ಸುದ್ದಿಮೂಲ ವಾರ್ತೆ
ಚಿಂತಾಮಣಿ,ಅ.16 : ಆಗ್ರಹಾರ ಮುರಳಿ ರವರ ಮೇಲಿನ ಹಲ್ಲೆ ಖಂಡಿಸಿ ಹಾಗೂ ಚಿಂತಾಮಣಿಯಲ್ಲಿ ಕತ್ತಿ ಮಚ್ಚು ಸಂಸ್ಕೃತಿ ವಿರೋಧಿಸಿ ಬುಧವಾರದಂದು ಚಿಂತಾಮಣಿ ಬಂದ್ ಗೆ ದಲಿತ ಹಿಂದುಳಿದ ಅಲ್ಪಸಂಖ್ಯಾತ ರ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟ ಕರೆ ನೀಡಿವೆ.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಜಿ. ನಾರಾಯಣಸ್ವಾಮಿ, ವಾಲ್ಮಿಕಿ ಸಮುದಾಯದ ಮುಖಂಡ ಹಾಗೂ ನಗರಸಭಾ ಸದಸ್ಯ ಆಗ್ರಹಾರ ಮುರಳಿರವರ ಮೇಲೆ ದುಷ್ಕರ್ಮಿಗಳಿಂದ ಕಳೆದ ಶುಕ್ರವಾರ ಮಾರಾಕಾಸ್ತ್ರಗಳಿಂದ ನಡೆದಿರುವ ಮಾರಣಾಂತಿಕ ಹಲ್ಲೆಯನ್ನು ಖಂಡಿಸಿ ಹಾಗೂ ಈ ಕೃತ್ಯದಲ್ಲಿ ಪಾಲ್ಗೊಂಡಿರುವವರನ್ನು ಬಂಧಿಸುವಲ್ಲಿ ವಿಫಲವಾಗಿರುವ ಪೋಲಿಸ್ ಇಲಾಖೆಯ ವೈಪಲ್ಯವನ್ನು ಖಂಡಿಸಿ ದಲಿತ ಹಿಂದುಳಿದ ಅಲ್ಪಸಂಖ್ಯಾತ ರ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟ ಬಂದ್ ನಡೆಸಲು ನಿರ್ಧರಿಸಿವೆ ಎಂದರು.
ಮಾರಣಾಂತಿಕವಾಗಿ ಹಲ್ಲೆಗೊಳಗಾದ ಅಗ್ರಹಾರ ಮುರಳಿಯವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಆದರೆ, ಈ ಕೊಲೆ ಯತ್ನ ನಡೆದು ನಾಲ್ಕು ದಿನಗಳು ಕಳೆದರು ಇನ್ನೂ ದುಷ್ಕರ್ಮಿಗಳನ್ನು ಬಂಧಿಸಿಲ್ಲ. ಅಲ್ಲದೆ, ಈಗಾಗಲೇ ಕೆಲವು ಅಕ್ರಮ ಹಾಗೂ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ವ್ಯಕ್ತಿಗಳು ಅಗ್ರಹಾರ ಮುರಳಿಯವರಿಗೆ ಹಲ್ಲೆ ನಡೆಸಿದ್ದಾರೆ.
ಆದರೂ, ಈ ಪ್ರಕರಣದಲ್ಲಿ ಇದುವರೆಗೂ ಯಾರ ಬಂಧನವೂ ಆಗಿರುವುದಿಲ್ಲ ಎಂದು ಆರೋಪಿಸಿದರು.
ಕೊಲೆಗೆ ಯತ್ನಿಸಿರುವ ಆರೋಪಿಗಳನ್ನು ಹಾಗೂ ಕೃತ್ಯ ನಡೆಸಲು ಪ್ರಚೋದನೆ ಹಾಗೂ ಕುಮ್ಮಕ್ಕು ನೀಡುವವರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಹಾಗೂ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಾವಲಗಾನಹಳ್ಳಿ ವೆಂಕಟೇಶ್, ಪೋಟೋ ನಾರಾಯಣಪ್ಪ, ಜನಾರ್ದನ್, ಆನಂದ್, ಪಿವಿ ಮಂಜುನಾಥ್, ಎಂ,ವಿ ರಾಮಪ್ಪ, ಆಲಪಲ್ಲಿ ರಾಮಚಂದ್ರ, ಕಟಮಾಚನಹಳ್ಳಿ ಮಂಜು ಸೇರಿದಂತೆ ವಾಲ್ಮೀಕಿ ಸಮುದಾಯದ ಮುಖಂಡರು ಮತಿತ್ತರರು ಉಪಸ್ಥಿತಿರಿದ್ದರು.