ಸುದ್ದಿಮೂಲ ವಾರ್ತೆ
ದೇವನಹಳ್ಳಿ, ಅ:14: ಪ್ರಸ್ತುತ ದೇವನಹಳ್ಳಿಯಲ್ಲಿ ಎಸ್.ಬಿ.ಐ ನ ಎರಡು ಶಾಖೆ ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿ 2020-21 ನೇ ಸಾಲಿನಲ್ಲಿ ಪ್ರಾದೇಶಿಕ ಕಚೇರಿ ಆರಂಭವಾಯಿತು. ಈ ನಾಲ್ಕು ವರ್ಷಗಳಲ್ಲಿ ಇದೇ ಮೊದಲ ಬಾರಿ 39 ಸ್ವಸಹಾಯ ಗುಂಪುಗಳ ಪ್ರತಿನಿಧಿಗಳನ್ನು ಒಂದೆಡೆ ಸೇರಿಸಿ ಇಷ್ಟು ದೊಡ್ಡಮಟ್ಟದ ಗುಂಪು ಸಾಲ ವಿತರಣೆ ಮಾಡಲಾಗುತ್ತಿದೆ. ಹಾಗಾಗಿ ಇದೊಂದು ಸುದಿನ ಎಂದು ರೀಜನಲ್ ಮುಖ್ಯ ವ್ಯವಸ್ಥಾಪಕ ಶಿವಲಿಂಗಯ್ಯ ಹೇಳಿದರು.
ದೇವನಹಳ್ಳಿ ಪಟ್ಟಣದ ಟಿಪ್ಪು ವೃತ್ತದ ಸಮೀಪ ಬೈಪಾಸ್ ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ರೀಜನಲ್ ಆಫೀಸ್ನಲ್ಲಿ ಬಿಕೆಎಸ್ ಪ್ರತಿಷ್ಠಾನದ ಸಹಯೋಗದಲ್ಲಿ ಶ್ರೀ ಕಲ್ಪವೃಕ್ಷ ಗ್ರಾಮಾಭಿವೃದ್ದಿ ಯೋಜನೆ ಟ್ರಸ್ಟ್ನ ಸ್ವಸಹಾಯ ಗುಂಪುಗಳಿಗೆ ಸಾಲ ವಿತರಣಾ ಕಾರ್ಯಕ್ರಮ ಉಧ್ಘಾಟಿಸಿ ಶಿವಲಿಂಗಯ್ಯ ಮಾತನಾಡಿದರು.
ವಿಭಾಗೀಯ ಕಚೇರಿಯಿಂದ 257 ಗುಂಪುಗಳಿಗೆ 5 ಕೋಟಿಗೂ ಅಧಿಕ ಸಾಲ ವಿತರಣೆ ಮಾಡಲಾಗಿದೆ ಇಂದು ಶ್ರೀ ಕಲ್ಪವೃಕ್ಷ ಗ್ರಾಮಾಭಿವೃದ್ದಿ ಯೋಜನೆ ಟ್ರಸ್ಟ್ನಲ್ಲಿ ಸುಮಾರು 849 ಮಹಿಳಾ ಸ್ವಸಹಾಯ ಗುಂಪುಗಳಿದ್ದು ಈ ಸ್ವಸಹಾಯ ಸಂಘಗಳ 39 ಗುಂಪುಗಳಿಗೆ ಮೊದಲ ಹಂತವಾಗಿ 1.95 ಕೋಟಿ ಸಾಲ ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ಶ್ರೀಕಲ್ಪತರು ಗ್ರಾಮಾಭಿವೃದ್ದಿ ಯೋಜನೆ ಟ್ರಸ್ಟ್ ನ ಅಧ್ಯಕ್ಷ ಬಿಕೆ ಶಿವಪ್ಪ ಮಾತನಾಡಿ, ಅಡುಗೆ ಕೋಣೆಗೆ ಅಥವಾ ಮಕ್ಕಳನ್ನು ಸಾಕಲು ಮಹಿಳೆಯರು ಸೀಮಿತವಾಗಬಾರದು. ಆರ್ಥಿಕವಾಗಿ ಸಬಲರಾಗಬೇಕು, ಸ್ವಾವಲಂಬನೆಯ ಜೀವನ ನಡೆಸಬೇಕು. ಇಂದು ಕಲ್ಪವೃಕ್ಷದಂತೆ ನಿಮ್ಮ ನೆರವಿಗೆ ಎಸ್.ಬಿ,ಐ ಮುಂದೆ ಬಂದಿದೆ. ಇದನ್ನು ಸದುಪಯೋಗಪಡಿಸಿಕೊಂಡು ಅತೀ ಕಡಟಿಮೆ ಬಡ್ಡಿದರದ ನಿಗದಿತ ಕಂತುಗಳಲ್ಲಿ ಸಾಲಕ ಬೇಗ ತೀರಿಸಿ ಇನ್ನೂ ಹೆಚ್ಚಿನ ನೆರವು ಪಡೆದು ಅಭಿವೃದ್ದಿ ಹೊಂದಿರಿ ನಿಮ್ಮ ಅಭಿವೃದ್ದಿ ನಿಮ್ಮ ಕೈಯಲ್ಲಿದೆ ಎಂದರು.
ರೀಜನಲ್ ಮ್ಯಾನೇಜರ್ ಎನ್.ಸಿ ದಾಮೋದರನ್ ಮಾತನಾಡಿ, ಹೆಣ್ಣಿನಿಂದ ಉಳಿತಾಯ ಹೆಣ್ಣಿನಿಂದ ಅಭಿವೃದ್ದಿ ಸಾಧ್ಯ ಪ್ರತೀ ಕುಟುಂಬದ ಆರ್ಥಿಕತೆ ಸುಧಾರಣೆಗೆ ಮಹಿಳೆ ಮನೆಯ ಮ್ಯಾನೇಜರ್ ನಂತೆ ಕೆಲಸ ನಿರ್ವಹಿಸುತ್ತಾಳೆ ಆಂದ್ರ ಪ್ರದೇಶದಲ್ಲಿ ಎಸ್.ಬಿ.ಐ ನಿಂದ 2 ಸಾವಿರ ಗುಂಪುಗಳಿಗೆ ಒಂದೇ ದೀನ ಸಾಲ ವಿತರಣೆ ಮಾಡಲಾಯಿತು. ಕಷ್ಟದಲ್ಲಿರುವವನ್ನು ಕೈಬಿಡಬೇಡಿ ನೀವು ಪಡೆದ ಸಾಲ ವ್ಯಾಪಾರ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳಿ ಅನಗತ್ಯ ಖರ್ಚು ಮಾಡಬೇಡಿ ಎಂಬ ಕಿವಿಮಾತು ಹೇಳಿದರು.
ಇದೆ ವೇಳೆ ಎಲ್ಲರಿಗೂ ಭ್ರಷ್ಟಾಚಾರರಹಿತ ಸಮಾಜ ನಿರ್ಮಾಣಕ್ಕೆ ಸಹಕರಿಸುತ್ತೆವೆ ಲಂಚ ಕೊಡುವುದಿಲ್ಲ ಲಂಚ ಪಡೆಯುವುದಿಲ್ಲ ಎಂಬ ಪ್ರಮಾಣ ವಚನ ಬೋಧಿಸಲಾಯಿತು.
ಫಲಾನುಭವಿಗಳಿಗೆ ಸಾಲ ಮಂಜೂರಾತಿ ಆದೇಶಪತ್ರ ವಿತರಿಸಲಾಯಿತು.ಈ ಸಂದರ್ಭದಲ್ಲಿ ಶ್ರೀ ಕಲ್ಪವೃಕ್ಷ ಗ್ರಾಮಾಭಿವೃದ್ದಿ ಯೋಜನೆ ಟ್ರಸ್ಟ್ನ ಮ್ಯಾನೇಜರ್ ಸುಹಾಸಿ, ಎಸ್.ಬಿಐ ನ ಗ್ರಾಮಹ ಸಂಪರ್ಕ ಅಧಿಕಾರಿ ಶಿವಕುಮಾರ್, ಎಸ್.ಎಚ್.ಜಿ ಅಬ್ರ್ವರ್ ಪ್ರಸಾದ್, ಫಣಿಕುಮಾರ್ ಮುಂತಾದವರಿದ್ದರು.