ಸುದ್ದಿಮೂಲವಾರ್ತೆ
ಕೊಪ್ಪಳ,ಅ.10: ಕೊಪ್ಪಳ ತಾಲೂಕಿನ ಅಳವಂಡಿ ಬೆಟೆಗೇರಿ ಏತ ನೀರಾವರಿಗಾಗಿ ಭೂಮಿ ಸ್ವಾದೀನ ಪಡಿಸಿಕೊಂಡ ರೈತರಿಗೆ ಪರಿಹಾರ ನೀಡಿಲ್ಲ. ಈ ಹಿನ್ನೆಲೆ ಅ 26 ರಂದು ಅಳವಂಡಿ ನಾಡಕಚೇರಿಯ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಅಳವಂಡಿ ಬೆಟಗೇರಿ ಏತ ನೀರಾವರಿ ಅನುಷ್ಠಾನ ಸಮಿತಿಯಿಂದ ಕೊಪ್ಪಳ ಉಪವಿಭಾಗಾಧಿಕಾರಿ ಗಳಿಗೆ ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕರ ನೇತ್ರತ್ವದಲ್ಲಿ ಮನವಿ ಸಲ್ಲಿಸಿದ್ದಾರೆ.
2019 ರಲ್ಲಿ ಕಾಲುವೆ ಭೂಮಿ ಸ್ವಾದೀನಕ್ಕಾಗಿ ನೋಟಿಫಿಕೆಷನ್ ಆಗಿದೆ. ಆಗಿನಿಂದ ಕಾಲುವೆ ಕಾಮಗಾರಿ ನಡೆದಿದೆ. ಅಂದು ಪರಿಹಾರ ನೀಡದೆ ಭೂಮಿ ನೀಡುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದರು. ಆದರೆ ಅಂದಿನ ಜನಪ್ರತಿನಿಧಿ ಪರಿಹಾರ ಕೊಡಿಸುವ ಭರವಸೆ ನೀಡಿದ್ದರು. ಆದರೆ ನಾಲ್ಕು ವರ್ಷವಾದರೂ ಭೂ ಪರಿಹಾರ ಬಂದಿಲ್ಲ. ಈ ಕಾರಣಕ್ಕಾಗಿ ರೈತರು ಹೋರಾಟ ಮಾಡಲು ತೀರ್ಮಾನಿಸಿದ್ದೇವೆ ಎಂದು ಮನವಿ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಶರಣಪ್ಪ ಜಡಿ, ದೇವಪ್ಪಕಟ್ಟಿಮನಿ ಸೇರಿ ಹಲವರು ಇದ್ದರು.