಧಿಮಾಂದ್ಯನಂತೆ ನಟಿಸುತ್ತಾ ಹೊಸಕೋಟೆ ನಗರದ ವಿವಿಧ ಬಡಾವಣೆಗಳಲ್ಲಿ ಹಾಗು ಬಸ್ ನಿಲ್ದಾಣಗಳಲ್ಲಿ ಬಸ್ ಹತ್ತುವ ಹಾಗು ಇಳಿಯುವವರ ಗಮನ ಬೇರೆಡೆ ಸೆಳೆದು ಸುಮಾರು 50 ಲಕ್ಷ ಮೌಲ್ಯದ 150 ಕ್ಕೂ ಹೆಚ್ಚು ಮೊಬೈಲ್ ಪೋನ್ಗಳನ್ನು ಕಳ್ಳನತ ಮಾಡಿದ್ದ ಕಳ್ಳನನ್ನು ಹೊಸಕೋಟೆ ಪೋಲೀಸ್ ಠಾಣೆ ಇನ್ಸ್ಪೆಕ್ಟರ್ ಬಿ.ಎಸ್ ಅಶೋಕ್ ಹಾಗು ಸಿಬ್ಬಂದಿಗಳು ಬಂಧಿಸಿದ್ದಾರೆ.
ಬೆಂಗಳುರು ಗ್ರಾಮಾಂತರ ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜನ ಬಾಲದಂಡಿ , ವಿವಿಧ ಕಂಪನಿಗಳ 150 ಕ್ಕೂ ಹೆಚ್ಚು ಮೊಬೈಲ್ ಪೋನ್ಗಳನ್ನು ಕಳ್ಳನತ ಮಾಡಿದ್ದು,
ಮೊಬೈಲ್ ಲಾಕ್ಗಳನ್ನು ಓಪನ್ ಮಾಡಿ ಗೂಗಲ್ ಪೇ, ಪೋನ್ ಪೇ ಮೂಲಕ ಸುಮಾರು 2 ಲಕ್ಷದವರಗೂ ಹಣ ಲಪಟಾಯಿಸಿದ್ದಾನೆ. ಹೊಸಕೋಟೆ ಪೋಲೀಸ್ ಠಾಣೆ ಇನ್ಸ್ಪೆಕ್ಟರ್ ಬಿ.ಎಸ್ ಅಶೋಕ್ ಹಾಗು ಸಿಬ್ಬಂದಿ ಆತನನ್ನು ಬಂಧಿಸಿದ್ದಾರೆ ಎಂದರು.
ವೃದ್ದೆಯೊಬ್ಬರಿಗೆ ಕಬ್ಭಿಣದ ರಾಡಿನಿಂದ ಹಲ್ಲೆ ಮಾಡಿ 180 ಗ್ರಾಂ ಚಿನ್ನದ ಮಾಂಗಲ್ಯ ಸರ ಕದ್ದು ಪರಾರಿಯಾಗಿದ್ದರನನ್ನು ಹೊಸಕೋಟೆ ಪೋಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದ ವಯೋವೃದ್ದರು, ಮಕ್ಕಳೊಂದಿಗೆ ಇರುವ ಮಹಿಳೆಯರನ್ನು ಟಾರ್ಗೆಟ್ ಮಾಡಿ ಅವರಿಗೆ ಸಹಾಯ ಮಾಡುವ ನೆಪದಲ್ಲಿ ಅವರ ಗಮನ ಬೇರೆಡೆ ಸೆಳೆದು ಸುಮಾರು 125 ಗ್ರಾ ಚಿನ್ನಾಭರಣ ಕಳವು ಮಾಡಿದ್ದ ಮಹಿಳೆಯನ್ನು ಬಂಧಿಸುವಲ್ಲಿ ಹೊಸಕೋಟೆ ಪೋಲೀಸರು ಯಶಸ್ವಿಯಾಗಿದ್ದಾರೆ. ಸುಮಾರು 1ಕೋಟಿಗೂ ಹೆಚ್ಚು ಮೌಲ್ಯದ ಚಿನ್ನಾಭರಣ,ನಗದ ಹಾಗು ಮೊಬೈಲ್ ಪೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ಶಂಕರ್ಗೌಡ ಅಣ್ಣಾ ಸಾಹೇಬ್ ಪಾಟೀಲ್ ರವರ ಮಾರ್ಗದರ್ಶನದಲ್ಲಿ ಪಾಲ್ಗೊಂಡಿದ್ದ ಹೊಸಕೋಟೆ ಪೋಲೀಸ್ ಠಾಣೆ ಇನ್ಸ್ಪೆಕ್ಟರ್ ಬಿ.ಎಸ್ ಅಶೋಕ್, ಪಿಎಸ್ಐ ಮುನಿರಾಜು, ಅಪರಾದ ಸಿಬ್ಬಂದಿಗಳಾದ ದತ್ತಾತ್ರೇಯ. ಪ್ರಕಾಶ್ ಬಾಬು, ರಮೇಶ್, ನಾಗರಾಜು, ವಿಠಲ್, ಜೊಯಲ್ ಜೊರಾಲ್ಡ್, ಗೋಪಾಲ್, ಮತಿವಣ್ಣನ್, ಜಗನ್ನಾಥ್, ಮಹಿಳಾ ಪಿಸಿ ಮುಬಾರಕ್ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಅಪರ ಪೋಲೀಸ್ ಅದೀಕ್ಷಕರಾದ ಎಂ.ಎಲ್.ಪುರುಶೋತ್ತಮ್ ರವರು ಹಾಜರಿದ್ದರು.