ಸುದ್ದಿಮೂಲವಾರ್ತೆ
ಕೊಪ್ಪಳ,ಅ.18:ರಾಜ್ಯದಲ್ಲಿ ತೀವ್ರ ಬರವಿದೆ. ವಿದ್ಯುತ್ ಸಮಸ್ಯೆ ಇದೆ. ಈ ಕುರಿತು ರಾಜ್ಯ ಸರಕಾರ ಗಂಭೀರವಾಗಿ ಬರ ನಿರ್ವಹಣೆ ಮಾಡುತ್ತಿಲ್ಲ ಎಂದು ವಿಧಾನಪರಿಷತ್ ಸದಸ್ಯೆ ಶ್ರೀಮತಿ ಹೇಮಲತಾ ನಾಯಕ ಹೇಳಿದರು.
ಇಂದು ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರಾಜ್ಯದಲ್ಲಿ ಬರಗಾಲವಿದೆ. ಇದರಿಂದ ರೈತರ ಜೀವನ ಶೋಚನೀಯವಿದೆ.ಅವರು ಕೇಳೋದು ನೀರು ಮತ್ತು ವಿದ್ಯುತ್.ರೈತರಿಗೆ ಸಮರ್ಪಕ ವಿದ್ಯುತ್ ನೀಡದೆ ಕಾವೇರಿ ನೀರನ್ನು ತಮಿಳುನಾಡಿಗೆ ಬಿಟ್ಟು ರಾಜ್ಯದ ರೈತರ ಜೀವವನ್ನು ರಾಜ್ಯ ಸರಕಾರ ಹಲಹಲ ಅನಿಸುತ್ತಿದೆ.ಇವರಿಗೆ ನಿಜವಾಗಿಯೂ ಜವಾಬ್ದಾರಿ ಇದೆಯಾ? ಇವರಿಗೆ ಮನುಷ್ಯರು ಅನ್ನುತ್ತಾರಾ?ರಾಜ್ಯ ಕಾಂಗ್ರೆಸ್ ಸರಕಾರ ಕೇಂದ್ರ ಸರಕಾರದ ವಿರುದ್ಧ ಬೆರಳು ತೋರಿಸುತ್ತಿದೆ ಎಂದು ಟೀಕಿಸಿದರು.
ರಾಜ್ಯದಲ್ಲಿ ಬಹಳಷ್ಟು ಭಷ್ಟ ರಾಜಕಾರಣ ನಡೆಯುತ್ತಿದೆ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಗುಡುಗಿದರು.
ಇದೇ ವೇಳೆಸಚಿವ ಶಿವಾನಂದ ಪಾಟೀಲ್ ಕಾಲಡಿಯಲ್ಲಿ ಹಣದ ವಿಡಿಯೋ ಬಹಿರಂಗವಾಗಿದ್ದುಸಚಿವರು ಈ ರೀತಿ ನಡೆದುಕೊಂಡಿರೋದು ನಮ್ಮ ಸಂಸ್ಕ್ರತಿ, ಸಂಪ್ರದಾಯ ಅಲ್ಲ.ನಾವು ಭಾರತಿಯರು ಹಣವನ್ನು ಲಕ್ಷ್ಮಿ ಎಂದು ಭಾವಿಸುತ್ತೇವೆ ಮತ್ತು ಪೂಜೆ ಮಾಡುತ್ತೇವೆ.ಹಣವನ್ನ ಈ ರೀತಿ ಕಾಲ ಕೆಳಗೆ ಇಟ್ಕೊಂಡು ಕೂತಿರೋದು ನಿಜಕ್ಕ ಖಂಡಿನೀಯ.ಶಿವಾನಂದ ಪಾಟೀಲ್ ಈ ರೀತಿ ಮಾಡಬಾರದಿತ್ತು ಎಂದರು.
ಕಾರ್ಯಕ್ರಮದಲ್ಲಿ ಹಣ ತೂರುವದು ನಡೆಯತ್ತಾಯಿದ್ರೆ ಅಲ್ಲಿಂದ ಬೇರೆ ಕಡೆ ಬರಬೇಕಿತ್ತು.ನಾನು ವಿಡಿಯೋದಲ್ಲಿ ನೋಡಿದ್ದು ತುಂಬಾ ಬೇಜಾರಾಗಿದೆ.ಅವರು ಕೂತಿರೋದ ನೋಡಿದ್ರೆ ಇದು ಅವರ ಅಹಂಕಾರವನ್ನ ತೋರಿಸುತ್ತದೆ.ಹತ್ತು ಪೈಸೆ ಬಿದ್ರು ಕಣ್ಣಿಗೆ ಒತ್ಕೊಂಡು ಜೇಬಲ್ಲಿ ಹಾಕಿಕೊಳ್ತೇವೆ. ಅಂತಹ ಲಕ್ಷ್ಮಿಯನ್ನು ಕಾಲ ಕೆಳಗೆ ಇಟ್ಕೊಂಡು ಕೂತಿರೋದು ಬೇಸರದ ಸಂಗತಿಯಾಗಿದೆ.ಆ ದೃಶ್ಯವನ್ನು ನೋಡಿದ್ರೆ ಎಂತಹವರಿಗಾದ್ರು ಇವರ ದುಡ್ಡಿನ ದೌಲತ್ತಿನ ಮನಸ್ಥಿತಿ ಗೊತ್ತಾಗುತ್ತದೆಹಣವನ್ನ ಕಾಲಕಸದಂತೆ ಕಾಣಬಾರದು, ರೈತರ ಬಗ್ಗೆಯೂ ಇತ್ತೀಚಿಗೆ ಉಡಾಫೆಯಾಗಿ ಹೇಳಿಕೆ ಕೊಟ್ಟಿದ್ದರು ಎಂದು ಎಂಎಲ್ಸಿ ಹೇಮಲತಾ ನಾಯಕ ಹೇಳಿದರು.