ಸುದ್ದಿಮೂಲ ವಾರ್ತೆ
ಶಿಡ್ಲಘಟ್ಟ,ಅ.16:ತುಮ್ಮನಹಳ್ಳಿ ಹಾಲು ಉತ್ಪದಕರ ಸಹಕಾರ ಸಂಘದ ಚುನಾವಣೆ ನಡೆಯುವ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಭದ್ರತೆಯಲ್ಲಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಚುನಾವಣೆ ನಡೆಸಲಾಯಿತು.
ತುಮ್ಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಐದು ವರ್ಷಗಳ ಅವಧಿಯ ಆಡಳಿತ ಮಂಡಳಿಯ ನಿರ್ದೇಶಕರುಗಳ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಒಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದು ಇನ್ನುಳಿದ ಮಂದಿಯನ್ನು11 ಚುನಾವಣೆಯ ಮೂಲಕ ಆಯ್ಕೆ ಮಾಡಲಾಯಿತು.
ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಮುತಿರುಮಳಪ್ಪ ಅವಿರೋಧ ಆಯ್ಕೆಯಾಗಿದ್ದಾರೆ. ಇನ್ನುಳಿದಂತೆ ಸಾಮಾನ್ಯ ಕ್ಷೇತ್ರದಿಂದ ಕೃಷ್ಣಪ್ಪ, ಕೇಶವಮೂರ್ತಿ ಟಿ.ಎನ್, ಚಿಕ್ಕವೆಂಕಟ ಸ್ವಾಮಿ.ಟಿ.ಎಲ್,ಶ್ರೀನಿವಾಸ್.ಟಿ.ಎನ್, ಸುರೇಶ್.ಟಿ.ಎ, ಮುನಿಕೃಷ್ಣಪ್ಪ, ಟಿ.ಎಂ, ಮುರುಳಿ.ಟಿ.ಕೆ, ಹಿಂದುಳಿದ ವರ್ಗ ಎ ಕ್ಷೇತ್ರದಿಂದ ಟಿ.ಎಂ.ನಾರಾಯಣಸ್ವಾಮಿ, ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ನಾರಾಯಣಸ್ವಾಮಿ ಟಿ.ಎಚ್,ಮಹಿಳಾ ಮೀಸಲು ಕ್ಷೇತ್ರದಿಂದ ಶೋಭಾ,ರತ್ನಮ್ಮ ರವರು ಚುನಾವಣೆಗೆ ಸ್ಪರ್ಧೆ ಮಾಡಿ ಜಯ ಸಾಧಿಸಿದ್ದಾರೆ.ಎಂದು ಚುನಾವಣಾ ಅಧಿಕಾರಿ ಎನ್. ವನಿತಾ ತಿಳಿಸಿದರು.
ತುಮ್ಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನೂತನವಾಗಿ ಆಯ್ಕೆಯಾದ ನಿರ್ದೇಶಕರುಗಳನ್ನು ಶಾಸಕರಾದ ಬಿ.ಎನ್ ರವಿಕುಮಾರ್ ರವರು ಶಾಲು ಹೊದಿಸಿ ಹಾರ ಹಾಕಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಸುರೇಂದ್ರ ಗೌಡ, ತಾದೂರು ರಘು,ಹುಜಗೂರು ರಾಮಣ್ಣ,ಕೊತ್ತನೂರು ಲಕ್ಷ್ಮೀಪತಿ ,ಮುನಿರಾಜಪ್ಪ, ಲಕ್ಷ್ಮೀ ನಾರಾಯಣಪ್ಪ ನಾರಾಯಣಸ್ವಾಮಿ, ಸಿ.ಎನ್.ಗಜೇಂದ್ರ ಸಿ.ಎನ್. ಮಂಜುನಾಥರೆಡ್ಡಿ, ರಾಮಕೃಷ್ಣಪ್ಪ,ಕೃಷ್ಣಾರೆಡ್ಡಿ, ವೆಂಕಟೇಶ್ ಮೂರ್ತಿ,ಗಂಗಪ್ಪ, ನಂಜಪ್ಪ, ಚೌಡಸಂದ್ರ ಗ್ರಾಮ ಪಂಚಾಯತಿ ಸದಸ್ಯ ಸಿ ಕೆ ಗಜೇಂದ್ರ ಬಾಬು ಹಾಗೂ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.