ಸುದ್ದಿಮೂಲ ವಾರ್ತೆ
ಆನೇಕಲ್,ಅ.10:ಕಳೆದ ರಾತ್ರಿ ಸುರಿದ ಧಾರಕಾರ ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿ ಮಾಡಿದೆ ಅಲ್ಲದೆ ಅವೈಜ್ಞಾನಿಕವಾಗಿ ಕರೆ ಅಭಿವೃದ್ಧಿ ಮಾಡಿದ್ದು, ಹತ್ತಾರು ಗಂಟೆ ಮರಿ ಮಕ್ಕಳನ್ನ ಹಾಕಿಕೊಂಡು ಜಾಗರಣೆ ಮಾಡುವ ಪರಿಸ್ಥಿತಿ ಎದರಗಿತ್ತು .. ಇದಕ್ಕಲ್ಲ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ ಅಂತ ಊರಿನ ಗ್ರಾಮಸ್ಥರು ಆಕ್ರೋಶ ಹೊರಾಹಾಕಿದ್ದಾರೆ …. ಅಷ್ಟಕ್ಕೂ ಈ ಘಟನೆ ನಡೆದಿದ್ದಾದರೂ ಎಲ್ಲಿ ಅಂತೀರಾ
ರಾತ್ರಿ ಸುರಿದ ಮಳೆಯಿಂದಾಗಿ ಜನರು ಹೈರಾಣು..!!
ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನರು ತತ್ತರ..!!
150 ಬಾಡಿಗೆ ಮನೆ ಸಂಪೂರ್ಣ ಜನಾವೃತ..!!
ಒಂದು ಕಡೆ ಮನೆಯಲ್ಲಿ ನೀರನ್ನ ಹೊರ ಹಾಕುತ್ತಿರುವ ಜನರು ..ಬಕೆಟ್ನಲ್ಲಿ ನೀರಿಗಾಗಿ ಪರದಾಡುತ್ತಿರುವ ಜನ, ಮನೆಯಲ್ಲ ನೀರು ನೀರು ರಸ್ತೆಗಳ ಕೆರೆ ಎಂತಾದ ದೃಶ್ಯ .. ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬೊಮ್ಮಸಂದ್ರದ ಗ್ರಾಮದಲ್ಲಿ.. ಹೌದು ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಇಲ್ಲಿನ ನಿವಾಸಿ ಶಿವಾರೆಡ್ಡಿ ಎಂಬವರ 150 ಬಾಡಿಗೆ ಮನೆ ಇದ್ದು , ತಗ್ಗು ಪ್ರದೇಶಗಳಿಗೆ ನೀರು ನುಗಿ ಅವಾಂತರ ಸೃಷ್ಟಿ ಮಾಡಿದೆ. ಪಕ್ಕದಲ್ಲಿ ಕೆರೆ ಇದ್ದು ಸಂಪೂರ್ಣ ಹಾಳಾಗಿತ್ತು ಹಾಗಾಗಿ ಇತ್ತೀಚಿಗೆ ಕೆರೆ ಅಭಿವೃದ್ಧಿ ಮಾಡಲು ಕೆರೆ ಅಭಿವೃದ್ದಿ ಪ್ರಾಧಿಕಾರದ ವತಿಯಿಂದ ಅನುಮತಿಯನ್ನು ಕೊಟ್ಟಿತ್ತು ಆದರೆ ಅವಾಜ್ಞಾನಿಕವಾಗಿ ಕೆರೆ ಅಭಿವೃದ್ಧಿ ಮಾಡಿದ ಕಾರಣದಿಂದಾಗಿಯೇ ಪ್ರಮುಖ ಕಾರಣ ಅಂತ ಯೋಜನಾ ಪ್ರಾಧಿಕಾರ ಅಧಿಕಾರಿ ಅರೋಪ ಮಾಡಿದ್ದಾರೆ ಇನ್ನು ಈ ಕೆರೆಯನ್ನು ಸಿಎಸ್ಆರ್ ಫಂಡ್ ಯೋಜನೆ ಅಡಿಯಲ್ಲಿ ಆನಂದ್ ಮಲ್ಲಿಗೆ ಎಂಬಾತ ಕೆರೆಯ ಅಭಿವೃದ್ಧಿ ಮಾಡಲು ಮುಂದಾಗಿದ್ದ ಆದರೆ ಸರಿಯಾಗಿ ಅಭಿವೃದ್ಧಿ ಮಾಡದೆ ಸುತ್ತ ಕಟ್ಟೆ ಕಟ್ಟಿ ಮಾಡಿದ್ದರಿಂದ ಪಕ್ಕದ ಜಮೀನುಗಳಿಗೆ ಮತ್ತು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರವನ್ನ ಸೃಷ್ಟಿ ಮಾಡಿದೆ .. ಇನ್ನು ಕೆಲಸ ನಡೆವಾಗಲೇ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಬೇಕಾಗಿತ್ತು. ಇದಕ್ಕೆ ನೇರ ಹೋಣೆ ಮತ್ತು ನಿರ್ಲಕ್ಷ್ಯ ಅಧಿಕಾರಿಗಳ ಲೋಪ ಎಂದು ಕಾಣುತ್ತದೆ.
ರಂಗಸ್ವಾಮಿ ಯೋಜನಾ ಪ್ರಾಧಿಕಾರಾಧಿಕಾರಿ ಹೇಳಿದರು
ಇನ್ನು ಘಟನಾ ಸ್ಥಳಕ್ಕೆ ಬೊಮ್ಮಸಂದ್ರ ಸಿಇಒ ರಾಜೇಂದ್ರನ್ ಭೇಟಿ ನೀಡಿ ಅಲ್ಲಿನ ಜನರಿಗೆ ಊಟದ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದಾರೆ ಆದರೆ ಈ ಘಟನೆಗೆ ಅವೈಜ್ಞಾನಿಕ ಮಾಡಿರುವುದಾಗಿ ತಿಳಿದು ಬಂದಿದೆ ಹಾಗಾಗಿ ಅವರ ವಿರುದ್ಧ ಕಾನೂನು ಕ್ರಮ ಜರಗಿಸುವುದಾಗಿ ತಿಳಿಸಿದ್ದಾರೆ ಅಲ್ಲದೆ ಇವರ ವಿರುದ್ಧ ಪೋಲಿಸ್ ಪ್ರಕರಣ ಸಹ ದಾಖಲು ಮಾಡುವುದಾಗಿ ತಿಳಿಸಿದ್ದಾರೆ.
ಇನ್ನು ಬನ್ನೇರ್ಘಟ್ಟದಿಂದ ಹರಿಯುವ ನೀರು, ಕಮ್ಮಸಂದ್ರ ಕ್ಯಾನಸನಹಳ್ಳಿ , ಹೆನ್ನಾಗರ ಚಂದಾಪುರ ಹೀಲಲಿಗೆ ಮಾರ್ಗವಾಗಿ ತಮಿಳುನಾಡು ಕಡೆ ನೀರು ಹರಿದು ಹೋಗ್ತಿದೆ.. ಮಳೆ ಬಂದಾಗಿನಿಂದಲೂ ಇದೇ ತರದ ಪರಿಸ್ಥಿತಿ.. ಈಗಾಗಲೇ ಎರಡು ಬಾರಿ ಇತರದ ಪರಿಸ್ಥಿತಿ ಎದುರಾಗಿದೆ ಇನ್ನು ಕೆರೆ ಪಕ್ಕದಲ್ಲಿ ಸ್ಮಶಾನ ಕೂಡ ಜಲಾವೃತಗೊಂಡಿದೆ ಕಳದ ಎರಡು ದಿನಗಳ ಹಿಂದೆ ಸಾವನ್ನಪ್ಪಿದ್ದ ಮೃತರನ್ನು ಇದೇ ಜಾಗದಲ್ಲಿ ಹಾಕಲಾಗಿತ್ತು ಆದರೆ ಈಗ ಜಲಾವೃತಗೊಂಡಿದೆ . ಒಟ್ನಲ್ಲಿ ಅವೈಜ್ಞಾನಿಕ ಅಭಿವೃದ್ಧಿ ಹೆಸರಲ್ಲಿ ಜನರಿಗೆ ತೊಂದರೆಯಾಗುತ್ತಿರುವುದು ಸುಳ್ಳಲ್ಲ ಇನ್ನಾದರೂ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಜರುಗಿಸಲಿ ಅನ್ನೋದೇ ನಮ್ಮ ಅಶಯ