ಸುದ್ದಿಮೂಲ ವಾರ್ತೆ
ಬೆಂಗಳೂರು, ಅ. 10 : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಇಂದು ಅವರು ಉತ್ತರಾಖಂಡದ ಪ್ರಸಿದ್ಧ ತೀರ್ಥಕ್ಷೇತ್ರ ಕೇದಾರನಾಥಕ್ಕೆ ಭೇಟಿ ನೀಡಿ, ಕೇದಾರನಾಥ ಸ್ವಾಮಿಯ ದರ್ಶನ ಪಡೆದಿದ್ದಾರೆ.
ಸದ್ಯ ಉತ್ತರ ಭಾರತದ ತೀರ್ಥ ಕ್ಷೇತ್ರಗಳ ಪ್ರವಾಸದಲ್ಲಿರುವ ಅವರು, ಈ ಫೋಟೋಗಳನ್ನು ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕೈಲಾಸ ಪರ್ವತದ ನಂತರ ಕೇದಾರನಾಥವನ್ನು ಶಿವನ ಎರಡನೇ ವಾಸಸ್ಥಾನವೆಂದು ಕರೆಯಲ್ಪಡುವ ಉತ್ತರಾಖಂಡ ರಾಜ್ಯದ ಶ್ರೀ ಕೇದಾರನಾಥ್ ಸ್ವಾಮಿಯ ದರ್ಶನ, ಆಶೀರ್ವಾದ ಪಡೆದು, ನಾಡಿನ ಒಳಿತಿಗಾಗಿ ಪ್ರಾರ್ಥಿಸಿದೆ ಎಂದು ಪೋಸ್ಟ್ ಮಾಡಿದ್ದಾರೆ.
ನೈಸರ್ಗಿಕವಾಗಿಯೇ ಅಲೌಕಿಕ ದೃಶ್ಯಗಳಿಂದ ಕೂಡಿರುವ ಈ ದೇವಾಲಯ ಪವಾಡಗಳು ಹಾಗೂ ಅನೇಕ ಪೌರಾಣಿಕ ಕಥೆಗಳನ್ನು ಒಳಗೊಂಡಿರುವುದು ವಿಶೇಷ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಬರೆದುಕೊಂಡಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್ ಅವರೊಂದಿಗೆ ಅವಧೂತ ವಿನಯ್ ಗುರೂಜಿ ಹಾಗೂ ಶಾಸಕಿ ನಯನಾ ಮೋಟಮ್ಮ ಕೂಡ ಪ್ರವಾಸದಲ್ಲಿ ಸಾಥ್ ನೀಡಿದ್ದಾರೆ.