ಸುದ್ದಿಮೂಲವಾರ್ತೆ
ಕೊಪ್ಪಳ,ಅ.11; ಜೀವನಕ್ಕೆ ಕಪ್ಪು ಚುಕ್ಕೆಯಾಗುವಂತ ಮದ್ಯ ಪಾನವನ್ನು ಬಿಡುವುದು ಪಾನಮುಕ್ತರಾಗುವುದು ಉತ್ತಮ ಮಾರ್ಗ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಪ್ರಾದೇಶಿಕ ನಿರ್ದೇಶಕ ಬಿ ಗಣೇಶ ಹೇಳಿದರು.
ಅವರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಜನಜಾಗೃತಿ ಸಮಿತಿಯಿಂದ ಕೊಪ್ಪಳದಲ್ಲಿ ಆಯೋಜಿಸಿರುವ ಗಾಂದಿ ಸ್ಮೃತಿ, ಪಾನಮುಕ್ತರ ಸಮಾವೇಶ, ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು. ಇಂದು ಸಹ ಕುಟುಂಬ ವ್ಯವಸ್ಥೆ ಕಡಿಮೆಯಾಗಿದೆ. ಅತ್ತೆ ಸೋಸೆ ಸಹಜೀವನ ನಡೆಸಬೇಕು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ರತ್ನಂ ಪಾಂಡೆಯಾ ಮಾತನಾಡಿ ಮದ್ಯಪಾನದಿಂದ ಆರೋಗ್ಯ, ಸಮಾಜಿಕ ಹಾಗು ಮಾನಸಿಕ ನೆಮ್ಮದಿ ಹಾಳಾಗುತ್ತಿದೆ. ಮದ್ಯಪಾನ ಮಾಡುವುದು ತಪ್ಪು ಮಾಡಿದರು. ನಾವು ನಮ್ಮೂರು, ನಮ್ಮ ಮನೆಯ ಸುತ್ತಲು ಪ್ರದೇಶದಲ್ಲಿ ಸ್ವಚ್ಛತೆ ಮಾಡಿಕೊಳ್ಳಲು ಜವಾಬ್ದಾರಿ ವಹಿಸಬೇಕೆಂದರು. ಪರಿಸರಕ್ಕೆ ಹಾನಿ ಉಂಟು ಮಾಡುವ ಪ್ಲಾಸ್ಟಿಕ್ ಬಳಕೆಯನ್ನು ಮಾಡಬಾರದು. ನಮ್ಮ ಸುತ್ತಲಿನ ಸಣ್ಣ ವಿಷಯಗಳನ್ನು ರೂಢಿಸಿಕೊಳ್ಳಬೇಕೆಂದು ಹೇಳಿದರು.
ಪಾನಮುಕ್ತ ಕುಟುಂಬದ ನೋವು:ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ 30 ಪಾನಮುಕ್ತ ಶಿಬಿರಗಳು ನಡೆದು 864 ಜನರು ಪಾನಮುಕ್ತರಾಗಿದ್ದಾರೆ. ಅವರಿಗೆ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಪಾನಮುಕ್ತರಾಗಿರುವ ಹಟ್ಟಿಯ ವಸಂತಕುಮಾರ ಪುತ್ರಿ ಭಾಗ್ಯಲಕ್ಷ್ಮಿ ಪಾನಮುಕ್ತ ಕುಟುಂಬ ಕುರಿತು ಮಾತನಾಡಿದರು. ಅವರು ಕುಡಿತದಿಂದಾಗಿ ಕುಟುಂಬದಲ್ಲಿ ಅಮ್ಮ ಕಷ್ಟ ಪಡುತ್ತಿದ್ದರು. ಅವರ ನೋವು ನೋಡಿ ನಮಗೆ ಕಷ್ಟವಾಗುತ್ತಿತ್ತು. ತಂದೆ ಕುಡಿದು ಬಿದ್ದಾಗ ಅದನ್ನು ಕೇಳಿ ಮನಸ್ಸಿಗೆ ನೋವಾಗುತ್ತಿತ್ತು ಎಂದು ಕಣ್ಣೀರು ಹಾಕುತ್ತಿದ್ದರು. ಈಗ ಅವರು ಕುಡಿತ ಬಿಟ್ಟು ಈಗ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿದ್ದಾರೆ ಎಂದರು. ಈ ತಂದೆ ಸಂದರ್ಭದಲ್ಲಿ ತಂದೆಯೂ ಸಹ ಕಣ್ಣೀರು ಹಾಕಿದರು.
ಇದೇ ಸಂದರ್ಭದಲ್ಲಿ ಯಲಬುರ್ಗಾದ ಶರಣಗೌಡರ ಮಗಳು ಸರಸ್ವತಿ ಮಾತನಾಡಿ ನಮ್ಮದು ಬಡತನ ಕುಟುಂಬವಿತ್ತು. ದಾಳಿಂಬೆ ಪ್ಲಾಟ್ ಮಾಡಿ ಲಾಸ್ ಆಗಿ ಮತ್ತಷ್ಟು ಕುಡಿತ ಹೆಚ್ಚಿಸಿದರು. ಇದರಿಂದ ನನ್ನ ತಾಯಿ ಜಗಳವಾಡಿ ತವರ ಮನೆಗೆ ಹೋಗಿದ್ದರು. ಈ ಸಂದರ್ಭದಲ್ಲಿ ನಾನು ಎಸ್ಎಸ್ಎಲ್ ಸಿ ಹೆಚ್ಚು ಅಂಕ ಪಡೆದಾಗ ಪ್ರೈಜ್ ನೀಡಲು ಕರೆದಾಗ ಕುಡಿದಿರುವ ನನ್ನ ತಂದೆ ಹೇಗೆ ಕರಿಯಲು ಎಂದುಕೊಂಡಿದ್ದೆ. ಆದರೆ ಮಂಜುನಾಥಸ್ವಾಮಿಯಿಂದ ಕುಡಿತ ಬಿಡಿಸಿದ್ದರಿಂದ ನಮಗೆ ನಕ್ಷತ್ರದಂತೆ ಆಯಿತು. ಈಗ ನಾವು ಸಾಕಷ್ಟು ನೆಮ್ಮದಿಯಿಂದ ಇದ್ದೇವೆ ಎಂದರು. ಬರುವ ದಿನಗಳಲ್ಲಿ ಔಷಧಿ ಆಂಗಡಿಯಲ್ಲಿ ಬರುವ ದಿನಗಳಿವೆ. ಆದರೆ ನಾವು ಮದ್ಯಪಾನಮುಕ್ತ ಭಾರತ ಎಂದು ಹೇಳಬೇಕೆಂದರು.
ಸಾನಿದ್ಯವನ್ನು ಭಾಗ್ಯನಗರದ ಶಂಕರಮಠದ ಶ್ರೀಶಿವರಾಮಕೃಷ್ಣಾನಂದ ಸ್ವಾಮೀಜಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನಜಾಗೃತಿ ಸಮಿತಿ ಅಧ್ಯಕ್ಷ ಶ್ರೀನಿವಾಸ ಗುಪ್ತಾ ವಹಿಸಿದ್ದರು.ಸದಾನಂದ ಬಂಗೇರಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಈ ಮುನ್ನ ಪಾನಮುಕ್ತರು, ಸಿರಿಧಾನ್ಯ ಜಾಗೃತಿಗಾಗಿ ಕೊಪ್ಪಳದ ಈಶ್ವರ ಪಾರ್ಕಿನಿಂದ ಬಾಲಾಜಿ ಫಂಕ್ಷನ್ ಹಾಲ್ ವರೆಗೂ ಮೆರವಣಿಗೆ ನಡೆಯಿತು. ಎತ್ತಿನ ಬಂಡಿಯಲ್ಲಿ ವಿವಿಧ ವೇಷ ಭೂಷಣ, ಡೊಳ್ಳು, ಭಜನೆ. ಹಾಗು ಕುಂಬಗಳನ್ನಜ ಹೊತ್ತು ಮೆರವಣಿಗೆ ನಡೆಯಿತು. ಇದೇ ವೇಳೆ ರಾಜ್ಯದಲ್ಲಿ ಪಾನಮುಕ್ತ ಮಾಡಬೇಕೆಂದು ಆಗ್ರಹಿಸಿ ಹಕ್ಕೋತ್ತಾಯ ಮಾಡಿ ಮನವಿ ಸಲ್ಲಿಸಿದರು.
ವೇದಿಕೆಯಲ್ಲಿ ಶ್ರೀಮತಿ ಶಿವಗಂಗಾ ಭೂಮಕ್ಕನವರ, ಟಿ ಜನಾರ್ಧನ, ಡಾ ವಿ ವಿ ಹಿರೇಮಠ, ವೀರಣ್ಣ ನಿಂಗೋಜಿ, ತ್ರೀಶಾಲಾ ಪಾಟೀಲ, ಸಂಗಪ್ಪ ತೆಂಗಿನಕಾಯಿ, ರಮೇಶ ಕುಲಕರ್ಣಿ, ರಾಧ ಕುಲಕರ್ಣಿ ಇದ್ದರು.