ಸುದ್ದಿಮೂಲ ವಾರ್ತೆ
ಚಿಂತಾಮಣಿ, ಅ. 21 : ತಾಲ್ಲೂಕಿನ ಕೈವಾರ ಗ್ರಾಮದಲ್ಲಿನ ಅನಧಿಕೃತವಾಗಿ ನಡೆಸಲಾಗುತ್ತಿರುವ ಲ್ಯಾಬ್ ಗಳಿಗೆ ತಾಲೂಕು ಆರೋಗ್ಯ ಅಧಿಕಾರಿ ಡಾ. ರಾಮಚಂದ್ರರೆಡ್ಡಿ ಮತ್ತು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಕೆ.ಪಿ.ಎಂ.ಇ ಅಡಿಯಲ್ಲಿನ ನೋಂದಣಿ ಆಗದೆ ಇರುವುದರ ಬಗ್ಗೆ ದಾಖಲಾತಿಗಳನ್ನು ಪರಿಶೀಲನೆ ಮಾಡಿ ನೋಂದಣಿ ಆಗದೆ ಇರುವಂತಹ ಲ್ಯಾಬ್ ಗಳಾದ ಗಮನಿ ,ಯೋಗಿ ನಾರಾಯಣ ಲ್ಯಾಬ್, ಪಿ . ಆರ್ .ಡಯಾಗ್ನಿಕ್ ಸೆಂಟರ್ ಹಾಗೂ ಆನಂದ್ ಲ್ಯಾಬ್ ಗಳ ವ್ಯವಸ್ಥಾಪಕರುಗಳಿಗೆ ಕೆ.ಪಿ.ಎಂ.ಸಿ ಅಡಿಯಲ್ಲಿ ನೋಂದಣಿ ಮಾಡದೆ ಇರುವ ಕುರಿತು ನೋಟಿಸ್ ಜಾರಿ ಮಾಡಿ ಮುಚ್ಚಿಸಲಾಯಿತು.
ಕೆ.ಪಿ.ಎಮ್.ಇ ಅಡಿಯಲ್ಲಿ ನೋಂದಣಿ ಆಗುವರೆಗೂ ಯಾವುದೇ ಕಾರಣಕ್ಕೂ ಲ್ಯಾಬ್ ಗಳನ್ನು ನಡೆಸಬಾರದು ಎಂದು ತಾಕೀತು ಮಾಡಿ ನೋಟಿಸು ಜಾರಿ ಮಾಡಲಾಯಿತು. ಇದನ್ನು ಉಲ್ಲಂಘಿಸಿದರೆ ಮರು ಭೇಟಿ ನೀಡಿದಾಗ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.