ಸುದ್ದಿಮೂಲ ವಾರ್ತೆ
ಮಂಡ್ಯ, ಅ.09:ಬರದನಾಡು ಚಿತ್ರದುರ್ಗದಿಂದ ನೀರು ತಂದು ಮಂಡ್ಯದಲ್ಲಿ ವಿನೂತನ ಪ್ರತಿಭಟನೆ ನಡೆಸಲಾಯಿತು.
ವಿಜಯ ಸೇನೆ ಕಾರ್ಯಕರ್ತರಿಂದ ಚಿತ್ರದುರ್ಗದಿಂದ ತಂದಿದ್ದ ಬಿಸ್ಲೇರಿ ನೀರು ಹಾಗೂ ಟಿಶ್ಯು ಪೇಪರ್ ಅನ್ನು ಜಿಲ್ಲಾಧಿಕಾರಿ ಡಾ.ಕುಮಾರ್ ಅವರಿಗೆ ನೀಡಿ, ಅದನ್ನು ಮುಖ್ಯಮಂತ್ರಿಗೆ ರವಾನಿಸುವಂತೆ ಡಿಸಿಗೆ ಮನವಿ ಮಾಡಲಾಯಿತು.
ವಿಜಯ ಸೇನೆ ಕಾರ್ಯಕರ್ತರು ಚಿತ್ರದುರ್ಗದಿಂದ ಕಾವೇರಿ ಹೋರಾಟಕ್ಕೆ ಆಗಮಿಸಿದ್ದು, ನಿರಂತರವಾಗಿ ನೀರು ಬಿಡುತ್ತಿದ್ರೆ ಮಂಡ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ. ಮುಂದೆ ಟಿಶು ಪೇಪರ್ ಬಳಸುವ ದುಸ್ಥಿತಿ ಬರುತ್ತದೆ ಎಂದು ಆತಂಕ ವ್ಯಕ್ತಪಡಿಸಿ, ಸರ್ಕಾರ ಹಾಗೂ ರಾಜ್ಯ ಎಲ್ಲಾ ಶಾಸಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು. ಕೂಡಲೇ ತಮಿಳುನಾಡಿಗೆ ನೀರು ಬಿಡುವುದನ್ನು ನಿಲ್ಲಿಸುವಂತೆ ಆಗ್ರಹಿಸಿದರು.