ಸುದ್ದಿಮೂಲ ವಾರ್ತೆ
ಬೆಂಗಳೂರು, ಅ.15: ಗಡಿ ಜಿಲ್ಲೆ ಚಾಮರಾಜನಗರದ ಬಂಡೀಪುರ ಈಗ ಹುಲಿ-ಚಿರತೆಗಳ ಅವಾಸಸ್ಥಾನವಾಗಿದ್ದು, ಒಂದಲ್ಲ ಎರಡಲ್ಲ ಒಟ್ಟೊಟ್ಟಿಗೆ ನಾಲ್ಕೈದು ವನ್ಯಜೀವಿಗಳು ಕಾಣಿಸಿಕೊಳ್ಳುತ್ತಿದ್ದು, ಪ್ರಾಣಿಪ್ರಿಯರು ರೋಮಾಂಚನಗೊಳ್ಳುತ್ತಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ವಿಡಿಯೋ ತುಣುಕೊಂದನ್ನು ಬಿಡುಗಡೆ ಮಾಡಿದ್ದು ಬಂಡೀಪುರದಲ್ಲಿ ಐದು ಚಿರತೆಗಳು ಒಟ್ಟಿಗೆ ಫೋಟೋಗೆ ಪೋಸ್ ಕೊಡುವ ಅಪರೂಪದ ದೃಶ್ಯವನ್ನು ಹಂಚಿಕೊಂಡಿದೆ.
ಮೊನ್ನೆ ರಾತ್ರಿ ಗುಂಡ್ಲುಪೇಟೆಯಿಂದ ಊಟಿಗೆ ತೆರಳುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದಾದ ನಂತರ ಒಂದಂತೆ ಐದು ಹುಲಿಗಳು ರಸ್ತೆ ದಾಟುವ ದೃಶ್ಯ ಸೆರೆಯಾಗುವ ಮೂಲಕ ಬಂಡೀಪುರ ಹುಲಿ-ಚಿರತೆಗಳ ಬೀಡಾಗಿದೆ ಎನ್ನಬಹುದಾಗಿದೆ.