ಸುದ್ದಿಮೂಲ ವಾರ್ತೆ
ಮೈಸೂರು, ಅ. 22 : ದಸರಾದ ಅಂಗವಾಗಿ ನಾಲ್ಕು ವರ್ಷದ ನಂತರ ಮೈಸೂರಿನಲ್ಲಿ ಭಾನುವಾರ ವೈಮಾನಿಕ ಪ್ರದರ್ಶನ ನಡೆಯಿತು. ಜಿಲ್ಲಾಡಳಿತ ಎರಡು ದಿನದ ವೈಮಾನಿಕ ಪ್ರದರ್ಶನವನ್ನು ಹಮ್ಮಿಕೊಂಡಿತ್ತು.
ನಗರದ ಆಗಸದಲ್ಲಿ ಬಗೆಬಗೆಯ ಲೋಹ ದ ಹಕ್ಕಿಗಳು ಹಾರಾಟ ನಡೆಸಿದವು.
ಬೆಂಗಳೂರಿನ ವಾಯುಪಡೆಯ ಸೂರ್ಯಕಿರಣ್ ಏರೋ ಬ್ಯಾಟಿಕ್ ತಂಡದವರು ಒಂದು ಗಂಟೆ ಕಾಲ ವೈಮಾನಿಕ ಪ್ರದರ್ಶನವನ್ನು ನಡೆಸಿಕೊಟ್ಟರು.
ಗಂಟೆಗೆ 200 ರಿಂದ 300 ಕಿ.ಮಿಗೂ ಅಧಿಕ ವೇಗದಲ್ಲಿ ಸಂಚರಿಸುವ ಸೂರ್ಯ ಕಿರಣ್ನ ವಿಮಾನಗಳು ಹಾರಿದವು. ಆಕಾಶದಲ್ಲಿ ಭಾರೀ ಶಬ್ದದೊಂದಿಗೆ ವಿಮಾನ ಹಾರಿ ಹೋದಾಗ ಮೈಸೂರಿನ ಬನ್ನಿಮಂಟಪದಲ್ಲಿ ಸೇರಿದ್ದ 30ಸಾವಿರಕ್ಕೂ ಅಧಿಕ ಮಂದಿ ಹೋ ಎನ್ನುವ ಉದ್ಘರಿಸಿದರು.
ಗುಂಪು ಗುಂಪಾಯಿ ಯುದ್ದ ವಿಮಾನಗಳು ಆಗಮಿಸಿದವು. ಇದೇ ರೀತಿ ಹದಿನೈದು ನಿಮಿಷಕ್ಕೆ ಒಂದರಂತೆ ವಿಮಾನಗಳು ಆಗಮಿಸಿದಾಗ ಜನ ಕುತೂಹಲದಿಂದಲೇ ಆಗಸದತ್ತ ದಿಟ್ಟಿಸಿ ನೋಡಿ ಖುಷಿಯಾದರು. ಮಕ್ಕಳು, ಯುವಕರು, ಹಿರಿಯರು, ಮಹಿಳೆಯರು ಸೇರಿ ಎಲ್ಲಾ ವಯೋಮಾನದವರು ವೈಮಾನಿಕ ಪ್ರದರ್ಶನ ವೀಕ್ಷಣೆಗೆ ಸೇರಿದ್ದರು.
ವಿಮಾನಗಳು ಆಗಮಿಸಿದಾಗ ವೇದಿಕೆಯಲ್ಲಿದ್ದ ಸೇನೆಯ ಅಧಿಕಾರಿಗಳು ಹಾಗೂ ವೀಕ್ಷಣೆ ವಿವರಣೆಕಾರರು ವಿಮಾನದ ಕುರಿತು ಮಾಹಿತಿಯನ್ನು ನೀಡುತ್ತಿದ್ದರು.
ಮೊದಲ ದಿನ ಪ್ರಾಯೋಗಿಕ ಪ್ರದರ್ಶನ ಯಶಸ್ವಿಯಾಗಿ ಮುಗಿದಿದ್ದು, ಸೋಮವಾರ ಮುಖ್ಯ ಪ್ರದರ್ಶನವಿದೆ. ಅಂದು ಸಂಜೆ 4 ಗಂಟೆಗೆ ವೈಮಾನಿಕ ಪ್ರದರ್ಶನವಿದ್ದು. ಇದಕ್ಕೆ ಪಾಸ್ ಬೇಕು. ಅಂದರೆ ಸೋಮವಾರ ಸಂಜೆ 7ರಿಂದ ದಸರಾ ಪಂಜಿನ ಕವಾಯತು ಇರಲಿದೆ. ವೈಮಾನಿಕ ಪ್ರದರ್ಶನ ವೀಕ್ಷಣೆಗೆ ಪಾಸ್ ತಂದವರು ಪಂಜಿನ ಕವಾಯತನ್ನು ಅದೇ ಪಾಸ್ನಲ್ಲಿ ವೀಕ್ಷಿಸಲು ಅವಕಾಶ ಮಾಡಿಕೊಡಲಾಗಿದೆ.
ಮೈಸೂರು ನಗರ ಪೊಲೀಸ್ ಆಯುಕ್ತರ ಕಚೇರಿಯಿಂದ ಪಡೆದ ಪಾಸ್ ಹಾಜರುಪಡಿಸಿದವರು ಸೋಮವಾರದ ಏರ್ ಶೋ ಹಾಗೂ ಪಂಜಿನ ಕವಾಯತು ವೀಕ್ಷಣೆಗೆ ಅವಕಾಶವಿರಲಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.