ಸುದ್ದಿಮೂಲ ವಾರ್ತೆ
ಬೆಂಗಳೂರು,ಅ.20:ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ಇಸ್ರೋ ಮಹತ್ವಾಕಾಂಕ್ಷೆಯ ಗಗನಯಾನ ಯೋಜನೆಯ ಪರೀಕ್ಷಾರ್ಥ ಹಾರಾಟವನ್ನು ಇಂದಿನಿಂದ ಪ್ರಾರಂಭಿಸಲಿದ್ದು, ಶನಿವಾರ ಮೊದಲ ಪ್ರಯೋಗ ನಡೆಯಲಿದೆ.
ಇಸ್ರೋ, ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳಿಗ್ಗೆ 8ಕ್ಕೆ ಪರೀಕ್ಷಾ ವಾಹಕದ ಉಡಾವಣೆ ಮಾಡಲಿದೆ. ಈ ಮೂಲಕ ಮಾನವ ರಹಿತ ಹಾರಾಟದ ಪರೀಕ್ಷಾರ್ಥ ಪ್ರಯೋಗ ಪ್ರಾರಂಭಿಸಲಿದೆ. ಮೊದಲ ಪರೀಕ್ಷಾರ್ಥ ಹಾರಾಟದ ರಾಕೆಟ್ಗೆ ಟೆಸ್ಟ್ ವೆಹಿಕಲ್ ಅಬಾರ್ಟ್ ಮಿಷನ್-1 ಎಂದು ಹೆಸರಿಡಲಾಗಿದೆ. ಇದು ಏಕ ಹಂತದ ದ್ರವ ರಾಕೆಟ್ ಆಗಿದೆ.
ಶನಿವಾರ ಬೆಳಗ್ಗೆ 7.30ರಿಂದ ಗಗನಯಾನ ಮಾನವ ರಹಿತ ಹಾರಾಟದ ಪರೀಕ್ಷಾರ್ಥ ಪ್ರಯೋಗದ ನೇರಪ್ರಸಾರವನ್ನು ವೀಕ್ಷಿಸಬಹುದಾಗಿದೆ. ನೇರಪ್ರಸಾರ ವೀಕ್ಷಿಸಲು ಇಸ್ರೋ ಅಧಿಕೃತ ವೆಬ್ಸೈಟ್: http://isro.gov.in ಲಿಂಕ್ ಬಳಸಿಕೊಳ್ಳಬಹುದು.