ಮೈಸೂರು, ಅ:14: ವಿಜಯನಗರ ಸಾಮಾಜ್ಯವನ್ನು ಆಳುತ್ತಿದ್ದ ದೊರೆಗಳಿಂದು ಹಿಡಿದು ಮೈಸೂರಿನ ಯದುವಂಶದ ರಾಜರಿಂದಲೂ ಅನುಚಾನವಾಗಿ ನಡೆದುಕೊಂಡು ಬರುತ್ತಿರುವ ವಿಶ್ವವಿಖ್ಯಾತ ನಾಡ ಹಬ್ಬ ದಸರಾ ಉತ್ಸವಕ್ಕೆ ಭಾನುವಾರ ನಾಡತಾಯಿ ಶ್ರೀಚಾಮುಂಡೇಶ್ವರಿ ಸನ್ನಿಧಿಯಲ್ಲಿ ಚಾಲನೆ ನೀಡಲಾಗುವುದು. ಸಂಗೀತ ನಿರ್ದೇಶಕ ನಾದ ಬ್ರಹ್ಮ ಡಾ. ಹಂಸಲೇಖ ಚಾಮುಂಡಿಗೆ ಪುಷ್ಪಾರ್ಚನೆ ಮಾಡುವ ಮೂಲಕ ವಿದ್ಯುಕ್ತವಾಗಿ ಉದ್ಘಾಟಿಸುವರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ನಾಡಿನ ಗಣ್ಯರು ಇದಕ್ಕೆ ಸಾಕ್ಷಿ ಆಗಲಿದ್ದಾರೆ.
ಬೆಳ್ಳಿಯ ಪಲ್ಲಕ್ಕಿಯಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿಯನ್ನು ಪ್ರತಿಷ್ಠಾಪನೆ ಮಾಡಿದ್ದು, ಬೆಳಗ್ಗೆ 10:15 ರಿಂದ 10:30 ರಲ್ಲಿ ಜರುಗುವ ಶುಭ ವೃಶ್ಚಿಕ ಲಗ್ನದಲ್ಲಿ ದಸರಾಗೆ ಚಾಲನೆ ನೀಡಲಾಗುವುದು. 9 ದಿನಗಳು ಚಾಮುಂಡಿ ಬೆಟ್ಟದಲ್ಲಿ ಪೂಜೆ ಸಲ್ಲಿಸಲಾಗುವುದು ಎಂದು ಚಾಮುಂಡಿ ಬೆಟ್ಟದ ಪ್ರಧಾನ ಅರ್ಚಕ ಡಾ. ಶಶಿಶೇಖರ್ ದೀಕ್ಷಿತ್ ಹೇಳಿದ್ದಾರೆ
ಉದ್ಘಾಟನಾ ಸಮಾರಂಭಕ್ಕಾಗಿ ಚಾಮುಂಡಿ ಬೆಟ್ಟದ ದೇವಾಲಯದ ಪಕ್ಕ ವೇದಿಕೆ ಸಿದ್ದವಾಗಿದ್ದು, ಸಾರ್ವಜನಿಕರಿಗೆ ಆಸನದ ವ್ಯವಸ್ಥೆ ಸಹ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಚಾಮುಂಡಿ ಬೆಟ್ಟದ ದೇವಾಲಯದ ಸುತ್ತಮುತ್ತ ವಿಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ದಸರಾ ಉದ್ಘಾಟನೆ ಆಗುತ್ತಿದ್ದಂತೆ ಚಲನಚಿತ್ರೋತ್ಸವ, ಫಲಪುಷ್ಪ ಪ್ರದರ್ಶನ, ಆಹಾರ ಮೇಳ, ದಸರಾ ಕುಸ್ತಿ ಪಂದ್ಯಾವಳಿ, ದಸರಾ ವಸ್ತು ಪ್ರದರ್ಶನ, ಯೋಗ ದಸರಾ, ರಾಜ್ಯ ಮಟ್ಟದ ಶಿಲ್ಪ ಕಲಾ ಪ್ರದರ್ಶನ, ದೀಪಾಲಂಕಾರ ಸೇರಿದಂತೆ ಹಲವು ಕಾರ್ಯಕ್ರಮಗಳು ಸಹ ಉದ್ಘಾಟನೆ ಆಗಲಿವೆ ಅರಮನೆಯ ಮುಂಭಾಗದ ವೇದಿಕೆ ಕಾರ್ಯಕ್ರಮದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಸಮಾರಂಭವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸುವರು.
ವಿಜಯನಗರ ಸಾಮ್ರಾಜ್ಯದ ದೊರೆಗಳಿಂದ..
ದಸರಾಗೆ ತನ್ನದೇ ಆದ ಇತಿಹಾಸ ಮತ್ತು ಭವ್ಯ ಪರಂಪರೆ ಇದೆ. ದಸರಾ ಮೂಲ ವಿಜಯನಗರ ಸಾಮ್ರಾಜ್ಯ.ಅಲ್ಲಿ ರಾಜತನ ಕೊನೆಗೊಂಡಾಗ ಮೈಸೂರಿನ ಸೆರಗಿನಂಚಿನಲ್ಲಿ ಇರುವ ಶ್ರೀರಂಗಪಟ್ಟಣದಲ್ಲಿ ಇದೇ ಯದುವಂಶದ ದೊರೆಯಾದ ಶ್ರೀ ರಾಜ ಒಡೆಯರ್ ಕ್ರಿಶ 1610 ರಲ್ಲಿ ದಸರಾ ಆರಂಭಿಸಿ 1799 ರವರೆಗೆ ದಸರಾ ಆಚರಿಸುತ್ತಾರೆ. ಈ ವೇಳೆ ಟಿಪ್ಪು ಮತ್ತು ಬ್ರಿಟಿಷರ ನಡುವೆ 4 ನೇ ಆಂಗ್ಲೋ ಇಂಡಿಯನ್ ಯುದ್ದ ನಡೆಯುತ್ತದೆ.
ಇದಾದ ನಂತರ ದಸರಾ ಆಚರಣೆ ಮೈಸೂರಿನಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಆರಂಭಿಸುತ್ತಾರೆ, ಹೀಗೆ ದಸರಾ 1969 ರವರೆ ದಸರಾ ರಾಜರ ದಸರಾವಾಗಿ ಆರಮನೆಯೊಳಗೆ ಮಾತ್ರ ನಡೆಯುತ್ತದೆ. ದೇಶಕ್ಕೆ ಸ್ವಾತಂತ್ರ್ಯ ಬಂದ ರಾಜಪ್ರಭುತ್ವ ಹೋಗಿ ಪ್ರಜಾಪ್ರಭುತ್ವ ಹೋದ ಕಾರಣ ರಾಜರ ಅರಮನೆಗಳನ್ನು ಸರ್ಕಾರದ ಅಧೀನಕ್ಕೆ ಒಳಪಡಿಸಿ, ರಾಜರಿಗೆ ರಾಜಧನವನ್ನು ನೀಡುವ ಪದ್ದತಿ ಆರಂಭವಾಗುತ್ತದೆ. ಇದಕ್ಕೆ ಕಾರಣ ಅಂದಿನ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಬಾಯಿ ಪಟೇಲ್. ಪ್ರಜಾಪ್ರಭುತ್ವವನ್ನು ಒಪ್ಪದ ಹೈದರಾಬಾದ್ ನಿಜಾಮ್ ರನ್ನು ಬಗ್ಗು ಬಡಿಯುತ್ತಲೇ ದೇಶದ ರಾಜರುಗಳನ್ನು ಸಹ ಪ್ರಜಾಪ್ರಭುತ್ವದ ತೆಕ್ಕೆಗೆ ತರಲಾಗುತ್ತದೆ.
ರಾಜಪ್ರಭುತ್ವ ಹೋದ ಕಾರಣ 1970 ರಿಂದ ನಾನಾ ಸಂಘಟನೆಗಳಿಂದ ದಸರಾ ಆಚರಣೆ ಆರಂಭವಾಗುತ್ತದೆ. ಕೆಲ ವರ್ಷಗಳ ನಂತರ ರಾಜ್ಯ ಸರ್ಕಾರ ನಾಡಹಬ್ಬವಾಗಿ ದಸರಾ ಆಚರಿಸಲಾಗುತ್ತಿದೆ. ರಾಜಪ್ರಭುತ್ವದಲ್ಲಿ ನಡೆಯುತ್ತಿದ್ದ ದಸರಾದಲ್ಲಿ ಚಿನ್ನದ ಅಂಬಾರಿ ಮೇಲೆ ಮಹಾರಾಜರು ಆಸೀನರಾಗುತ್ತಿದ್ದರು, ಇಂದ ಶ್ರೀ ಚಾಮುಂಡೇಶ್ವರಿ ದೇವಿಯ ಪ್ರತಿಮೆಯನ್ನು ಕೂರಿಸಿ ಜಂಬೂ ಸವಾರಿ ಮೆರವಣಿಗೆ ನಡೆಸಲಾಗುತ್ತಿದೆ.
ಪರ್ಷಿಯದ ಪ್ರವಾಸಿಗ ಅಬ್ದುರ್ ರಜಾಕ್ ಮತ್ತು ಪೋರ್ಚುಗಲ್ ನ ಡೋಪಿನ್ ಪೆಯಸ್ ಅವರು ಬರೆದಿರುವ ಗ್ರಂಥಗಳಲ್ಲಿ ವಿಜಯನಗರ ಸಾಮ್ರಾಜ್ಯದಲ್ಲಿ ದಸರಾವನ್ನು ರಾಜರು ಎಷ್ಟೊಂದ ವೈಭವಯುತವಾಗಿ ನಡೆಯುತ್ತಿತ್ತು ಎಂಬ ಬಗ್ಗೆ ದಾಖಲಿಸಿದ್ದಾರೆ.
414 ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ದಸರಾವನ್ನು ಚಾಮರಾಜ ಒಡೆಯರ್ ಕಾಲದಲ್ಲಿ ಸಿಡುಬು ಬೀಕರವಾಗಿ ಕಾಣಿಸಿಕೊಂದಿದ್ದರಿಂದ ಬರ ಕಾಣಿಸಿಕೊಂಡಿದ್ದರಿಂದ ಸರಳವಾಗಿ ಆಚರಿಸಿದ್ದು. ಇದೆ.ಕೊರೊನಾ ಎಂಬ ಹೆಮ್ಮಾರಿ ಅಬ್ಬರಿಸಿದ್ದರಿಂದ ಕೆಲ ವರ್ಷಗಳ ಹಿಂದೆ 2 ವರ್ಷ ಅರಮನೆಯೊಳಗೆ ಆಚರಿಸಲಾಗಿತ್ತು. 2023 ರಲ್ಲೂ ಬರ ಕಾರಣ ಸಾಂಪ್ರದಾಯಿಕವಾಗಿ ದುಷ್ಟರ ಶಿಕ್ಷೆ-ಶಿಷ್ಟರ ರಕ್ಷಣೆ ಎಂಬ ಮೌಲ್ಯವನ್ನು ಸಾರುವ ದಸರಾವನ್ನು ಆ. 15 ರಿಂದ 24 ರವರೆಗೆ ನಡೆಯುತ್ತಿದೆ.