ಸುದ್ದಿಮೂಲ ವಾರ್ತೆ
ಬೆಂಗಳೂರು, ಅ.19: ಜರ್ಮನಿಯ ಸೌರಶಕ್ತಿ (ಪರಿವರ್ತಕ) ವಿಭಾಗದ ಪ್ರಮುಖ ಸಂಸ್ಥೆ ಎನಿಸಿಕೊಂಡಿರುವ ಎಸ್ಎಂಎ ಕೌಶಲ ಕೇಂದ್ರಕ್ಕೆ ಚಾಲನೆ ನೀಡಿದೆ. ರಾಜ್ಯದ ಅದರಲ್ಲೂ ಬೆಂಗಳೂರಿನ ಯುವ ಕೌಶಲ್ಯಯುತ ತಂತ್ರಜ್ಷರು ಹಾಗೂ ಅನುಭವಿಗಳಿಗೆ ವೇದಿಕೆ ಒದಗಿಸಬಲ್ಲ ಮತ್ತು ಸಾಕಷ್ಟು ಉದ್ಯೋಗಾವಕಾಶ ಕಲ್ಪಿಸಬಲ್ಲ ಈ ಕೇಂದ್ರವು ಭವಿಷ್ಯದಲ್ಲಿ ವಿದ್ಯುತ್ಚಾಲಿತ ವಾಹನಗಳ(ಇವಿ) ಚಾರ್ಜಿಂಗ್ ಕ್ಷೇತ್ರವನ್ನೂ ಪ್ರವೇಶಿಸುವ ಎಲ್ಲ ಅವಕಾಶಗಳ ಲಾಭ ಪಡೆಯಲಿದ್ದು ಕೈಗಾರಿಕೆಗಳಿಗೆ ಸೌರಶಕ್ತಿ ಒದಗಿಸುವ ಸೌರ ವಿದ್ಯುತ್ ಗ್ರಿಡ್ಗಳನ್ನು ಆರಂಭಿಸುವ ಉದ್ದೇಶವನ್ನೂ ಹೊಂದಿದೆ. ಬೆಂಗಳೂರು ಕೇಂದ್ರವು ಜಾಗತಿಕ ಹಬ್ ಆಗಿಯೂ ಕಾರ್ಯನಿರ್ವಹಿಸಲಿದೆ.
ಬೆಂಗಳೂರಿನ ಮಾನ್ಯತಾ ಟೆಕ್ಪಾರ್ಕ್ನಲ್ಲಿ ಬುಧವಾರ ಎಸ್ಎಂಎ ಸೋಲಾರ್ ಬುಧವಾರ ಉದ್ಘಾಟನೆಗೊಂಡಿದ್ದು ಜಾಗತಿಕ ಕೌಶಲ ಕೇಂದ್ರವಾಗಿ ರೂಪುಗೊಳ್ಳಲಿದೆ. ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಿನ ಭವಿಷ್ಯದ ಸೌರಶಕ್ತಿ ಸರಬರಾಜು ವ್ಯವಸ್ಥೆಯಾಗಿ ರೂಪುಗೊಳ್ಳುವ ಗುರಿಯೊಂದಿಗೆ ಸ್ಥಳೀಯವಾಗಿ ಲಭ್ಯವಿರುವ ತಜ್ಞರು, ಕೌಶಲ್ಯಯುತ ಮಾನ ಸಂಪನ್ಮೂಲವನ್ನು ಬಳಸಿಕೊಂಡು ಎಲ್ಲ ಸಾಧ್ಯತೆಗಳಿಗೆ ತೆರೆದುಕೊಳ್ಳುವ ಈ ಎಸ್ಎಂಎ ಕೌಶಲ ಕೇಂದ್ರವು ಕರ್ನಾಟಕ ರಾಜ್ಯ ರ್ಕಾರದೊಂದಿಗೆ ಸಮನ್ವತೆಯೊಂದಿಗೆ ಕಾರ್ಯನಿರ್ವಹಿಸಲಿದೆ.
ಈಗಾಗಲೇ ದೇಶದಲ್ಲಿ ಕಳೆದ 13 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಜರ್ಮನ್ ಮೂಲದ ಎಸ್ಎಂಎ ಮುಂಬಯಿ ಕೇಂದ್ರ ಕಚೇರಿ ಹೊಂದಿದ್ದು ಪಂಜಾಬ್ನಲ್ಲೂ ತನ್ನ ಕರ್ಯಾಚರಣೆ ನಡೆಸುತ್ತಿದೆ. ಬೆಂಗಳೂರಿನಲ್ಲಿ ಲಭ್ಯವಿರುವ ಕೌಶಲ್ಯ, ಜ್ಞಾನ ಹಾಗೂ ಅನುಭವಿ ಮಾನವ ಸಂಪನ್ಮೂಲಗಳು ಜಾಗತಿಕ ಮಟ್ಟದ್ದಾಗಿದ್ದು ಬೆಂಗಳೂರನ್ನು ಆಯ್ಕೆ ಮಾಡಲು ಪ್ರಮುಖ ಕಾರಣ ಎಂದು ಎಸ್ಎಂಎನ ಕೈಗಾರಿಕಾ ವಿಭಾಗದ ಮುಖ್ಯಸ್ಥ (ಹೆಡ್ ಇಂಡಸ್ಟ್ರಿ ಸೊಲ್ಯೂಷನ್ಸ್) ಹರಿರಾಂ ಪ್ರಭಾಕರನ್ ತಿಳಿಸಿದರು.
ಉದ್ಯೋಗಾವಕಾಶ ಸೃಜನೆಯಲ್ಲಿ ಶೀಘ್ರದಲ್ಲೇ ಶೇ 50ರಷ್ಟು ಬೆಳವಣಿಗೆ ಸಾಧಿಸಲಾಗುವುದು ಎಂದು ವಿಶ್ವಾಸ ವ್ಯಕ್ತಮಾಡಿದ ಅವರು ರ್ನಾಟಕ ರಾಜ್ಯ ಸರ್ಕಾರದಿಂದ ಎಲ್ಲ ಪ್ರೋತ್ಸಾಹ ಮತ್ತು ಬೆಂಬಲವನ್ನು ಪಡೆಯುವ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳೊಂದಿಗೆ ಮಾತುಕತೆ ನಡೆಸಿ ಸಮನ್ವಯ ಸಾಧಿಸಲಾಗುವುದು ಎಂದು ಹೇಳಿದರು.
ಕರ್ನಾಟಕದಲ್ಲಿ ಯಶಸ್ವಿ ಮತ್ತು ಪರಿಣಾಮಕಾರಿ ಕರ್ಯಾಚರಣೆಯ ದೀರ್ಘಾವಧಿ ಗುರಿ ಹೊಂದಲಾಗಿದ್ದು ವಿಶ್ವವಿದ್ಯಾಲಯಗಳಲ್ಲೂ ಸಂಬಂಧಿಸಿದ ತಂತ್ರಜ್ಞಾನ ಅಭಿವೃದ್ಧಿ ಮತ್ತು ಸಂಶೋಧನೆಗೆ ವೇದಿಕೆ ಕಲ್ಪಿಸಲಾಗುವುದು.
ಜರ್ಮನಿಯಲ್ಲಿ ಸೌರಶಕ್ತಿ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಎಸ್ಎಂಎ ಸಂಪರ್ಕ ಘಟಕಗಳನ್ನು (ಕೈಗಾರಿಕೆ) ಪಿವಿ (ಸೌರ ಶಕ್ತಿ ವ್ಯವಸ್ಥೆ)ಯಾಗಿ ಬದಲಿಸುವ ಮತ್ತು ಪವನ ಶಕ್ತಿಯೊಂದಿಗೂ ಸಮೀಕರಿಸುವ ತಂತ್ರಾಂಶ (ಸಾಫ್ಟ್ವೇರ್) ಹಾಗೂ ಯಂತ್ರಾಂಶ (ಹಾರ್ಡ್ವೇರ್) ಎರಡನ್ನೂ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮಹತ್ತರ ಭೂಮಿಕೆ ನರ್ವಹಿಸಲಿದೆ ಎಂದು ಹರಿರಾಂ ವಿವರಿಸಿದರು.
ಎಸ್ಎಂಎ ಗ್ರಿಡ್ ಇಂಟಿಗ್ರೇಷನ್ (ಪ್ರಸ್ತುತ ವಿದ್ಯುತ್/ಇಂಧನ ವ್ಯವಸ್ಥೆಯನ್ನು ಹೊಸ ಪೀಳಿಗೆಯ ವ್ಯವಸ್ಥೆಯಾಗಿ ಬದಲಿಸುವುದು)ನಲ್ಲಿ ಮೊದಲಿಗನೆನಿಸಿದ್ದು ಇವುಗಳನ್ನು ಬಳಕೆದಾರರ ಜಾಲಕ್ಕೆ ಸಂಪರ್ಕ ಮಾಡುವ ನಿಟ್ಟಿನಲ್ಲಿ ಆದ್ಯತೆ ನೀಡಲಿದೆ. ಸೋಲಾರ್ ಪಿವಿ ಇನ್ವರ್ಟ್ಗಳು, ಇಂಧನ ಸಂಗ್ರಹ ಹಾಗೂ ಇಂಧನ ಇಲೆಕ್ಟ್ರಾನಿಕ್ಸ್ನಲ್ಲಿ ವಿಶ್ವದಲ್ಲೇ ಅಗ್ರ ಸಂಸ್ಥೆಯಾಗಿರುವ ಎಸ್ಎಂಎ ನವೀಕರಿಸಬಹುದಾದ ಇಂಧನ ವಿಭಾಗದಲ್ಲಿ ಬೆಂಗಳೂರಿನ ಕೇಂದ್ರವನ್ನು ಜಾಗತಿಕ ಕರ್ಯಾಚರಣೆ ಕೇಂದ್ರವಾಗಿಯೂ ರೂಪಿಸುವ ನಿಟ್ಟಿನಲ್ಲಿ ಮುಂದಡಿ ಇಡಲಿದೆ. ಜೊತೆಗೆ ಇದೀಗ ಭಾರೀ ಬೇಡಿಕೆ ಸೃಷ್ಟಿಸುತ್ತಿರುವ ಇವಿ ಕ್ಷೇತ್ರಕ್ಕೂ ಕೊಡುಗೆ ನೀಡುವ ಉದ್ದೇಶ ಹೊಂದಿರುವುದಾಗಿ ಹರಿರಾಂ ಪ್ರಭಾಕರನ್ ಮತ್ತು ಬೆಂಗಳೂರು ಕೇಂದ್ರದ ಮುಖ್ಯಸ್ಥೆಅಮಿತಾ ಬಗ್ಗಾ ವಿವರ ಒದಗಿಸಿದರು.