ಸುದ್ದಿಮೂಲ ವಾರ್ತೆ
ಕೊಳ್ಳೇಗಾಲ,ಅ.22:ಹನೂರು ಮತ್ತು ಕೊಳ್ಳೇಗಾಲ ಮಧ್ಯ ಇರುವ ಬಸ್ ನಿಲ್ದಾಣದ ಬಳಿ ಇರುವ ಪಿ.ಜಿ.ಪಾಳ್ಯ ಗ್ರಾಮದ ಮುಖ್ಯ ರಸ್ತೆಯಲ್ಲಿ ಅಕ್ರಮವಾಗಿ ಕಾರಿನಲ್ಲಿ ಆನೆ ದಂತಗಳನ್ನು ಸಾಗಣೆ ಮಾಡುತ್ತಿದ್ದ ವೇಳೆ ಮೂವರನ್ನು ನಗರದ ಅರಣ್ಯ ಸಂಚಾರಿ ದಳದ ಪೊಲೀಸರು ಭಾನುವಾರ ಮೂವರನ್ನು ಬಂಧಿಸಿದ್ದಾರೆ.
ಚಾಮರಾಜನಗರ ತಾಲೂಕಿನ ಅಂಕನಶೆಟ್ಟಿಪುರ ಗ್ರಾಮದ ಶಿವಮೂರ್ತಿ(57) ತಮಿಳುನಾಡಿನ ತಿರುಪೂರು ಜಿಲ್ಲೆಯ ತಿರುವಂತಪುರಂ ಗ್ರಾಮದ ಶಿವಕುಮಾರ್ (44), ಅಂಡಿಪಾಳ್ಯಂ ಚಿನ್ನಕವುಂಡನ್ ಅಂತೋಣಿ(46) ಬಂಧಿತ ಆರೋಪಿಗಳು. ಇವರುಗಳಿಂದ ಆನೆಯ ಎರಡು ದಂತಗಳು ಮತ್ತು ಒಂದು ಕಾರು ವಶಪಡಿಸಿಕೊಂಡಿದ್ದಾರೆ..
ಹನೂರು ತಾಲ್ಲೂಕಿನ ಪಿ.ಜಿ ಪಾಳ್ಯ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಕಾರಿನಲ್ಲಿ ಆನೆಯ ದಂತಗಳನ್ನು ಸಾಗಣೆ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಅರಣ್ಯ ಸಂಚಾರಿ ದಳದ ಪಿಎಸ್ಐ ವಿಜಯರಾಜ್ ಹಾಗೂ ಸಿಬಂದಿಗಳು ದಾಳಿ ನಡೆಸಿ ಆರೋಪಿಗಳನ್ನು ಆನೆ ದಂತಗಳ ಸಮೇತ ಬಂಧಿಸಿದ್ದಾರೆ.
ಈ ಸಂಬಂಧ ಠಾಣೆಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ದಾಳಿಯಲ್ಲಿ ಸಿಬ್ಬಂದಿಗಳಾದ ಶಂಕರ್.ಕೆ, ಬಸವರಾಜು.ಎಂ, ರಾಮಚಂದ್ರ.ಎಂ, ಸ್ವಾಮಿ.ಪಿ, ಲತಾ.ಕೆ, ಬಸವರಾಜು, ಚಾಲಕ ಪ್ರಭಾಕರ್ ಭಾಗಿಯಾಗಿದ್ದರು.