ಸುದ್ದಿಮೂಲ ವಾರ್ತೆ
ಚಿಕ್ಕಬಳ್ಳಾಪುರ,ಅ.17: ಚೇಳೂರು ಪಟ್ಟಣದಲ್ಲಿ ಪ್ರತಿನಿತ್ಯ ಮಂಗಗಳ ಕಾಟ ಹೆಚ್ಚಾಗುತ್ತಿದೆ.ಇದರಿಂದ ಅಂಗಡಿ ಮಾಲೀಕರಿಗೆ, ಬೀದಿ ಬದಿ ವ್ಯಾಪಾರಸ್ಥರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಸುಮಾರು ನೂರಕ್ಕು ಹೆಚ್ಚು ಮಂಗಗಳು ಪಟ್ಟಣದಲ್ಲಿ ಇದ್ದು, ಪ್ರತಿ ದಿನ ಆಹಾರಕ್ಕಾಗಿ ಅಂಗಡಿಗಳಿಗೆ ನುಗ್ಗಿ ವಿವಿಧ ತಿಂಡಿ ತಿನುಸುಗಳು ಎತ್ತಿಕೊಂಡು ಹೋಗುತ್ತಿವೆ. ಇದರಿಂದ ವ್ಯಾಪಾರಸ್ಥರಿಗೆ ನಷ್ಟ ಮತ್ತು ಅನಾನುಕೂಲ ಉಂಟಾಗುತ್ತಿದೆ. ಅಂಗಡಿಗೆ ನುಗ್ಗಿ ಎತ್ತಿಕೊಂಡು ಹೋಗುವ ತಿಂಡಿನ ಕೂಡ ಸರಿಯಾಗಿ ತಿನ್ನಲ್ಲ, ಕೈಗೆ ಸಿಕ್ಕ ತಿಂಡಿ ಎತ್ತಿಕೊಂಡು ಹೋಗುವುದು ಸ್ವಲ್ಪ ಮಟ್ಟಿಗೆ ತಿನ್ನುವುದು, ಉಳಿದಿದ್ದನ್ನ ಬಿಸಾಡುವುದು ಇದರಿಂದ ಬೇಸರವಾಗಿದೆ ಎಂದು ವ್ಯಾಪಾರಸ್ಥರು ನೋವು ತೋಡಿಕೊಂಡಿದ್ದಾರೆ.
ಪಟ್ಟಣದಲ್ಲಿದ್ದ ಮರಗಳನ್ನು ಕಡಿದಿರುವುದು ಕೋತಿಗಳ ಕಾಟ ಹೆಚ್ಚಾಗಲು ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ರಸ್ತೆ ಅಗಲೀಕರಣ ಎಂದು ಅಲ್ಲಲ್ಲಿ ಬೆಳೆದು ನಿಂತಿದ್ದ, ಮರಗಳನ್ನು ಕಡಿದಿರುವುದರಿಂದ ಕೋತಿಗಳಿಗೆ ಜಾಗವಿಲ್ಲದೆ ಪಟ್ಟಣದ ಮನೆಗಳ ಮೇಲೆ ಉಳಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಕೋತಿಗಳಿಗೆ ಆಹಾರವಿಲ್ಲದೆ ಅಂಗಡಿಗಳ ಬಳಿ ಬಂದು ಸಿಕ್ಕ ಸಿಕ್ಕ ಪದಾರ್ಥಗಳನ್ನು ಕೊಂಡೊಯ್ಯುತ್ತಿದೆ. ಕೋತಿಗಳ ಕಾಟವನ್ನು ಸಂಬಂಧಪಟ್ಟ ಅಧಿಕಾರಿಗಳು ತಪ್ಪಿಸಬೇಕು ಎಂದು ಅಂಗಡಿ ಮಾಲೀಕರು ಮನವಿ ಮಾಡಿದ್ದಾರೆ.