ಸುದ್ದಿಮೂಲ ವಾರ್ತೆ
ಚಿಕ್ಕಬಳ್ಳಾಪುರ, ಅ. 16 : ಚೇಳೂರು ತಾಲೂಕಿನ ಸೋಮನಾಥಪುರ ಗ್ರಾಮದ ಅಂಬೇಡ್ಕರ್ ಭವನದ ಮುಂಭಾಗ ಹಾಗೂ ಇತರೆ ಕಡೆ ಚರಂಡಿ ಸ್ವಚ್ಛತೆ ಮಾಡಲು ಅಧಿಕಾರಿಗಳಿಗೆ ಸಾರ್ವಜನಿಕರು ಮನವಿ ಮಾಡಿದ್ದಾರೆ.
ಮನೆಗಳಿಂದ ಬಂದ ಕೊಳಚೆ ನೀರು ಚರಂಡಿಗಳಲ್ಲಿ ಸರಾಗವಾಗಿ ಹರಿಯದೆ ನಿಂತಲ್ಲೇ ನಿಂತಿದೆ. ಇದರಿಂದ ಬಡ ಕುಟುಂಬಗಳು ಸಾಂಕ್ರಾಮಿಕ ಜಾಡ್ಯಗಳಿಗೂ, ಚರ್ಮರೋಗಕ್ಕೆ ತುತ್ತಾಗುತ್ತಿದ್ದಾರೆ. ನಿತ್ಯ ಸೊಳ್ಳೆಗಳ ಕಾಟದಿಂದ ಮಕ್ಕಳಿಗೆ ಮಲೇರಿಯಾ, ಚಿಕನ್ ಗುನ್ಯ ಮುಂತಾದ ಮಾರಕ ಕಾಯಿಲೆಗಳು ಬರುವ ಆತಂಕದಲ್ಲಿದ್ದೇವೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ಹೀಗಾಗಿ, ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಕ್ರಮವಹಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.