ಸುದ್ದಿಮೂಲ ವಾರ್ತೆ
ಮೈಸೂರು, ಅ.8:ನಗರದಲ್ಲಿ ಕಾವೇರಿ ಕ್ರಿಯಾ ಸಮಿತಿಯಿಂದ ಪ್ರತಿದಿನ ನಡೆಯುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಸದಸ್ಯರು ಭಾನುವಾರ ಭಾಗಿಯಾಗಿ, ಬೆಂಬಲ ಸೂಚಿಸಿದರು.
ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಮಾತನಾಡಿ, ಮೊನ್ನೆ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಸಿದ್ದರಾಮಯ್ಯ ರವರಿಗೆ ನೀವು ನಮಗೆ ನೀರು ಬಿಡುವುದನ್ನು ನಿಲ್ಲಿಸಿದರೆ ನಾವು ಇಂಡಿಯಾ ಮೈತ್ರಿ ಕೂಟದಿಂದ ಹೊರಹೋಗುತ್ತೇವೆಂದು ಎಚ್ಚರಿಕೆ ನೀಡಿ ನಮಗೆ ನಮ್ಮ ರೈತರ ಹಿತಾಸಕ್ತಿ ಮುಖ್ಯ ಎಂದಿದ್ದಾರೆ. ಈ ರೀತಿ ನಮ್ಮ ರಾಜ್ಯದ ಮುಖ್ಯಮಂತ್ರಿ ಏಕೆ ನಮ್ಮ ರೈತರ ಪರವಾಗಿಲ್ಲ. ಇದು ನಿಜಕ್ಕೂ ಖಂಡನೀಯ ಎಂದು ಟೀಕಿಸಿದರು.
ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಸಿ ಜಿ ಗಂಗಾಧರ್ ನೇತೃತ್ವವನ್ನು ವಹಿಸಿ, ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷ ಜಯಪ್ರಕಾಶ್, ಮೂಗೂರು ನಂಜುಂಡಸ್ವಾಮಿ, ಮೋಹನ್ ಕುಮಾರ್ ಗೌಡ, ಸುರೇಶ್ ಗೌಡ, ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಕಾರ್ಯಾಧ್ಯಕ್ಷೆ ಸುಮಿತ್ರಾ ರಮೇಶ್, ಶಿವಲಿಂಗಯ್ಯ, ಮಂಡ್ಯ ಅಧ್ಯಕ್ಷೆ ಸುಜಾತ, ಸುರೇಶ್ ಗೋಲ್ಡ್, ದುರ್ಗಮ್ಮ, ವಿಜಯೇಂದ್ರ, ಕೃಷ್ಣಯ್ಯ, ನಳಿನಿ, ಡಾ. ನರಸಿಂಹೇ ಗೌಡ, ಹನುಮಂತಯ್ಯ, ಪುಷ್ಪವತಿ, ಶುಭಶ್ರೀ, ಮಂಜುಳ, ಹನುಮಂತೇಶ್, ಸೋಮೇಗೌಡ, ಹೇಮಂತ್, ಪ್ರಭಾಕರ್, ಆರ್ ಮಹಾದೇವ ಮೊದಲಾದವರು ಇದ್ದರು.